ಗಂಡನ ಕಾಲು ಕತ್ತರಿಸಿ ಪತ್ನಿ ಕೈಗೆ ಕೊಟ್ಟ ಆಸ್ಪತ್ರೆ ಸಿಬ್ಬಂದಿ!!

ಆಸ್ಪತ್ರೆಯವರ ನಿರ್ಲಕ್ಷ ಒಂದೋ ಎರಡೋ. ಪದೇ ಪದೇ ಸುದ್ದಿಯಾಗುತ್ತಿದೆ ಎಡವಟ್ಟುಗಳು. ಅದರಲ್ಲೂ ಮಂಡ್ಯದ ಮಿಮ್ಸ್ ಆಸ್ಪತ್ರೆ ಒಂದಲ್ಲ ಒಂದು ವಿಚಾರಕ್ಕೆ ವಿವಾದ ಉಂಟು ಮಾಡುತ್ತಲೇ ಇದ್ದು, ಇದೀಗ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ ಅದನ್ನು ಮಣ್ಣು ಮಾಡುವಂತೆ ಪತ್ನಿ ಕೈಗೆ ಆಸ್ಪತ್ರೆ ಸಿಬ್ಬಂದಿ ಕೊಟ್ಟಿದ್ದು, ಗಂಡನ ಕಾಲು ಹಿಡಿದು ವೃದ್ಧ ಭಾಗ್ಯಮ್ಮ ಕಣ್ಣೀರು ಹಾಕುವ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ವೃದ್ಧಿ ಭಾಗ್ಯಮ್ಮರ ಪತಿ ಪ್ರಕಾಶ್, ಗ್ಯಾಂಗ್ರೀನ್ ಖಾಯಿಲೆಯಿಂದ ಒಳಲುತ್ತಿದ್ದರು. ಹೀಗಾಗಿ ಪ್ರಕಾಶ್ ಅವರಿಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮೂರ್ನಾಲ್ಕು ದಿನಗಳ ಚಿಕಿತ್ಸೆ ಬಳಿಕ ಇಂದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ವೇಳೆ ಮಿಮ್ಸ್ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಪ್ರಕಾಶ್ ಕಾಲು ಕತ್ತರಿಸಿದ್ದಾರೆ. ಬಳಿಕ ಪತ್ನಿಗೆ ಪತಿಯ ಕತ್ತರಿಸಿದ ಕಾಲು ನೀಡಿ ಅದನ್ನು ಹೂಳುವಂತೆ ತಿಳಿಸಿದ್ದಾರೆ.

ಗಂಡನ ಕಾಲನ್ನು ಮಣ್ಣು ಮಾಡಲು ಆಸ್ಪತ್ರೆಯ ಸಿಬ್ಬಂದಿ ಸಾವಿರಾರು ರೂಪಾಯಿ ಕೇಳಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದು, ಆಸ್ಪತ್ರೆಯ ಸಿಬ್ಬಂದಿಯ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ನೋಂದ ಮನಸ್ಸಿಗೆ ಮತ್ತಷ್ಟು ಘಾಸಿ ಮಾಡಿದೆ ಆಸ್ಪತ್ರೆ..

error: Content is protected !!
Scroll to Top
%d bloggers like this: