ಹಿಂದೂಗಳ ಪವಿತ್ರ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಬಂದ ತಾರಾ ಜೋಡಿ ಆಲಿಯಾ – ರಣಬೀರ್ | ದಾರಿಯಲ್ಲೇ ತಡೆದ ಬಜರಂಗದಳ ಕಾರ್ಯಕರ್ತರು… ಕಾರಣ…

ಉಜ್ಜಯಿನಿ: ಬಾಲಿವುಡ್ ನ ಮೋಸ್ಟ್ ಫೇಮಸ್ ಜೋಡಿ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಇತ್ತೀಚೆಗೆ ಮದುವೆಯಾಗಿದ್ದಾರೆ. ಆಲಿಯಾ ಗರ್ಭಿಣಿ ಕೂಡಾ ಆಗಿ ತಮ್ಮ ತಮ್ಮ ಕೆಲಸಗಳಲ್ಲಿ ಬಿಜಿಯಾಗಿರುವುದು ಹಳೆಯ ಮಾತು. ಹೊಸ ಸುದ್ದಿಯೇನೆಂದರೆ, ಗಂಡ ಹೆಂಡತಿ ಅಭಿನಯದ ‘ಬ್ರಹ್ಮಸೂತ್ರ’ ಸಿನಿಮಾದ ತಂಡ ಮಧ್ಯಪ್ರದೇಶದ ಉಜ್ಜಯಿನಿಯ ಪುರಾಣ ಪ್ರಸಿದ್ಧ ಮಹಾಕಾಳ ದೇವಾಲಯಕ್ಕೆ ಭೇಟಿ ನೀಡಿದೆ. ಆದರೆ ಇವರನ್ನು ಪ್ರವೇಶಿಸದಂತೆ ಬಜರಂಗದಳ ಕಾರ್ಯಕರ್ತರು ತಡೆದ ಪ್ರಕರಣ ಮಂಗಳವಾರ ರಾತ್ರಿ ನಡೆದಿದೆ.

ಗೋಮಾಂಸ ಭಕ್ಷಣೆ ಬಗೆಗೆ ಈ ಜೋಡಿ ನೀಡಿದೆ ಎನ್ನಲಾದ ಹೇಳಿಕೆ ಮತ್ತು “ಬ್ರಹ್ಮಸೂತ್ರ” ಚಿತ್ರ ವೀಕ್ಷಣೆಗೆ ಸಂಬಂಧಿಸಿದಂತೆ ಬಜರಂಗದಳ ಕಾರ್ಯಕರ್ತರು ಈ ಜೋಡಿ ದೇವಾಲಯ ಪ್ರವೇಶಿಸದಂತೆ ತಡೆದರು ಎನ್ನಲಾಗಿದೆ.

ಹಾಗೆನೇ ಪೊಲೀಸರು ಈ ವಿಷಯವನ್ನು ದೃಢಪಡಿಸಿದ್ದು, ದೇವಾಲಯ ಆವರಣದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ಕೂಡಾ ಮಾಡಿದ್ದಾರೆ. ಅಷ್ಟಾಗಿಯೂ ಲಾಠಿ ಪ್ರಹಾರ ಮಾಡಿದರೂ, ಪ್ರತಿಭಟನಾಕಾರರು ರಣಬೀರ್ ಮತ್ತು ಆಲಿಯಾ ಜೋಡಿ ದೇವಾಲಯ ಆವರಣ ಪ್ರವೇಶಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೂ ಅವಕಾಶ ನೀಡಲಿಲ್ಲ ಎಂದು ವರದಿಯಾಗಿದೆ.

ಈ ಬಾಲಿವುಡ್ ಜೋಡಿ ದೇವಾಲಯ ದರ್ಶನಕ್ಕಾಗಿ ಆಗಮಿಸಿದಾಗ ಬಜರಂಗ ದಳ ಕಾರ್ಯಕರ್ತರು ಜೈ ಶ್ರೀರಾಂ ಘೋಷಣೆ ಕೂಗಿದರು. ಮಾಂಸಾಹಾರದಲ್ಲಿ ಮಟನ್, ಚಿಕನ್, ಗೋಮಾಂಸ ತನಗೆ ಅತ್ಯಂತ ಪ್ರಿಯ ಎಂದು ಕೆಲ ದಿನಗಳ ಹಿಂದೆ ರಣಬೀರ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರು ಈ ಪವಿತ್ರ ದೇವಾಲಯ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಬಜರಂಗದಳ ನಾಯಕ ಅಂಕಿತ್ ಚೌಬೆ ಹೇಳಿದ್ದಾರೆ.

ತಮ್ಮ ಬ್ರಹ್ಮಸೂತ್ರ ಚಿತ್ರವನ್ನು ನೋಡಲು ಬಯಸುವವರು ನೋಡಲಿ; ಆಸಕ್ತಿ ಇಲ್ಲದವರು ನೋಡದಿದ್ದರೆ ಬೇಡ” ಎಂದೂ ಅಲಿಯಾಭಟ್ ಕೂಡಾ ಹೇಳಿಕೆ ನೀಡಿದ್ದು ಕೂಡಾ ವಿವಾದಕ್ಕೆ ದಾರಿ ಮಾಡಿ ಕೊಟ್ಟಿದೆ. ಈ ಪ್ರತಿಭಟನೆಯ ನಡುವೆಯೇ ಬ್ರಹ್ಮಸೂತ್ರ ಚಿತ್ರ ನಿರ್ದೇಶಕ ಅಯಾನ್ ಮುಖರ್ಜಿ ದೇವಾಲಯದಲ್ಲಿ ದರ್ಶನ ಪಡೆದರು.

Leave A Reply

Your email address will not be published.