ಇನ್ನು ಮುಂದೆ ಶವಗಳನ್ನು ಹೂಳಲು ಶವಪೆಟ್ಟಿಗೆ ಬಳಸದಂತೆ ಚರ್ಚ್ ನಿರ್ಧಾರ

ಶವಗಳನ್ನು ಇನ್ನು ಮುಂದೆ ಶವಪೆಟ್ಟಿಗೆಗಳ ಮೂಲಕ ಹೂಳುವ ವಿಧಾನಕ್ಕೆ ಕೇರಳದ ಚರ್ಚೊಂದು ನಿರ್ಧಾರ ಮಾಡಿದೆ. ಕೇರಳದ ಆಲಪ್ಪುಳ ಜಿಲ್ಲೆಯ ಅರ್ತುಂಕಲ್ ಎಂಬಲ್ಲಿ ಇರುವ ಸೈಂಟ್ ಜಾರ್ಜ್ ಚರ್ಚ್ ಇನ್ನು ಮುಂದೆ ಶವಗಳನ್ನು ಹೂಳಲು ಮರದಿಂದ ಸಿದ್ಧಗೊಳಿಸಿದ ಶವಪೆಟ್ಟಿಗೆ ಬಳಕೆಗೆ ವಿದಾಯ ಹೇಳಲು ನಿರ್ಧರಿಸಿದೆ.


Ad Widget

Ad Widget

ಇದರ ಬದಲಿಗೆ, ಹತ್ತಿಯಿಂದ ಸಿದ್ಧಗೊಳಿಸಿದ ಬಟ್ಟೆಯನ್ನು ಬಳಕೆ ಮಾಡಲು ‌ತೀರ್ಮಾನಿಸಲಾಗಿದೆ. ಈ ಹೊಸ ವ್ಯವಸ್ಥೆ, ಈ ತಿಂಗಳ 1ನೇ ತಾರೀಕಿನಿಂದಲೇ ಅಳವಡಿಸಿಕೊಳ್ಳಲಾಗಿದೆ.


Ad Widget

ಸದ್ಯದ ಪದ್ಧತಿಯಲ್ಲಿ ಹೂಳಲಾಗಿರುವ ಶವಗಳು ಕೊಳೆತು, ಮಣ್ಣಿಗೆ ಸೇರ್ಪಡೆಯಾಗಲು ಹೆಚ್ಚಿನ ಸಮಯ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಚರ್ಚ್ ಆಡಳಿತ ಮಂಡಳಿ ಮತ್ತು ಅದರ ವ್ಯಾಪ್ತಿಯ 949 ಕುಟುಂಬಗಳ ಜತೆಗೆ ಸಮಾಲೋಚನೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸದ್ಯದ ವ್ಯವಸ್ಥೆಯಲ್ಲಿ ಶವ ಹೂಳಲೂ ಸ್ಥಳ ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚರ್ಚ್‌ನ ಸಮಿತಿ ತಿಳಿಸಿದೆ.

error: Content is protected !!
Scroll to Top
%d bloggers like this: