Cervical Cancer : ಗರ್ಭಕಂಠದ ಕ್ಯಾನ್ಸರ್ | ಲಕ್ಷಣ, ಕಾರಣ, ತಡೆಗಟ್ಟುವಿಕೆ

‌ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ಸಮಸ್ಯೆ ಕಾಡುತ್ತಿದ್ದು, ಗರ್ಭಕೋಶದ ಕ್ಯಾನ್ಸರ್ ಕೂಡ ಕ್ಯಾನ್ಸರ್ ನ ಒಂದು ವಿಧವಾಗಿದೆ.
‌ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಈ ಕ್ಯಾನ್ಸರ್ ಗರ್ಭಕಂಠದ ಕೋಶಗಳ ಮೇಲೆ ಪರಿಣಾಮ ಬೀರುತ್ತವೆ.

ಈ ಗರ್ಭಕಂಠವು ಗರ್ಭಾಶಯದ ಕೆಳಗಿನ ಭಾಗವಾಗಿದ್ದು, ಅದು ಯೋನಿಯೊಂದಿಗೆ ಸಂಪರ್ಕ ಹೊಂದಿದೆ. ಗರ್ಭಕಂಠದ ಕ್ಯಾನ್ಸರ್ ಮಹಿಳೆಯರ ಗರ್ಭದಲ್ಲಿ ಜೀವಕೋಶಗಳನ್ನು ಹಾನಿಗೊಳಿಸುತ್ತದೆ.
ಅನೇಕ ವರದಿಗಳಲ್ಲಿ ಹ್ಯೂಮನ್ ಪ್ಯಾಪಿಲೋಮಾ ವೈರಸ್ ನ ವಿವಿಧ ರೀತಿಯ ತಳಿಗಳಿಂದ ಈ ಕ್ಯಾನ್ಸರ್​ ರೂಪವು ಹೆಚ್ಚಾಗಿ ಉಂಟಾಗುತ್ತದೆ ಎಂದು ತಿಳಿಸಲಾಗಿದೆ.

ಕ್ಯಾನ್ಸರ್ ಅನ್ನುವ ಕಾಯಿಲೆಯನ್ನು ಮೂಲದಲ್ಲೇ ಪತ್ತೆ ಮಾಡದೆ ಹೋದರೆ, ಅದರಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಿ
ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಹೆಚ್ಚಾಗಿದೆ. ಗರ್ಭಕಂಠದ ಕ್ಯಾನ್ಸರ್ ಅನ್ನು ಲಸಿಕೆ ಪಡೆಯುವುದರಿಂದ ತಡೆಗಟ್ಟಬಹುದು, 9-45 ವರ್ಷದವರೆಗಿನ ಮಹಿಳೆಯರಿಗೆ ಲಸಿಕೆ ಪಡೆಯುವಂತೆ ಸಿಡಿಸಿ ಸಲಹೆ ನೀಡಿದೆ.

ಮಹಿಳೆಯರ ಗರ್ಭಕೋಶದ ಕಂಠದ ಭಾಗದಲ್ಲಿ ಈ ಕ್ಯಾನ್ಸರ್‌ ಬೆಳೆಯುತ್ತದೆ. ಸಾಮಾನ್ಯವಾದ ರೋಗ ನಿರೋಧಕ ವ್ಯವಸ್ಥೆ ಹೊಂದಿರುವ ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್‌ ಬೆಳವಣಿಗೆಯಾಗಲು 15ರಿಂದ 20 ವರ್ಷ ಬೇಕಾಗುತ್ತದೆ. ಆದರೆ, ರೋಗ ನಿರೋಧಕ ಶಕ್ತಿ ದುರ್ಬಲ ಆಗಿರುವ ಮಹಿಳೆಯರಲ್ಲಿ 5ರಿಂದ 10 ವರ್ಷಗಳಲ್ಲಿ ಕ್ಯಾನ್ಸರ್‌ ಬೆಳೆಯುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ 2018ರಲ್ಲಿ ವಿಶ್ವದಾದ್ಯಂತ 5.70 ಲಕ್ಷ ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್‌ ಕಾಯಿಲೆ ಪತ್ತೆಯಾಗಿತ್ತು. ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ 15ರಿಂದ 44 ವರ್ಷ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಎರಡನೇ ಕ್ಯಾನ್ಸರ್ ಆಗಿದೆ.

ಗರ್ಭಕೋಶದ ಕ್ಯಾನ್ಸರ್ ಗೆ ಕಾರಣವೇನೆಂದು ತಿಳಿಯುವುದಾದರೆ:

ಮಹಿಳೆಯರ ಸಂತಾನೋತ್ಪತ್ತಿಯ ವ್ಯವಸ್ಥೆಯಲ್ಲಿ ಕಂಡುಬರುವಂತಹ ಸಾಮಾನ್ಯ ಕ್ಯಾನ್ಸರ್ ಇದಾಗಿದೆ. ಗರ್ಭಕೋಶದ ಕ್ಯಾನ್ಸರ್ ನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಲು ಯಾವುದೇ ಸ್ಕ್ರೀನಿಂಗ್ ಗಳು ಇಲ್ಲ.

ಋತುಬಂಧಕ್ಕೆ ಹತ್ತಿರವಾಗುತ್ತಿರುವಂತಹ ಗರ್ಭಕೋಶದಲ್ಲಿ ಊತವು ಕಾಣಿಸುವುದು. ಇದು 50-55ರ ಹರೆಯದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಗರ್ಭಕೋಶದ ಊತ. ಪಾಲಿಸಿಸ್ಟಿಕ್ ಒವೆರಿಯನ್ ಸಿಂಡ್ರೋಮ್ ಮತ್ತು ಗರ್ಭಧಾರಣೆ ವೇಳೆ ಕೂಡ ಗರ್ಭಕೋಶವು ಊದಿಕೊಳ್ಳಬಹುದು.

ಎಂಡೊಮೆಟ್ರಿಯಮ್ ಎನ್ನುವುದು ಗರ್ಭಕೋಶದ ಒಳಪದರವಾಗಿದ್ದು, ಈ ಎಂಡೊಮೆಟ್ರಿಯಮ್ ನ ಅಂಗಾಂಶಗಳು ಅಸಾಮಾನ್ಯವಾಗಿ ಬೆಳೆಯುವ ವೇಳೆ ಅದು ಎಂಟೊಮೆಟ್ರಿಯಮ್ ಕ್ಯಾನ್ಸರ್ ಉಂಟು ಮಾಡುವುದು. ಇದು ತುಂಬಾ ಅಪಾಯಕಾರಿ ಕ್ಯಾನ್ಸರ್ ಆಗಿದ್ದು, ಶಾಶ್ವತ ಬಂಜೆತನ ಉಂಟು ಮಾಡಬಹುದು. ಎಂಡೊಮೆಟ್ರಿಯಮ್ ಕ್ಯಾನ್ಸರ್ ನ್ನು ಗರ್ಭಕೋಶದ ಕ್ಯಾನ್ಸರ್ ಎಂದು ಕೂಡ ಕರೆಯುವರು.

ಋತುಚಕ್ರದ ಹೊರತಾಗಿ ರಕ್ತಸ್ರಾವವಾಗುತ್ತಲಿದ್ದರೆ ಅಥವಾ ಯೋನಿಯಿಂದ ರಕ್ತ ಹೊರತಾಗಿ ಯಾವುದೇ ರೀತಿಯ ದ್ರವವು ಬರುತ್ತಲಿದ್ದರೆ, ಆಗ ನೀವು ಇದು ಎಂಡೊಮೆಟ್ರಿಯಮ್ ಕ್ಯಾನ್ಸರ್ ನ ಲಕ್ಷಣವೆಂದು ತಿಳಿಯಬಹುದು.

‌ಇಂತಹ ಪರಿಸ್ಥಿತಿ ಎದುರಾದಾಗ ಪರೀಕ್ಷೆ ಮಾಡಿಸುವುದು ಅತ್ಯಗತ್ಯ ಇದರ ಹೊರತಾಗಿ ಋತುಚಕ್ರದ ಆವರ್ತನದಲ್ಲಿ ನಿರಂತರವಾಗಿ ಬದಲಾವಣೆ, ಋತುಬಂಧದ ಬಳಿಕವು ರಕ್ತಸ್ರಾವವಾಗುವುದು ಎಂಡೊಮೆಟ್ರಿಯಮ್ ಕ್ಯಾನ್ಸರ್ ನ ಕೆಲವು ಲಕ್ಷಣಗಳು. ಇಂತಹ ಯಾವುದೇ ಲಕ್ಷಣಗಳು ಕಂಡುಬಂದರೆ ಆಗ ನೀವು ತಕ್ಷಣವೇ ಹೋಗಿ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡುವುದು ಒಳಿತು.

ಗರ್ಭ ಕಂಠದ ಕ್ಯಾನ್ಸರ್ ಲಕ್ಷಣಗಳೇನು?
ಮುಟ್ಟಿನ ನಂತರ ಕೂಡ ಆಗಾಗ ಸ್ವಲ್ಪ ರಕ್ತ ಕಲೆ ಕಂಡು ಬರುವುದು, ಲೈಂಗಿಕ ಕ್ರಿಯೆ ಬಳಿಕ ರಕ್ತಸ್ರಾವ, ಬಿಳುಪು ಹೋಗುವುದು ಹೆಚ್ಚುವುದು, ಲೈಂಗಿಕ ಕ್ರಿಯೆ ವೇಳೆ ನೋವಾಗುವುದು, ಮೆನೋಪಾಸ್ ಆದ ಬಳಿಕ ಕೂಡ ರಕ್ತಸ್ರಾವವಾಗುವುದು, ಜನನೇಂದ್ರೀಯ ಭಾಗದಲ್ಲಿ ತುರಿಕೆ ಕಂಡು ಬರುವುದು, ತಲೆಸುತ್ತು, ಆಗಾಗ ಮೂತ್ರ ವಿಸರ್ಜನೆ, ಕೆಳಹೊಟ್ಟು ಉಬ್ಬುವುದು ಇವೆಲ್ಲಾ ಗರ್ಭಕಂಠ ಕ್ಯಾನ್ಸರ್‌ ಲಕ್ಷಣಗಳಾಗಿವೆ.

ಹೆಚ್‌ಐವಿ ಇರುವ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚು ಅಲ್ಲದೆ ಕೆಲವೊಮ್ಮೆ ಜೀವನಶೈಲಿ ಕೂಡ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ.

ಗರ್ಭಕಂಠದ ಕ್ಯಾನ್ಸರ್ ಬಗ್ಗೆ ತಿಳಿಯಬೇಕಾದ ವಿವರಗಳು:
ಸಾಮಾನ್ಯ ಪ್ಯಾಪ್ ಪರೀಕ್ಷೆಯ ಮೂಲಕ ಕ್ಯಾನ್ಸರ್ ಆಗುವ ಮೊದಲು ಅಸಹಜ ಗರ್ಭಕಂಠದ ಬದಲಾವಣೆಗಳನ್ನು ಕಂಡುಹಿಡಿಯಲು ಉತ್ತಮ ಮಾರ್ಗವಾಗಿದೆ. ಈ ಅಸಹಜ ಕೋಶಗಳ ಚಿಕಿತ್ಸೆಯು ಗರ್ಭಕಂಠದ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಗರ್ಭಕಂಠದ ಕ್ಯಾನ್ಸರ್ ಧೂಮಪಾನ ಮಾಡುವ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಸುಮಾರು ಎರಡು ಪಟ್ಟು ಹೆಚ್ಚಾಗಿದ್ದು, ಪ್ರತಿರಕ್ಷಣಾ ವ್ಯವಸ್ಥೆಯು ಕಡಿಮೆಯಾಗಿ ದೇಹವು HPV ಸೋಂಕು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು.

ಮೂತ್ರಕೋಶದಲ್ಲಿ ನೋವು ಅಥವಾ ಮೂತ್ರವಿಸರ್ಜನೆಯ ಸಮಯದಲ್ಲಿ ನೋವು ಗರ್ಭಕಂಠದ ಕ್ಯಾನ್ಸರ್ ನ ಮುಂದುವರಿದ ಭಾಗವಾಗಿರುತ್ತದೆ. ಗರ್ಭಕಂಠದ ಕ್ಯಾನ್ಸರ್ ಮೂತ್ರಕೋಶದ ತನಕ ವಿಸ್ತರಿಸಿದಾಗ ಈ ಲಕ್ಷಣ ಕಾಣಿಸಿಕೊಳ್ಳುತ್ತದೆ.

ಗರ್ಭಕಂಠದ ಕ್ಯಾನ್ಸರ್ ವಯಸ್ಸನ್ನು ಅವಲಂಬಿಸಿದೆ ಪ್ರತಿ ಮೂರು ವರ್ಷಗಳಿಗೊಮ್ಮೆ, 21 ಮತ್ತು 29 ವರ್ಷದೊಳಗಿನ ಮಹಿಳೆಯರಲ್ಲಿ ಪ್ಯಾಪ್ ಪರೀಕ್ಷೆಗಳನ್ನು ಮಾಡಬೇಕು. 30 ರಿಂದ 65 ವರ್ಷ ವಯಸ್ಸಿನ ಮಹಿಳೆಯರು ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ಯಾಪ್ ಪರೀಕ್ಷೆಯನ್ನು ಪಡೆಯುವುದು, ಪ್ರತಿ ಐದು ವರ್ಷಗಳಿಗೊಮ್ಮೆ HR HPV ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಉತ್ತಮ.

ಹ್ಯೂಮನ್ ಪ್ಯಾಪಿಲೋಮವೈರಸ್ ಲೈಂಗಿಕ ಚಟುವಟಿಕೆಯ ಮೂಲಕ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಬಹುದಾದ ಪ್ರಚಲಿತ ವೈರಸ್, ಗರ್ಭಕಂಠದ ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ HPV ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ಇದು ಯಾವುದೇ ಚಿಹ್ನೆಗಳನ್ನು ಪ್ರದರ್ಶಿಸದೆ ವರ್ಷಗಳವರೆಗೆ ಅಸ್ತಿತ್ವದಲ್ಲಿರಬಹುದು ಮತ್ತು ಅವರ ಅರಿವಿಲ್ಲದೆ ಇತರರಿಗೆ ಹರಡಬಹುದು.

HPV ಅಪಾಯಕಾರಿಯಾಗಿದ್ದರೂ, ಸಾಮಾನ್ಯವಾಗಿ ಕ್ಯಾನ್ಸರ್​ನ ಸಂಕೇತವಾಗಿರುವುದಿಲ್ಲ. HPV ಯ ಕೆಲವು ತಳಿಗಳು ಗರ್ಭಕಂಠದ ಕ್ಯಾನ್ಸರ್ ಗೆ ಕಾರಣವಾಗಬಹುದು .

ಎರಡನೆ ಹಂತದ ತನಕ ಕ್ಯಾನ್ಸರ್ ಗಳಿಗೆ ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿ ಕ್ಯಾನ್ಸರ್ ಪೀಡಿತ ಜಾಗವನ್ನು ತೆಗೆಯಲಾಗುತ್ತದೆ.

ಶಸ್ತ್ರಚಿಕಿತ್ಸೆಯ ಬಳಿಕವೂ ಕ್ಯಾನ್ಸರ್ ಕಣಗಳು ಉಳಿದಲ್ಲಿ ಅವನ್ನು ರೇಡಿಯೇಷನ್ ಮೂಲಕ ತೆಗೆಯಬಹುದು. ಇದನ್ನು ಕ್ಯಾನ್ಸರ್ ಇದ್ದಲ್ಲಿಯ ತನಕ ತೆಗೆದುಕೊಂಡು ಹೋಗಿ ಅಲ್ಲಿ ರೇಡಿಯೇಷನ್ ನೀಡಲಾಗುತ್ತದೆ. ಇದನ್ನು ಕಿಮೋಥೆರಪಿಯ ಜೊತೆಗೆ ನೀಡುತ್ತಾರೆ. ದೇಹದ ವಿವಿಧ ಭಾಗಗಳಿಗೆ ಕ್ಯಾನ್ಸರ್ ಕಣಗಳು ತಲುಪಿದ್ದರೆ ಕೀಮೋಥೆರಪಿ ಅತ್ಯುತ್ತಮವಾದ ಚಿಕಿತ್ಸೆಯಾಗಿದೆ. ಕೀಮೋಥೆರಪಿ ಎಂದರೆ ಕ್ಯಾನ್ಸರ್ ಕಣಗಳ ಬಳಿ ವಿಷಯುಕ್ತ ಔಷಧವನ್ನು ನೀಡುವುದು. ಇದರಿಂದ ಬೇರೆ ದುಷ್ಪಪರಿಣಾಮಗಳಾಗುವ ಸಾಧ್ಯತೆಗಳಿವೆ. ಇವುಗಳೆಂದರೆ ಸುಸ್ತು, ತಲೆಕೂದಲು ಉದುರುವಿಕೆ, ಹಸಿವು ಆಗದಿರುವಿಕೆ, ವಾಂತಿ ಇತ್ಯಾದಿ.

Leave A Reply

Your email address will not be published.