ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಹತ್ಯೆಗೆ ಸಹಕರಿಸಿದವರನ್ನು ವಶಕ್ಕೆ ಪಡೆದು ಪುತ್ತೂರು ನಿರೀಕ್ಷಣಾ ಮಂದಿರಕ್ಕೆ ಕರೆತಂದ ಎನ್.ಐ.ಎ

ಪುತ್ತೂರು: ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯವ ಮುಖಂಡನ ಹತ್ಯೆ ಪ್ರಕರಣದ ತನಿಖೆಗೆ ಇಳಿದಿರುವ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಸೆ.6ರಂದು ಬೆಳ್ಳಂಬೆಳಗ್ಗೆ ಪುತ್ತೂರು, ಉಪ್ಪಿನಂಗಡಿ, ಕಬಕ ಮತ್ತು ಸುಳ್ಯದ 32 ಕಡೆಗಳಿಗೆ ದಾಳಿ ನಡೆಸಿದ್ದಾರೆ. ಅದರ ಬೆನ್ನಲ್ಲೇ ಪುತ್ತೂರಿನಲ್ಲಿಯೇ ಎನ್ ಐ ಎ ತಂಡ ತನಿಖೆ ಕೈಗೊಂಡು ಅಚ್ಚರಿ ಮೂಡಿಸಿದೆ.

ಸುಮಾರು ನೂರಕ್ಕೂ ಅಧಿಕ ವಾಹನಗಳಲ್ಲಿ ತನಿಖಾ ದಳದ ಅಧಿಕಾರಿಗಳು ಗುಪ್ತವಾಗಿ ಆಗಮಿಸಿದ್ದು ವಿವಿದೆಡೆ ಶಂಕಿತರಿಗೆ ಬಲೆ ಬೀಸಿದ್ದಾರೆ. ಈಗಾಗಲೇ ಪ್ರವೀಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹತ್ತು ಮಂದಿಯನ್ನು ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕರ್ನಾಟಕ ಪೊಲೀಸ್ ಇಲಾಖೆ ನಡೆಸುತ್ತಿದ್ದ ತನಿಖೆಯನ್ನು ಇದೀಗ ರಾಷ್ಟ್ರೀಯ ತನಿಖಾ ದಳ ನಡೆಸುತ್ತಿದೆ. ಇದೀಗ ಕೊಲೆಗೆ ಸಹಕರಿಸಿದವರನ್ನು ಪುತ್ತೂರಿನ ದರ್ಬೆ ನಿರೀಕ್ಷಣಾ ಮಂದಿರಕ್ಕೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಸ್ಥಳಕ್ಕೆ ಪ್ರವೇಶಿಸಲು ಮಾಧ್ಯಮದವರನ್ನು ನಿರ್ಬಂಧಿಸಲಾಗಿದೆ. ಭದ್ರತೆ ದೃಷ್ಟಿಯಲ್ಲಿ ನಿರೀಕ್ಷಣಾ ಮಂದಿರದ ಪ್ರವೇಶ ದ್ವಾರದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

ಇಡೀ ಗಡಿ ದೇಶದ ಕಣ್ಣು ಪುತ್ತೂರಿನ ಕಡೆ ನೆಟ್ಟಿದೆ. NIA ನಡೆಸುತ್ತಿರುವ ತನಿಖೆ ಮತ್ತು ಇಂದು ನಡೆದ ಹಲವು ದಾಳಿಗಳ ನಂತರ ಇದೀಗ ಕೊಲೆಗೆ ಸಹಕರಿಸಿದವರ ವಿಚಾರಣೆ ಕುತೂಹಲ ಮೂಡಿಸಿದೆ.

Leave A Reply

Your email address will not be published.