Good News : PPF, ಸುಕನ್ಯಾ ಸಮೃದ್ಧಿ ಯೋಜನೆ – ಕೇಂದ್ರದಿಂದ ಸಿಹಿ ಸುದ್ದಿ

ಹೆಣ್ಣು ಮಗುವಿನ ಭವಿಷ್ಯವನ್ನು ಆರ್ಥಿಕವಾಗಿ ಸುಭದ್ರಗೊಳಿಸಲು ಸರ್ಕಾರವು 2015 ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತಂದಿತು. ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣು ಮಕ್ಕಳಿಗಾಗಿ ಇರುವ ಅತ್ಯುತ್ತಮ ಯೋಜನೆಗಳಲ್ಲಿ ಒಂದಾಗಿದೆ.
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿಗೆ ಖಾತೆ ತೆರೆಯಬಹುದು. ಪೋಸ್ಟ್ ಆಫೀಸ್ ಅಥವಾ ಯಾವುದೇ ವಾಣಿಜ್ಯ ಬ್ಯಾಂಕುಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ತೆರೆಯಬಹುದು. ಯೋಜನೆಯಡಿಯಲ್ಲಿ ಗರಿಷ್ಠ ಇಬ್ಬರು ಹೆಣ್ಣುಮಕ್ಕಳಿಗೆ ಖಾತೆ ತೆರೆಯಬಹುದು. ಒಂದು ವೇಳೆ ಅವಳಿ ಹೆಣ್ಣು ಮಕ್ಕಳಿದ್ದು, ನಂತರದ ಮಗುವೂ ಹೆಣ್ಣು ಮಗುವಾದರೆ, 3ನೇ ಮಗುವಿಗೂ ಖಾತೆ ತೆರೆಯಬಹುದು. ಮೊದಲು ಒಂದು ಹೆಣ್ಣು ಮಗುವಿದ್ದು, ನಂತರ ಅವಳಿ ಹೆಣ್ಣು ಮಕ್ಕಳಾದರೂ ಕೂಡ ಪೋಷಕರು ಎಲ್ಲಾ ಮೂರು ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು.

ಸುಕನ್ಯಾ ಸಮೃದ್ಧಿ ಯೋಜನೆ, ಎನ್‌ಎಸ್‌ಸಿ, ಪಿಪಿಎಫ್‌ನಂತಹ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದರೆ, ಈ ಸಣ್ಣ ಯೋಜನೆಗಳಲ್ಲಿ ಪ್ರಚಂಡ ಲಾಭವನ್ನು ಪಡೆಯಬಹುದು. ಏಕೆಂದರೆ, ಕೇಂದ್ರ ಸರ್ಕಾರವು ತನ್ನ ಉಳಿತಾಯ ಯೋಜನೆಗಳಾದ ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿನ ಹೂಡಿಕೆಯ ಮೇಲಿನ ಬಡ್ಡಿದರಗಳಲ್ಲಿ ಭಾರಿ ಹೆಚ್ಚಳ ಘೋಷಿಸುವ ಸಾಧ್ಯತೆ ಇದೆ. ಪ್ರತಿ ತ್ರೈಮಾಸಿಕ ಪ್ರಾರಂಭವಾಗುವ ಮೊದಲು ಹಣಕಾಸು ಸಚಿವಾಲಯವು ಸರ್ಕಾರಿ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪರಿಶೀಲಿಸಿ ಪ್ರಕಟಿಸುತ್ತದೆ .

ಸೆಪ್ಟೆಂಬರ್ 2022 ರಿಂದ, ಸರ್ಕಾರದ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು 0.50 ರಿಂದ 0.75 ರಷ್ಟು ಹೆಚ್ಚಿಸಲು ಹಣಕಾಸು ಸಚಿವಾಲಯ ಚಿಂತನೆ ನಡೆಸಲಾಗುತ್ತಿದೆ.

ಹಣದುಬ್ಬರವು ದಾಖಲೆಯ ಗರಿಷ್ಠ ಮಟ್ಟದಲ್ಲಿ ಮುಂದುವರಿಯುವುದರೊಂದಿಗೆ, ಬಡ್ಡಿದರ ಹೆಚ್ಚಳದ ನಡುವೆ ಬ್ಯಾಂಕುಗಳು ಮೊದಲಿಗಿಂತ ಹೆಚ್ಚಿನ ಬಡ್ಡಿದರಗಳನ್ನು ಗಳಿಸುವ ನಿರೀಕ್ಷೆಯಿದೆ.

30 ಜೂನ್ 2022 ರಂದು ಎರಡು ಬಾರಿ ರೆಪೊ ದರವನ್ನು ಹೆಚ್ಚಿಸಿರುವ RBI ನಿರ್ಧಾರದ ನಂತರವೂ, ಹಣಕಾಸು ಸಚಿವಾಲಯವು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿರಲಿಲ್ಲ.

ಆದರೆ ಸರ್ಕಾರ ಮಾಡಿರುವ ಬದಲಾವಣೆಗಳು ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ ಎಂದು ನಿರೀಕ್ಷಿಸಲಾಗಿದೆ. RBI ರೆಪೊ ದರವನ್ನು ಮೂರು ಬಾರಿ 1.40 ಶೇಕಡಾ ಹೆಚ್ಚಿಸಿದೆ. ಇದಾದ ನಂತರ ವಿವಿಧ ಬ್ಯಾಂಕ್‌ಗಳು ಎಫ್‌ಡಿ, ಆರ್‌ಡಿ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ. ಮುಂಬರುವ ಅವಧಿಯಲ್ಲಿ ಬಡ್ಡಿದರಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಮೂಲಗಳ ಪ್ರಕಾರ ತಿಳಿದುಬಂದಿದೆ.

ಬ್ಯಾಂಕುಗಳು ಮತ್ತು RBI ಎರಡೂ ಸರ್ಕಾರಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನ ಹೆಚ್ಚಿಸುವ ಪರವಾಗಿವೆ. ಆರ್‌ಬಿಐ ಮೇ ತಿಂಗಳಿನಿಂದ ಮೂರು ಬಾರಿ ರೆಪೊ ದರವನ್ನ ಹೆಚ್ಚಿಸಿದ್ದು, ಇದು ಪ್ರಸ್ತುತ 5.4% ರಷ್ಟಿದೆ.

ಮುಂಬರುವ ಅವಧಿಯಲ್ಲಿ 25 ಬೇಸಿಸ್ ಪಾಯಿಂಟ್’ಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದ್ರೆ, ಸರ್ಕಾರ ಉಳಿತಾಯ ಯೋಜನೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ ಮೇಲಿನ ಆದಾಯವೂ ಹೆಚ್ಚಾಗುವ ಸಾಧ್ಯತೆಯಿದೆ.
ಪ್ರತಿ ತ್ರೈಮಾಸಿಕದಲ್ಲಿ ಬಡ್ಡಿದರಗಳನ್ನು ಪರಿಷ್ಕರಿಸಲಾಗುತ್ತದೆ. ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿಯನ್ನು ಸರ್ಕಾರವು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸುತ್ತದೆ.

ಈ ಪರಿಶೀಲನೆಯ ಸಮಯದಲ್ಲಿ ಬಡ್ಡಿದರವನ್ನ ಹೆಚ್ಚಿಸಬೇಕೆ, ಕಡಿಮೆ ಮಾಡಬೇಕೆ ಅಥವಾ ಸ್ಥಿರವಾಗಿರಿಸಿಕೊಳ್ಳಬೇಕೆ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಈ ಬಡ್ಡಿದರಗಳನ್ನು ಹಣಕಾಸು ಸಚಿವಾಲಯವು ನಿಗದಿಪಡಿಸುತ್ತದೆ.
ಪ್ರಸ್ತುತ, ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆಯ ಮೇಲೆ ಶೇ. 7.6 ಮತ್ತು ಹಿರಿಯ ನಾಗರಿಕರ ತೆರಿಗೆ ಉಳಿತಾಯ ಯೋಜನೆಯಲ್ಲಿ ಶೇ.7.4 ರಷ್ಟು ಬಡ್ಡಿ ಲಭ್ಯವಿದೆ. ಇದಲ್ಲದೇ ಕಿಸಾನ್ ವಿಕಾಸ್ ಪತ್ರದಲ್ಲಿ ಶೇ.6.9 ಬಡ್ಡಿ ದೊರೆಯುತ್ತಿದೆ. ಇದೀಗ ಸರ್ಕಾರವು ಜುಲೈನಿಂದ ಈ ಯೋಜನೆಗಳ ಮೇಲಿನ ಬಡ್ಡಿಯನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ.

ಪ್ರಸ್ತುತ PPF ಮೇಲಿನ ಬಡ್ಡಿ ವಾರ್ಷಿಕ 7.1 ಶೇ.
ನೀಡಲಾಗುತ್ತದೆ. ಅದೇ ರೀತಿ ನೀವು ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿಗಳ ಖಾತೆಯಲ್ಲಿ 5.8% ಆದಾಯವನ್ನ ಪಡೆಯಬಹುದು.

ವಿತ್ತ ಸಚಿವಾಲಯ ಆರ್ಥಿಕ ವರ್ಷ 2022-23 ರ ಮೊದಲ ತ್ರೈಮಾಸಿಕಕ್ಕೆ ವಿಭಿನ್ನ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಏಪ್ರಿಲ್ 1, 2022 ರಂದು ಆರಂಭಗೊಂಡು ಜೂನ್ 30, 2022 ರ ನಾಲ್ಕನೇ ತ್ರೈಮಾಸಿಕಕ್ಕೆ ಅನ್ವಯಿಸುವ ದರಗಳಲ್ಲಿ ಯಾವುದೇ ಪರಿವರ್ತನೆ ಇರುವುದಿಲ್ಲ ಎಂದು ಹೇಳಿದೆ. ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು ತ್ರೈಮಾಸಿಕ ಆಧಾರದ ಮೇಲೆ ಪರಿಷ್ಕರಣೆಗೊಳ್ಳುತ್ತವೆ.

Leave A Reply

Your email address will not be published.