BIGG NEWS : ಪಡಿತರ ಚೀಟಿದಾರರಿಗೆ ನಿಮಗೊಂದು ಮಹತ್ವದ ಮಾಹಿತಿ : 5ಕೆ.ಜಿ ಉಚಿತ ಅಕ್ಕಿ ಸೌಲಭ್ಯ ಈ ತಿಂಗಳಿಗೆ ಅಂತ್ಯ

ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಿಂದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಉಚಿತ ಅಕ್ಕಿ ಸೌಲಭ್ಯ ಈ ತಿಂಗಳಿಗೆ ಅಂತ್ಯವಾಗಲಿದೆ.

ಹೌದು, ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ 2020 ರಿಂದ ಪಡಿತರ ಚೀಟಿದಾರರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಪ್ರತಿ ಯುನಿಟ್ ಗೆ 5 ಕೆಜಿ ಅಕ್ಕಿ ಅಥವಾ ಗೋಧಿಯನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಆದರೆ. ಉಚಿತ ಅಕ್ಕಿ ಸೌಲಭ್ಯ ಈ ತಿಂಗಳಿಗೆ ಅಂತ್ಯವಾಗಲಿದೆ. ಹೀಗಾಗಿ ಅಕ್ಟೋಬರ್ ನಿಂದ ಪಡಿತರ ಚೀಟಿದಾರರಿಗೆ ರಾಜ್ಯದ ಪಾಲಿನ ತಲಾ 5 ಕೆಜಿ ಅಕ್ಕಿ ಮಾತ್ರ ಸಿಗಲಿದೆ.

ರಾಜ್ಯ ಸರ್ಕಾರದ ಪಡಿತರ ಆಹಾರ ಧಾನ್ಯ ಸೇರಿದಂತೆ ಕೇಂದ್ರ ಪಾಲಿನ ಅಕ್ಕಿ ಅಥವಾ ಗೋಧಿ ಸೇರಿ ಒಟ್ಟು ತಲಾ 10 ಕೆಜಿ (8 ಕೆಜಿ ಅಕ್ಕಿ, 2 ಕೆಜಿ ರಾಗಿ ಅಥವಾ ಗೋಧಿ) ಆಹಾರ ಧಾನ್ಯವನ್ನು ಫಲಾನುಭವಿಗಳು ಸದ್ಯ ಪಡೆಯುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಘೋಷಿಸಿರುವಂತೆ ಪಡಿತರ ಚೀಟಿದಾರರಿಗೆ ಉಚಿತವಾಗಿ ನೀಡುತ್ತಿರುವ ಅಕ್ಕಿ ಸೆಪ್ಟೆಂಬರ್ ನಲ್ಲಿ ಅಂತ್ಯಗೊಳ್ಳಲಿದೆ. ಅಕ್ಟೋಬರ್ ನಿಂದ ಕೇಂದ್ರದ ಉಚಿತ ಅಕ್ಕಿ ಯೋಜನೆಯ ಲಾಭ ಸಿಗುವುದಿಲ್ಲ.ಹೀಗಾಗಿ ಇನ್ಮುಂದೆ ಪ್ರತಿ ಯುನಿಟ್ ಗೆ ಕೇವಲ 5 ಕೆಜಿ ಅಕ್ಕಿ ಮಾತ್ರ ಸಿಗಲಿದೆ.

Leave A Reply

Your email address will not be published.