ಯುಕೆ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ; ರಿಷಿ ಸುನಕ್ ಗೆ ಸೋಲು!!

ಬ್ರಿಟನ್ ಪ್ರಧಾನಿ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರಸ್ ಮಹತ್ವದ ಗೆಲುವು ಸಾಧಿಸಿದ್ದು, ಭಾರತ ಮೂಲದ ರಿಷಿ ಸುನಕ್ ಅನಿರೀಕ್ಷಿತ ಸೋಲು ಅನುಭವಿಸಿದ್ದಾರೆ. ಬಹುಚರ್ಚಿತ ಈ ಚುನಾವಣೆಯಲ್ಲಿ ಭಾರತ ಮೂಲದ ಮತ್ತು ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಸೋಲು ಕಂಡಿದ್ದಾರೆ. ಲಿಜ್ ಟ್ರಸ್ ಅವರು ಬ್ರಿಟನ್ನಿನ ಮೂರನೆಯ ಮಹಿಳಾ ಪ್ರಧಾನಮಂತ್ರಿ ಆಗಿ ಆಯ್ಕೆ ಆಗಿದ್ದಾರೆ.

81,326 ಮತಗಳನ್ನು ಪಡೆದ ಲಿಜ್ ಟ್ರಸ್ ಅವರನ್ನು ವಿಜೇತರು ಎಂದು ಘೋಷಿಸಲಾಗಿದೆ, 60,399 ಮತಗಳನ್ನು ಪಡೆದ ರಿಷಿ ಸುನಕ್ ಅವರು ಸೋಲನುಭವಿಸಿದರು. ಸರಿಸುಮಾರು 20,000 ಕ್ಕೂ ಅಧಿಕ ಮತಗಳ ಅಂತರದಿಂದ ಲಿಜ್ ಟ್ರಸ್ ಅವರು ರಿಷಿ ಸುಣಕ್ ಅವರನ್ನು ಸೋಲಿಸಿದ್ದಾರೆ.

ಸರ್ಕಾರ ರಚಿಸಲು ಅನುಮತಿಗಾಗಿ ಮೆಜೆಸ್ಟಿ ದಿ ಕ್ವೀನ್ ಅವರನ್ನು ಕೇಳಿದ ನಂತರ ಟ್ರಸ್ ಮಂಗಳವಾರ ಔಪಚಾರಿಕವಾಗಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ವಿದೇಶಾಂಗ ಸಚಿವ ಟ್ರಸ್ ಮತ್ತು ಅವರ ಪ್ರತಿಸ್ಪರ್ಧಿ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಅಂತಿಮ ಮತ ಚಲಾಯಿಸಿದ ಕನ್ಸರ್ವೇಟಿವ್ ಪಕ್ಷದ ಸದಸ್ಯರಲ್ಲಿ ಬೆಂಬಲವನ್ನು ಒಟ್ಟುಗೂಡಿಸಿದ ನಂತರ ಫಲಿತಾಂಶವನ್ನು ಭಾರತೀಯ ಕಾಲಮಾನ ಸಂಜೆ 5 ಗಂಟೆಗೆ ಪ್ರಕಟಿಸಲಾಯಿತು.

ಬೋರಿಸ್ ಜಾನ್ಸನ್ ಅವರನ್ನು ಬದಲಿಸುವ ಓಟದಲ್ಲಿ ದೀರ್ಘಾವಧಿಯ ಮುಂಚೂಣಿಯಲ್ಲಿದ್ದ ಟ್ರಸ್ ಅವರು 2015 ರ ಚುನಾವಣೆಯ ನಂತರ ಕನ್ಸರ್ವೇಟಿವ್‌ಗಳ ನಾಲ್ಕನೇ ಪ್ರಧಾನ ಮಂತ್ರಿಯಾಗಿದ್ದಾರೆ.

47 ವರ್ಷ ವಯಸ್ಸಿನ ಲಿಜ್ ಟ್ರಸ್ ಮತ ಚಲಾಯಿಸಲು ಅರ್ಹರಾಗಿರುವ ಅಂದಾಜು 200,000 ಟೋರಿ ಸದಸ್ಯರಲ್ಲಿ ಮತದಾನದಲ್ಲಿ 42 ವರ್ಷದ ಸುನಕ್ ಅವರಿಗಿಂತ ಸತತವಾಗಿ ಮುಂದಿದ್ದರು.

ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಮತದಾನ ಪ್ರಕ್ರಿಯೆಯು ಕೊನೆಗೊಂಡ ಬೆನ್ನಲ್ಲೇ ಫಲಿತಾಂಶ ಘೋಷಣೆಯಾಗಿದ್ದು, ವಿದೇಶಾಂಗ ಸಚಿವೆ ಲಿಜ್ ಟ್ರಸ್ಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ.

Leave A Reply

Your email address will not be published.