ದ.ಕ ಜಿಲ್ಲೆಯ ಸಂಸತ್ ಅಭ್ಯರ್ಥಿಯಾಗುವ ದುರಾಸೆಯಿಂದ ಮದ್ರಸ ವಿರುದ್ಧ ಹೇಳಿಕೆ ಕೊಟ್ಟು ಸಂಘದ ಮುಖಂಡರ ಮೆಚ್ಚಿಸಲು ಹೊರಟ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ: SDPI

ಮಂಗಳೂರು:-ಸಂಸದ ನಳಿನ್ ಕುಮಾರ್ ಕಟೀಲ್ ಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಸ್ಥಾನ ಪಲ್ಲಟವಾಗುವ ವಾಸನೆ ಬಡಿದಿರುವುದರಿಂದಲೇ ಬಿಜೆಪಿ ಮುಖಂಡ , ಹರಕು ನಾಲಗೆಯ ಹರಿಕೃಷ್ಣ ಬಂಟ್ವಾಳ ಮದ್ರಸಾದ ವಿರುದ್ಧ ಪ್ರಚೋದನಕಾರಿ ಹೇಳಿಕೆ ಕೊಟ್ಟು ಸಂಘದ ನಾಯಕರ ಮೆಚ್ಚುಗೆ ಗಳಿಸಿ ಮುಂದಿನ ಸಂಸದ ಸ್ಥಾನದ ಅಭ್ಯರ್ಥಿಯಾಗಲು ಈಗಲೇ ಪ್ರಯತ್ನಿಸುತ್ತಿದ್ದಾರೆ ಎಂದು ಎಸ್‌ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯ ದುರಾಡಳಿತದಿಂದ ಮತ್ತು ದ.ಕ ಜಿಲ್ಲೆಯಲ್ಲಿ ಪ್ರಸ್ತುತ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಜನಾಕ್ರೋಶ ಹೆಚ್ಚಾಗಿದ್ದು,ಅದರ ಪ್ರತಿಫಲ ಎಂಬಂತೆ ನಿನ್ನೆ ಮಂಗಳೂರಿನಲ್ಲಿ ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮಕ್ಕೆ ಕಾರ್ಯಾಂಗವನ್ನು ದುರುಪಯೋಗ ಪಡಿಸಿ ಜನ ಸೇರಿಸಲು ಯತ್ನಿಸಿದ್ದರು ನಿರೀಕ್ಷಿತ ಮಟ್ಟದ ಯಶಸ್ಸು ಕಾಣದೇ ಇರುವುದರಿಂದ ಮುಂದಿನ ಚುನಾವಣೆಯಲ್ಲಿ ಕಟೀಲ್ ಗೆ ಟಿಕೆಟ್ ತ್ಯಜಿಸಬೇಕಾಗಿಬರುವುದು ನಿಶ್ಚಿತ ಎಂದು ಬಿಜೆಪಿಯ ಒಳಗೆ ಆಂತರಿಕವಾಗಿ ಪ್ರಚಾರದಲ್ಲಿರುವುದು ಒಂದು ಕಡೆಯಾದರೆ ಇನ್ನೊಂದೆಡೆ ಬಿಜೆಪಿಗೆ ಸೋಲಿನ ಭಯ ಆವರಿಸಿದೆ.ಇದರ ಲಾಭ ವನ್ನು ಪಡೆಯುವ ದುರುದ್ದೇಶದಿಂದ ಹರಿಕೃಷ್ಣ ಬಂಟ್ವಾಳ ಪ್ರಚೋದನಕಾರಿ ಹೇಳಿಕೆ ನೀಡಿ ತನ್ನ ಹರಕು ನಾಲಗೆಯನ್ನು ಹರಿಯ ಬಿಟ್ಟಿದ್ದಾರೆ . ಈ ಮೂಲಕ ಸಂಘದ ನಾಯಕರ ಮೆಚ್ಚುಗೆ ಗಳಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಹರಿಕೃಷ್ಣ ಬಂಟ್ವಾಳರ ಹಿನ್ನೆಲೆ ದ.ಕ ಜಿಲ್ಲೆಯ ಜನತೆಗೆ ತಿಳಿದಿದೆ,ಯಾವ ಸಂದರ್ಭದಲ್ಲಿ ಬೇಕಾದರೂ ಪಕ್ಷದಿಂದ ಪಕ್ಷಕ್ಕೆ ವಲಸೆ ಹೋಗುವ ಮತ್ತು ಭಯೋತ್ಪಾದನೆಯ ಕಾರಣದಿಂದ ಮೂರು ಬಾರಿ ನಿಷೇಧಕ್ಕೆ ಒಳಪಟ್ಟಿರುವ RSS ನ ರಾಜಕೀಯ ಅಂಗ ಬಿಜೆಪಿಯಲ್ಲಿರುವ ಇವರಿಗೆ ಮದ್ರಸದ ಬಗ್ಗೆ ಮಾತನಾಡಲು ಯಾವ ನೈತಿಕತೆಯೂ ಇಲ್ಲ , ಮದರಸದ ಬಗ್ಗೆ ಹರಿಕೃಷ್ಣ ಬಂಟ್ವಾಳ ರಂತಹ ರಾಜಕೀಯದಲ್ಲಿ ಚಲಾವಣೆ ಇಲ್ಲದ ಸವಕಲು ನಾಣ್ಯದಂತಹ ಈತನ ಸರ್ಟಿಫಿಕೇಟ್ ಅಗತ್ಯವಿಲ್ಲ, ಮದರಸದ ಬಗ್ಗೆ ಮಾತನಾಡುವಾಗ ನಾಲಗೆ ಬಿಗಿ ಹಿಡಿದು ಮಾತನಾಡಬೇಕು

ಬಿಜೆಪಿಯು ಚುನಾವಣೆ ಗೆಲ್ಲಲು RSS ದೇಶದೆಲ್ಲೆಡೆ ಬಾಂಬ್ ಸ್ಪೋಟ ನಡೆಸಿದೆ ಎಂದು RSS ಕಾರ್ಯಕರ್ತ ಹಾಗೂ ನಾಂದೇಡ್ ಸ್ಪೋಟದ ಆರೋಪಿ ಯಶವಂತ್ ಸಿನ್ಹಾ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾನೆ.ಹಾಗಾಗಿ RSS ಕಛೇರಿಗಳೇ ಭಯೋತ್ಪಾದನೆಯ ಮೂಲ ಹೊರತು ಮದ್ರಸಗಳಲ್ಲ ಎಂದು ಹೇಳಿದರು.
ಕೆಲವು ದಿನಗಳಿಂದ ಶಾಂತಿಯಲ್ಲಿರುವ ದ.ಕ ಜಿಲ್ಲೆಯಲ್ಲಿ ಪ್ರಚೋದನಕಾರಿ ಹೇಳಿಕೆಗಳ ಮೂಲಕ ಪುನಃ ಅಶಾಂತಿ ಸೃಷ್ಟಿಸಲು ಪ್ರಯತ್ನ ಪಡುತ್ತಿರುವ ಹರಿಕೃಷ್ಣ ಬಂಟ್ವಾಳ್ ವಿರುದ್ಧ ಪೋಲಿಸ್ ಇಲಾಖೆ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

Leave A Reply

Your email address will not be published.