ಸೋಮಣ್ಣ ಮಾಚಿಮಾಡ ಒಂದು ಕಾಲದಲ್ಲಿ ಏನ್ ಮಾಡಿದ್ರು? ; ಬಾಯಿ ಬಿಡಿಸಿದ ಸೋನು ಗೌಡ

ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟ ಹೆಚ್ಚಾಗುವುದರ ಜೊತೆಗೆ ಕ್ಯುರಾಸಿಟಿ ಕೂಡ. ದೊಡ್ಮನೆಯಲ್ಲಿ ಸ್ಪರ್ಧಿಗಳು ಈಗಾಗಲೇ ಕಮ್ಮಿಯಾಗಿದ್ದಾರೆ. ಇದರ ನಡುವೆ ಇಲ್ಲೊಂದು ವಿಚಾರ ತಿಳಿದಿದೆ.
ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮದಲ್ಲಿ ಪತ್ರಕರ್ತ ಸೋಮಣ್ಣ ಮಾಚಿಮಾಡ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಟಾಸ್ಕ್‌ ವಿಚಾರಗಳಲ್ಲಿ ಸೈ ಎನಿಸಿಕೊಂಡಿರುವ ಸೋಮಣ್ಣ ಮಾಚಿಮಾಡ ಕೆಲವು ಬಾರಿ ಮಾತಿನ ಸಮರಗಳಿಗೂ ಸಾಕ್ಷಿಯಾಗುತ್ತಿದ್ದಾರೆ. ಹೀಗಿರುವಾಗಲೇ, ಸೋಮಣ್ಣ ಮಾಚಿಮಾಡ ಒಂದು ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಅದೇನಪ್ಪಾ ಅಂದ್ರೆ, ಒಂದ್ಕಾಲದಲ್ಲಿ ಸೋಮಣ್ಣ ಮಾಚಿಮಾಡ ಚಿಕ್ಕ ಗ್ರೀಟಿಂಗ್ ಕಾರ್ಡ್ ಕದ್ದಿದ್ದರಂತೆ..! ಹಾಗಂತ ಅವರೇ ‘ಬಿಗ್ ಬಾಸ್’ ಮನೆಯಲ್ಲಿ ಹೇಳಿದ್ದಾರೆ.


Ad Widget

Ad Widget

Ad Widget

Ad Widget
Ad Widget

Ad Widget


ಒಡವೆಗಳನ್ನ ತಂಡ ಸೋನು ಶ್ರೀನಿವಾಸ್ ಗೌಡ, ಗೌರಿ ಗಣೇಶ ಹಬ್ಬದ ಪ್ರಯುಕ್ತ, ‘ಬಿಗ್ ಬಾಸ್’ ಮನೆಯ ಎಲ್ಲಾ ಸ್ಪರ್ಧಿಗಳು ಸಾಂಪ್ರದಾಯಿಕವಾಗಿ ರೆಡಿಯಾಗಿದ್ದರು. ಈ ವೇಳೆ ಧರಿಸಿದ್ದ ಕೆಲವು ಒಡವೆಗಳನ್ನ ಸೋನು ಶ್ರೀನಿವಾಸ್ ಗೌಡ ತಂದರು. ಇದೇ ಸಮಯದಲ್ಲಿ ನಡೆದ ಮಾತುಕತೆ ಇಲ್ಲಿದೆ…
ಸೋಮಣ್ಣ ಮಾಚಿಮಾಡ – ಇದೇನಿದು ಒಡವೆಗಳು..?
ಸೋನು ಶ್ರೀನಿವಾಸ್ ಗೌಡ – ಅಲ್ಲಿ ಮಾರುತ್ತಿದ್ದಾರೆ. ಅದಕ್ಕೆ ನಾನು 20 ರೂಪಾಯಿ ಕೊಟ್ಟು ತಂದೆ.
ಸೋಮಣ್ಣ ಮಾಚಿಮಾಡ – ಕದ್ದುಕೊಂಡು ಬಂದಿರಬೇಕು. ನನಗೆ ಯಾಕೋ ಡೌಟು.. ಇದು ಕದ್ದ ಮಾಲು
ಸೋನು ಶ್ರೀನಿವಾಸ್ ಗೌಡ – ಹೆಂಗೆ ಗೊತ್ತಾಯಿತು.? ನಾನು ಜಾತ್ರೆಗೆ ಹೋದಾಗ ಕದಿಯುತ್ತಿದ್ದೆ.
ಸೋಮಣ್ಣ ಮಾಚಿಮಾಡ – ಜಾತ್ರೆಯಲ್ಲಿ ಕದಿಯುತ್ತಿದ್ರಾ?
ಸೋನು ಶ್ರೀನಿವಾಸ್ ಗೌಡ – ಇಲ್ಲಾಪ್ಪ.. ಸುಮ್ಮನೆ ಹೇಳಿದೆ.
ಸೋಮಣ್ಣ ಮಾಚಿಮಾಡ – ಸುಮ್ ಸುಮ್ನೆ ಆ ಸೇಟ್‌ಮೆಂಟ್ ಬಾಯಿಂದ ಬರಬಾರದು.
ಸೋನು ಶ್ರೀನಿವಾಸ್ ಗೌಡ – ಚಿಕ್ಕವಯಸ್ಸಿನಲ್ಲಿದ್ದಾಗ ಎಲ್ಲರೂ ಮಾಡಿರುತ್ತಾರೆ. ಪೆನ್ಸಿಲ್ ಕದಿಯೋದು ಎಲ್ಲಾ.. ನೀವು ಮಾಡಿರ್ತೀರಾ ಅಲ್ವಾ?
ಸೋಮಣ್ಣ ಮಾಚಿಮಾಡ – ನಾನು ಮೈಸೂರಿನಲ್ಲಿದ್ದಾಗ ಕಾಳಿದಾಸ ರೋಡ್‌ನಲ್ಲಿ ಒಂದು ಗಿಫ್ಟ್ ಅಂಗಡಿ ಇತ್ತು. ಅಲ್ಲೊಂದು ಸಣ್ಣ ಐಟಮ್ ಕದ್ದಿದ್ದೆ. ಗ್ರೀಟಿಂಗ್ ಕಾರ್ಡ್ ಅನ್ಸತ್ತೆ. ಯಾರಿಗೋ ಗ್ರೀಟಿಂಗ್ ಕಾರ್ಡ್ ಕೊಡಬೇಕಿತ್ತು. ಕೈಯಲ್ಲಿ ಕಮಾಯಿ ಏನೂ ಇರಲಿಲ್ಲ. ಚಿಕ್ಕ ಗ್ರೀಟಿಂಗ್ ಕಾರ್ಡ್ ಕದ್ದಿದ್ದೆ ಅಂತ ಬಾಯ್ಬಿಟ್ಟಿದ್ದಾರೆ ಸೋಮಣ್ಣ ಮಾಚಿ ಮಾಡ.


Ad Widget
error: Content is protected !!
Scroll to Top
%d bloggers like this: