ಮೊಬೈಲ್ ನಲ್ಲೇ ಎಲ್ಲಾ ವಹಿವಾಟು ಮಾಡುತ್ತೀರಾ ? ಹಾಗಾದರೆ ಬಂದಿದೆ ಹೊಸದೊಂದು ‘ಸೆಕ್ಸ್’ ಜಾಲ |ಎಚ್ಚರ ಜನರೇ…

ಆಧುನಿಕ ತಂತ್ರಜ್ಞಾನದಿಂದ ಎಷ್ಟು ಲಾಭ ಇದೆಯೋ ಅಷ್ಟೇ ತೊಂದರೆ ಇದೆ ಅನ್ನೋದಕ್ಕೆ ತುಂಬಾ ಉದಾಹರಣೆಗಳು ಇದೆ. ದಿನ ದಿನ ಜನರನ್ನು ಯಾವ ರೀತಿಯಲ್ಲಿ ಮೋಸ ಮಾಡಬಹುದು ಎಂಬ ತಂತ್ರಗಾರಿಕೆ ನಡೆಯುತ್ತದೆ. ಇದಕ್ಕೆ ಬಿದ್ದರೆ ಗೋತಾ…ಎಂದೇ ಹೇಳಬಹುದು.

ಇದೀಗ ಹೊಸದೊಂದು ಆನ್‌ಲೈನ್ ವಂಚಕರು ನಿಮ್ಮಲ್ಲಿರೋ ಹಣದ ಜೊತೆ ನಿಮ್ಮ ಮಾನ ತೆಗೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಹೌದು, ಹೇಗೆಂದರೆ ಆರಂಭದಲ್ಲಿ ನಿಮ್ಮ ಮೊಬೈಲ್‌ಗೆ ಸಂದೇಶವೊಂದು ಬರುತ್ತದೆ. ಕೇವಲ ಹಾಯ್ ಅಥವಾ ಹಲೋ ಅನ್ನೋ ಸಂದೇಶದಿಂದ ಆರಂಭವಾಗಿ ನಂತರ ಹಣ ದೋಚಲು ಮುಂದಾಗುತ್ತಾರೆ.

ಮೊದಲಿಗೆ ಹಾಯ್ ಎನ್ನುವ ಮೂಲಕ ಪರಿಚಯ ಮಾಡಿಕೊಳ್ಳುವ ಪ್ರಯತ್ನಿಸುತ್ತಾರೆ. ನಂತರ ನೀವು ಅವರಿಗೆ ರಿಪ್ಲೈ ಮಾಡಿದ್ರೆ ಸಾಕು, ನಿಮಗೆ ಸೆಕ್ಸ್(Sex) ಮಾಡೋಕೆ ಇಷ್ಟವಿದೆಯೇ..? ಸೆಕ್ಸ್ ವಿಡಿಯೋ(Sex Video) ನೋಡಬಯಸುತ್ತೀರಾ ಹಾಗಿದರೆ, ವಿಡಿಯೋ ಕಾಲ್(Video Call) ಮಾಡಿ ಎನ್ನುತ್ತಾರೆ. ಅಪ್ಪಿತಪ್ಪಿ ನೀವೇನಾದ್ರೂ ಪೋನ್ ಮಾಡಿದ್ದೇ ಆದ್ರೆ ಒಂದೆರಡು ಬಾರಿ ವಿಡಿಯೋ ಕಾಲ್ ಮಾಡಿ, ನಂತರ ನಿಧಾನವಾಗಿ ಪರಿಚಯ ಬೆಳೆಸಿಕೊಳ್ಳುತ್ತಾರೆ.

ನಿಮ್ಮ ಊರು, ವಿಳಾಸ ನಿಮ್ಮ ವೃತ್ತಿ ಸೇರಿದಂತೆ ಎಲ್ಲವನ್ನೂ ತೆಗೆದುಕೊಳ್ಳುತ್ತಾರೆ. ಒಂದೆರಡು ದಿನಗಳ ಕಾಲ ಈ ಆಟ ಮುಂದುವರಿದ ಬಳಿಕ ನೀವು ಸೆಕ್ಸ್ ವೀಡಿಯೋ ನೋಡ್ತಿರೋದನ್ನು ಸ್ಕ್ರೀನ್ ರೆಕಾರ್ಡ್ ಮಾಡುವ ಮೂಲಕ ಅದನ್ನು ನಿಮಗೆ ವಾಟ್ಸಾಪ್ ಸಂದೇಶ ಕಳುಹಿಸುತ್ತಾರೆ.

ಇಂತಿಷ್ಟು ಹಣವನ್ನು ಕೊಡದಿದ್ರೆ ನೀವು ಸೆಕ್ಸ್ ವಿಡಿಯೋ ನೋಡುವ ವೀಡಿಯೋಚ ಸಾಮಾಜಿಕ ಜಾಲತಾಣ(Social media) ಗಳಲ್ಲಿ ಅಪ್ಲೋಡ್(Upload) ಮಾಡೋದಾಗಿ ಬೆದರಿಸುತ್ತಾರೆ. ಐದು ಸಾವಿರದಿಂದ ಪ್ರಾರಂಭವಾಗುವ ಬೇಡಿಕೆ ನಿಧಾನವಾಗಿ ಲಕ್ಷಾಂತರ ಹಣದ ಬೇಡಿಕೆವರೆಗೂ ಹೋಗುತ್ತದೆ. ಇತ್ತ ಹಣ ಕೊಡಲು ಆಗದೇ ಅತ್ತ ವಿಡಿಯೋ ವೈರಲ್ ಆಗೋ ಭೀತಿಯಲ್ಲಿ ಪರದಾಡೋ ಸ್ಥಿತಿ ನಿರ್ಮಾಣವಾಗುವುದಂತೂ ನಿಜ. ಹಾಗಾಗಿ ಇಂತಹ ಖತರ್ನಾಕ್‌ ಕಳ್ಳರ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ.

Leave A Reply