ಬಿಗ್ ಬಾಸ್ ದಿವ್ಯಾ ಸುರೇಶ್ ಮತ್ತು ರಾಕೇಶ್ ನ ಸಂಬಂಧವೇನು? ;ಈ ಗುಟ್ಟನ್ನು ಬಿಚ್ಚಿಟ್ಟ ರಾಕೇಶನ ತಾಯಿ!!

ಬಿಗ್ ಬಾಸ್ ಸೀಸನ್ 8 ರ ಉತ್ತಮ ಸ್ಪರ್ಧಿ ದಿವ್ಯಾ ಸುರೇಶ್. ಆಕೆ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ರಾಕೇಶ್ ಜೊತೆ ಇದ್ದ ಸಂಬಂಧದ ಬಗ್ಗೆ ಎಲ್ಲೆಡೆ ಹರಿದಾಡುತ್ತಿತ್ತು. ಜೊತೆಗೆ ಇದರ ಬಗ್ಗೆ ಕೂಡ ಮನೆಯಲ್ಲಿ ಯಾವುದೇ ವಿಷಯಗಳನ್ನು ದಿವ್ಯಾ ಸುರೇಶ್ ಹಂಚಿಕೊಂಡಿಲ್ಲ. ಅಲ್ಲಿ ಮಂಜು ಪಾವಾಗಡ ಜೊತೆಗೆ ಒಂದು ಉತ್ತಮ ಗೆಳೆತನವನ್ನು ಬೆಳೆಸಿರುತ್ತಾನೆ.
ಇದೀಗ ವೂಟ್ ನಲ್ಲಿ ಪ್ರಸಾರ ವಾಗುತ್ತಿರುವ ಬಿಗ್ ಬಾಸ್ ಒಟಿಟಿ ಸೀಸನ್ ಓನ್ ಗೆ ರಾಕೇಶ್ ಬಂದಿದ್ದಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಅಸಲಿ ವಿಷಯ ಏನು ಗೊತ್ತಾ?
2017ರಲ್ಲಿ ಬೆಂಗಳೂರು ಮಿಸ್ ಸೌತ್ ಪಟ್ಟವನ್ನು ಅಲಂಕರಿಸಿದ್ದ ದಿವ್ಯಾ ಸುರೇಶ್, ನೈಟ್‌ಔಟ್ ಸಿನಿಮಾ ಆಡಿಶನ್‌ಗೆ ಹೋದಾಗ ಕನ್ನಡ ರಾಪರ್ ರಾಕೇಶ್ ಅಡಿಗಾರನ್ನು ಭೇಟಿ ಮಾಡಿದರು. ಅಲ್ಲಿಂದ ಇವರಿಬ್ಬರು ಎಲ್ಲೇ ಹೋದರು ಒಟ್ಟಿಗೆ ಹೋಗುತ್ತಿರು. ಇಬ್ಬರು ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರು. ಇಬ್ಬರು ಮದುವೆಯಾಗಲು ಸಹ ನಿರ್ಧರಿಸಿದ್ದರು. ನಾವಿಬ್ಬರು ಮೂರು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ದೇವೆ. ನನ್ನ ಗೆಲುವು, ಸೋಲುಗಳೆರಡರೊಂದಿಗೂ ದಿವ್ಯಾ ನನ್ನ ಜೊತೆಗಿದ್ದಳು ಎಂದು ರಾಕೇಶ್ ಅಡಿಗ ಹೇಳಿದ್ದರು.


Ad Widget


ಬಿಗ್ ಬಾಸ್ ಮುಗಿಸಿ ಬಂದ ದಿವ್ಯಾ ಸುರೇಶ್ ರಾಕೇಶ್‌ ಹಾಗೂ ನಾನು ಇಬ್ಬರು ಸತತ ಮೂರು ವರ್ಷಗಳ ಕಾಲ ಲಿವ್‌ ಇನ್‌ ಟುಗೆದರ್‌ ರಿಲೇಷನ್‌ ಶಿಪ್‌ ನಲ್ಲಿ ಇದ್ದೆವು. ನನಗೆ ರಾಕೇಶ್‌ ಎಂದರೆ ತುಂಬಾ ಇಷ್ಟ. ರಾಕೇಶ್‌, ನನ್ನ ಕಷ್ಟದ ಬದುಕನ್ನು ಹಂಚಿಕೊಂಡವನು. ಅವನೇ ನನಗೆ ದಿ ಬೆಸ್ಟ್‌ ಫ್ರೆಂಡ್.‌ ನಾನು ಜೀವನದಲ್ಲಿ ಯಾರನ್ನಾದ್ರೂ ವಿಶೇಷ ಎಂದು ಪರಿಗಣಿಸೋದಾದ್ರೆ ಅದು ರಾಕೇಶ್‌ ನ ಮಾತ್ರ. ಅವನ ಜೊತೆಗೆ ಕಳೆದ ಒಂದೊಂದು ಕ್ಷಣವೂ ಬೆಸ್ಟ್‌ ಮೂಮೆಂಟ್ಸ್‌ ಎಂದು ದಿವ್ಯಾ ಹೇಳಿದ್ದರು.
ಆದರೆ ನಂತರದ ದಿನಗಳಲ್ಲಿ ಅವರಿಬ್ಬರೂ ಪರಸ್ಪರ ಮಾತನಾಡಿಕೊಂಡು ಬ್ರೇಕ್ ಅಪ್ ಮಾಡಿಕೊಂಡರು.

ಈಗ ಈ ಕುರಿತು ರಾಕೇಶ್ ಬಿಗ್ ಬಾಸ್ ಮನೆಯಲ್ಲಿ ಕೂಡ ಮಾತನಾಡಿದ್ದಾರೆ. ನನ್ನ ಜೀವನ ಒಂದು ಓಪನ್ ಬುಕ್‌ ರೀತಿ ಎಲ್ಲಾನೂ ಓಪನ್‌ ಆಗಿಟ್ಟಿರುವೆ. ಹೌದು ಈ ಹಿಂದೆ ನಾನೊಂದು ರಿಲೇಷನ್‌ಶಿಪ್‌ನಲ್ಲಿ ಇದ್ದೆ. ಮ್ಯೂಚುಯಲ್‌ ಆಗಿ ನಾವು ಬ್ರೇಕಪ್ ಮಾಡಿಕೊಂಡೆವು. ಕೊನೆಯಲ್ಲಿ ನಾನು ಒಂದು ವಿಚಾರ ಅರ್ಥ ಮಾಡಿಕೊಂಡೆ. ನಾನೇ ಸರಿ ಇಲ್ಲ ಒಂದು ಸಂಬಂಧವನ್ನು ಸರಿಯಾಗಿ ನಡೆಸಲು ನನಗೆ ಸಾಮರ್ಥ್ಯವಿಲ್ಲ ಸರಿಯಾಗಿ ಹ್ಯಾಂಡಲ್ ಮಾಡುವುದಕ್ಕೆ ಬರೋಲ್ಲ. ನನ್ನ ಲೈಫ್‌ಸ್ಟೈಲ್‌ ಬೇರೆ ನನ್ನ ಪ್ರಯಾರಿಟಿಗಳು ತುಂಬಾನೇ ಬೇರೆ ಹೀಗಿರುವಾಗ ಬೇರೆ ಅವರ ವಿರುದ್ಧ ದೂರು ಮಾಡುವುದಕ್ಕೆ ಇಷ್ಟವಿಲ್ಲ. ಒಂದು ಸಲ ಜೀವನ ಹಿಂತಿರುಗಿ ನೋಡಿದರೆ ನಾನೇ ಇದಕ್ಕೆಲ್ಲಾ ರೆಡಿ ಇಲ್ಲ ಅನಿಸುತ್ತದೆ’ ಎಂದು ರಿಲೇಷನ್‌ಶಿಪ್‌ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಕ್ಲಾರಿಟಿ ಕೊಟ್ಟಿದ್ದಾರೆ.

ರಾಕೇಶ್ ಮತ್ತು ದಿವ್ಯಾ ಸುರೇಶ್ ಸಂಬಂಧದ ಬಗ್ಗೆ ರಾಕೇಶ್ ತಾಯಿ ಹೇಳಿದ್ದೇನು ?
ರಾಕೇಶ್ ನನ್ನ ಜೊತೆ ಎಲ್ಲ ವಿಷಯಗಳನ್ನು ಹಂಚಿಕೊಳ್ಳುತ್ತಾನೆ. ದಿವ್ಯಾ ರಾಕೇಶ್ ಪರಸ್ಪರ ಮಾತುಕತೆಯಿಂದ ಸಂತೋಷವಾಗೇ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ಆದರೆ ಅವರಿಬ್ಬರೂ ಈಗೂ ಒಳ್ಳೆಯ ಸ್ನೇಹಿತರು. ರಾಕೇಶ್ ಬಿಗ್ ಬಾಸ್ ಮನೆಗೆ ಹೋಗುವಾಗ ದಿವ್ಯಾ ಸುರೇಶ್ ಕಾಲ್ ಮಾಡಿ ವಿಶ್ ಕೂಡ ಮಾಡಿದ್ದಾಳೆ. ಅದು ಬಿಟ್ಟು ಯಾವುದೇ ಗಲಾಟೆಗಳು ನಡೆದಿಲ್ಲ ಎಂದು ರಾಕೇಶ್ ತಾಯಿ ಹೇಳಿದ್ದಾರೆ.

error: Content is protected !!
Scroll to Top
%d bloggers like this: