ಕೇವಲ 2,800 ರೂಪಾಯಿಗೆ ಖರೀದಿಸಿ 32 ಇಂಚಿನ ಸ್ಮಾರ್ಟ್ ಟಿವಿ | ಗಣೇಶ ಹಬ್ಬಕ್ಕೆ ಬಂಪರ್ ಆಫರ್!!!!

ಹೌದು. ಟಿ ವಿ ಕೊಳ್ಳುಗರಿಗೆ ಇದೊಂದು ಖುಷಿ ವಿಚಾರ ಅಂತ ಹೇಳ್ಬೋದು. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ದುಬಾರಿ ಟಿವಿಗಳನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು.

ಏಸರ್‌ನ ಐ-ಸೀರೀಸ್‌ನ ಸ್ಮಾರ್ಟ್ ಟಿವಿ ಶ್ರೇಣಿಯ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಏಸರ್ ಸ್ಮಾರ್ಟ್ ಟಿವಿಗಳಲ್ಲಿ ಅದ್ಭುತ ಕೊಡುಗೆಗಳನ್ನು ಹೊರತಂದಿದೆ. ಏಸರ್ ನ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಕೇವಲ 2800 ರೂ.ಗೆ ಖರೀದಿಸಬಹುದು.


ಗಣೇಶ ಚತುರ್ಥಿ 2022 ಕೊಡುಗೆಗಳು: Acer I ಸರಣಿ 32-ಇಂಚಿನ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ :
ಏಸರ್ ಐ ಸರಣಿಯ 32 ಇಂಚಿನ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ ಪ್ರಾರಂಭಿಕ ಬೆಲೆ 19,990 ರೂಪಾಯಿ. ಆದರೆ, ಫ್ಲಿಪ್‌ಕಾರ್ಟ್‌ನಲ್ಲಿ ಈ ಟಿವಿಯನ್ನು 13,999ಗೆ ರೂಪಾಯಿಗೆ ಖರೀದಿಸಬಹುದು. ಅಂದರೆ ಶೇ.29ರಷ್ಟು ರಿಯಾಯಿತಿಯನ್ನು ಈ ಟಿವಿ ಮೇಲೆ ನೀಡಲಾಗುತ್ತಿದೆ. ಇನ್ನು ಬ್ಯಾಂಕ್ ಆಫರ್ ಮತ್ತು ಎಕ್ಸ್ಚೇಂಜ್ ಆಫರ್ ಸೇರಿಸಿದರೆ ಈ ಟಿವಿಯ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ.

ಏಸರ್ ಐ ಸರಣಿ 32-ಇಂಚಿನ ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಬ್ಯಾಂಕ್ ಆಫರ್ :
ಏಸರ್ ಐ ಸರಣಿಯ 32-ಇಂಚಿನ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯನ್ನು ಖರೀದಿಸಲು SBI ಡೆಬಿಟ್ ಕಾರ್ಡ್ ಬಳಸಿದರೆ, 250 ರೂಪಾಯಿ ರಿಯಾಯಿತಿಯನ್ನು ಪಡೆಯಬಹುದು. ಈ ರಿಯಾಯಿತಿಯ ನಂತರ ಟಿವಿಯ ಬೆಲೆ 13,749 ರೂ. ಆಗಲಿದೆ. ಅದರ ನಂತರ ಎಕ್ಸ್ ಚೇಂಜ್ ಆಫರ್ ನ ಲಾಭವನ್ನು ಕೂಡಾ ಪಡೆಯಬಹುದು.

ಏಸರ್ ಐ ಸರಣಿ 32-ಇಂಚಿನ ಸ್ಮಾರ್ಟ್ಆಂಡ್ರಾಯ್ಡ್ ಟಿವಿ ಎಕ್ಸ್ಚೇಂಜ್ ಆಫರ್ :
ಏಸರ್ ಐ ಸಿರೀಸ್ 32 ಇಂಚಿನ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ ಮೇಲೆ 11 ಸಾವಿರ ರೂಪಾಯಿ ಎಕ್ಸ್ ಚೇಂಜ್ ಆಫರ್ ನೀಡಲಾಗಿದೆ. ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ ದೊಡ್ಡ ಮೊತ್ತದ ಲಾಭ ಪಡೆಯಬಹುದು. ಆದರೆ, ವಿನಿಮಯ ಮಾಡಿಕೊಳ್ಳುವ ಹಳೆಯ ಟಿವಿ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 11 ಸಾವಿರದ ಪೂರ್ಣ ಆಫ್ ಲಭ್ಯವಿರುತ್ತದೆ. ಈ ಪೂರ್ಣ ರಿಯಾಯಿತಿ ಪಡೆಯುವುದು ಸಾಧ್ಯವಾದರೆ, ಟಿವಿಯ ಬೆಲೆ 2,749 ರೂ. ಆಗಲಿದೆ. ಅಂದರೆ ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಟಿವಿಯನ್ನು ಕೇವಲ 2800 ರೂಪಾಯಿಗೆ ಖರೀದಿಸಬಹುದು.

Leave A Reply

Your email address will not be published.