ಅಂತ್ಯಸಂಸ್ಕಾರಕ್ಕೆಂದು ಇಟ್ಟ ಮಗು, ತಾಯಿ ಕಂಡಳು ಮಗುವಿನ ಉಸಿರಾಟದ ಹಬೆ, ನಂತರ ನಡೆದದ್ದೇ ಪವಾಡ!!!

ಈ ಜಗತ್ತು ಒಂದು ವಿಸ್ಮಯ ನಗರಿ. ಇಲ್ಲಿ ನಡೆಯುವ ಅದ್ಭುತಗಳನ್ನು ನೋಡಿ ಜನ ಅಚ್ಚರಿಯಿಂದ ಮೂಕವಿಸ್ಮಿತರಾಗುವುದನ್ನು ನೋಡಿದ್ದೇವೆ. ಜಗತ್ತಿನಲ್ಲಿ ನಡೆಯುವ ಪವಾಡಗಳನ್ನು ಕೆಲವೊಮ್ಮೆ ನಂಬಲಸಾಧ್ಯ. ಅಂತ್ಯ ಸಂಸ್ಕಾರವನ್ನು ಮಾಡಲು ಹೊರಟಾಗ ಮಲಗಿದ್ದ ವ್ಯಕ್ತಿ ಇದ್ದಕಿದ್ದಂತೆ ಎದ್ದು ಕೂತದ್ದು ಇಂತಹ ಅನೇಕ ಊಹಿಸಲು ಅಸಾಧ್ಯವಾದ ಘಟನೆಗಳು ನಡೆದಿದೆ.

ಇಂತಹುದೇ ಒಂದು ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಮಗು ಮರಣ ಹೊಂದಿದೆ ಎಂದು ಹೇಳಿದ ಡಾಕ್ಟರ್. ಆದರೆ ಅನಂತರ ಮಗು ಸ್ವಲ್ಪಹೊತ್ತಲ್ಲೇ ಕಣ್ಣು ಬಿಟ್ಟಿದ್ದು, ಜೀವಂತವಾಗಿದ್ದ ಪವಾಡವೊಂದು ನಡೆದಿದೆ.
ಸತ್ತಿದೆ ಎಂದು ಶವ ಪೆಟ್ಟಿಗೆಯಲ್ಲಿಟ್ಟ ಮೂರು ವರ್ಷದ ಪುಟ್ಟ ಕಂದಮ್ಮನ ಕಳೆದುಕೊಂಡ ದುಃಖದಲ್ಲಿ ರೋಧಿಸುತ್ತಿದ್ದ ತಾಯಿ ಶವ ಪೆಟ್ಟಿಗೆಯಲ್ಲಿದ್ದ ಮಗುವನ್ನು ಗಮನಿಸಿದಾಗ ಗಾಜಿನ ಮೇಲೆ ಮಂಜು ಕವಿದಿರುವುದಲ್ಲದೆ ಮಗುವನ್ನೇ ದಿಟ್ಟಿಸಿದಾಗ ಮಗು ಅನಿರೀಕ್ಷಿತವಾಗಿ ಕಣ್ಣುಬಿಟ್ಟಿದೆ. ಇದನ್ನು ಕಂಡ ಮನೆಯವರು ಬೆರಗಾಗಿ ಮಗು ಜೀವಂತವಾಗಿದೆ ಎಂಬುದು ಖಾತ್ರಿಯಾಗಿದೆ. ವೈದ್ಯರ ನಿರ್ಲಕ್ಷ್ಯ ಧೋರಣೆಯ ಜೊತೆಗೆ ಆತುರದ ನಡೆ ಒಂದು ಹಸುಳೆಯ ಸಾವಿಗೆ ಎಡೆ ಮಾಡಿ ಕೊಟ್ಟಿದೆ. ಆದರೂ ಅದೃಷ್ಟವಶಾತ್ ಮಗು ಸಾವಿನ ದವಡೆಯಿಂದ ಪಾರಾಗಿದೆ.

ಈ ಘಟನೆ ಮೆಕ್ಸಿಕೋದಲ್ಲಿ ನಡೆದಿದ್ದು, ಮೂರು ವರ್ಷದ ಮೆಲ್ಡೋಜಾ ತನ್ನ ತಾಯಿಯೊಂದಿಗೆ ವಿಲ್ಲಾ ಡಿರೋಮೋಸ್ ಎಂಬ ಪ್ರದೇಶದಲ್ಲಿ ನೆಲೆಸಿದ್ದಾರೆ. ಆಗಸ್ಟ್ 17ರಂದು 3 ವರ್ಷದ ಮಗುವಿಗೆ ತೀವ್ರ ಹೊಟ್ಟೆ ನೋವು, ವಾಂತಿ ,ಜ್ವರ ಕಾಣಿಸಿಕೊಂಡಿತ್ತು. ಮನೆಯ ಪಕ್ಕದಲ್ಲೇ ಇದ್ದ ವೈದ್ಯರ ಬಳಿ ತಾಯಿ ಮಗುವನ್ನು ಕರೆದೊಯ್ದಾಗ ಮಗು ನಿರ್ಜಲೀಕರಣಗೊಂಡಿರುವುದರಿಂದ ಒಂದು ಪ್ಯಾರಸಿಟಮಾಲ್ ಮಾತ್ರೆ ನೀಡಿ, ಕೂಡಲೇ ಬೇರೆ ಆಸ್ಪತ್ರೆಗೆ ದಾಖಲಿಸಲು ಡಾಕ್ಟರ್ ತಿಳಿಸಿದ್ದಾರೆ.

ವೈದ್ಯರ ಸಲಹೆಯಂತೆ ಪೋಷಕರು ಮೆಲ್ಡೋಜಾಳನ್ನು ಆಸ್ಪತ್ರೆಗೆ ಸೇರಿಸಿದಾಗ, ಪರೀಕ್ಷಿಸಿದ ಡಾಕ್ಟರ್ ಮಗುವಿನ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ ಎಂದು ತಿಳಿಸಿ ಚಿಕಿತ್ಸೆ ನೀಡಿದ್ದು, ಸ್ವಲ್ಪ ಹೊತ್ತಿನ ಬಳಿಕ ವೈದ್ಯರು ಮಗು ಮೃತಪಟ್ಟಿರುವುದನ್ನು ಧೃಡಪಡಿಸಿದ್ದಾರೆ.

ಹಾಗಾಗಿ ಮಗುವಿನ ಪೋಷಕರು ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಿದ್ದಾರೆ.
ಮಗುವನ್ನು ಶವ ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಸ್ವಲ್ಪ ಹೊತ್ತಿನ ಬಳಿಕ ಶವ ಪೆಟ್ಟಿಗೆ ಗಮನಿಸಿದ ತಾಯಿಗೆ ಗಾಜಿನಲ್ಲಿ ಮಂಜು ಕವಿದಿರುವುದು ಕಂಡ ನಂತರ ಮಗುವನ್ನು ದಿಟ್ಟಿಸಿದಾಗ ಮಗುವಿನಲ್ಲಿ ಚಲನೆಯ ಜೊತೆಗೆ ಶಬ್ದವು ಹೊರಹೊಮ್ಮಿದೆ. ಕೂಡಲೇ ತಡ ಮಾಡದೆ ಮಗುವನ್ನು ಶವ ಪೆಟ್ಟಿಗೆಯಿಂದ ಹೊರತೆಗೆದಾಗ ಮಗು ಜೀವಂತವಾಗಿದೆ ಎಂಬುದು ಮನೆಯವರಿಗೆಲ್ಲ ಖಾತರಿಯಾಗಿ ಆನಂದದ ಜೊತೆಗೆ ಅಚ್ಚರಿ ಮೂಡಿ, ಮಗುವನ್ನು ಮರಳಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ತಾಯಿ ವೈದ್ಯರ ನಿರ್ಲಕ್ಷ್ಯ ಧೋರಣೆಗೆ ಮುನಿಸಿಕೊಂಡು ದೂರು ನೀಡಲು ಪೊಲೀಸ್ ಮೆಟ್ಟಿಲೇರಿದ್ದರೆ, ಮನೆಯವರು ಮಗು ಸಾವಿನ ದವಡೆಯಿಂದ ಪಾರಾಗಿದೆ ಎಂಬ ನೆಮ್ಮದಿಯ ನಿಟ್ಟುಸಿರಿಂದ ಕೊಂಚ ಸಮಾಧಾನಗೊಂಡಿದ್ದಾರೆ.

Leave A Reply

Your email address will not be published.