ಬುಲ್ ಬುಲ್ ಹಕ್ಕಿಯ ಮೇಲೆ
ಸಾವರ್ಕರ್ ಪ್ರಯಾಣ…!!!!

ಸಾವರ್ಕರ್ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಾಗಲೇ ರಾಜ್ಯ ಸರ್ಕಾರ ಪಠ್ಯಪುಸ್ತಕದಲ್ಲಿ ವೀರ ಸಾವರ್ಕರ್ ಕುರಿತಾದ ಪಠ್ಯವನ್ನು ಸೇರ್ಪಡೆ ಮಾಡಿದೆ.

2022 ರಲ್ಲಿ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪರಿಷ್ಕರಣೆ ಪಠ್ಯದಲ್ಲಿ ಸಾವರ್ಕರ್ ಅವರ ಕುರಿತಾದ ಪಠ್ಯ ಸೇರ್ಪಡೆ ಮಾಡಲಾಗಿದೆ. 8ನೇ ತರಗತಿ ಕನ್ನಡ ವಿಷಯದಲ್ಲಿ ಕೆ.ಟಿ. ಗಟ್ಟಿ ರಚನೆಯ ʼಕಾಲವನ್ನು ಗೆದ್ದವರುʼ ಎಂಬ ಪಠ್ಯವನ್ನು ಸೇರಿಸಲಾಗಿದೆ.
ಈ ಪಠ್ಯದಲ್ಲಿ ಸಾವರ್ಕರ್ ಅವರು ಅಂಡಮಾನ್ ಜೈಲಿ‌ನಲ್ಲಿ ಇದ್ದ ವಿವರ, ಅವರಿಗೆ ನೀಡಿದ ಶಿಕ್ಷೆ, ಅವರ ಹೋರಾಟಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. 2017-18 ರಲ್ಲಿ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯದಲ್ಲಿದ್ದ ವಿಜಯಮಾಲಾ ರಂಗನಾಥ್ ರಚಿತ ಬ್ಲಡ್ ಗ್ರೂಪ್ ಪಠ್ಯವನ್ನು ಕೈ ಬಿಟ್ಟು ಹೊಸದಾಗಿ ಕಾಲವನ್ನು ಗೆದ್ದವರು ಎಂಬ ಸಾವರ್ಕರ್ ಪಠ್ಯ ಸೇರ್ಪಡೆ ಮಾಡಲಾಗಿದೆ.

ಸಾವರ್ಕರ್ ಅವರನ್ನು ಬ್ರಿಟಿಷರು ಬಂಧಿಸಿಟ್ಟಿದ್ದ ಸಂದರ್ಭದಲ್ಲಿ ಅಂಡಮಾನ್ ಜೈಲಿನ ಕೋಣೆಗೆ ಬುಲ್ ಬುಲ್ ಹಕ್ಕಿಗಳು ಬರುತ್ತಿದ್ದವು. ಅವುಗಳ ರೆಕ್ಕೆಗಳ ಮೇಲೆ ಕುಳಿತು ಸಾವರ್ಕರ್ ಪ್ರತಿ ದಿನ ತಾಲ್ಲೂಾಡಿನ ನೆಲವನ್ನು ಸಂಪರ್ಕಿಸಿ ಬರುತ್ತಿದ್ದರು ಎಂದು ಎಂಟನೇ ತರಗತಿಯ ಪಠ್ಯದಲ್ಲಿ ಸಾವರ್ಕರ್ ಕುರಿತಾದ ಪಾಠದಲ್ಲಿದೆ. ದೇಶಭಕ್ತಿ ವರ್ಣಿಸುವ ಬರದಲ್ಲಿ ಉಪ್ಪೇಕ್ಷೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಬ್ರಿಟಿಷರಿಂದ ಕಠೋರ ಶಿಕ್ಷೆಗೆ ಗುರಿಯಾದ ಸಾವರ್ಕರ್ ಅವರನ್ನು ಎರಡು ಜೀವಾವಧಿ ಶಿಕ್ಷೆಗಳಿಗೆ ಗುರಿಪಡಿಸಿ ಅಂಡಮಾನ್ ಜೈಲಿನಲ್ಲಿ ಇಡಲಾಗಿತ್ತು. ಬುಲ್ ಬುಲ್ ಹಕ್ಕಿಗಳು ಸಾವರ್ಕರ್ ಕೋಣೆಯೊಳಗೆ ಬರುತ್ತಿದ್ದವು. ಅವುಗಳ ರೆಕ್ಕೆಯ ಮೇಲೆ ಕುಳಿತು ಸಾವರ್ಕರ್ ಪ್ರತಿದಿನ ತಾಲ್ಲೂಾಡಿನ ನೆಲವನ್ನು ಸಂಪರ್ಕಿಸಿ ಬರುತ್ತಿದ್ದರು ಎನ್ನುವ ಸಾಲುಗಳು ಪಠ್ಯದಲ್ಲಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಯಿಂದ ಪ್ರಾರಂಭ ಆಗಿರುವ ಸಾವರ್ಕರ್ ಕುರಿತ ವಾರ್‌ಗೆ ಈಗ ಪಠ್ಯ ಸೇರ್ಪಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಪರ/ ವಿರೋಧ ಚರ್ಚೆಗೆ ಕಾರಣವಾಗಿದೆ.

Leave A Reply

Your email address will not be published.