ಮೀಶೋ ಉದ್ಯೋಗಿಗಳಿಗೆ ಕಂಪನಿಯಿಂದ ಬಿಗ್ ಶಾಕ್!

ಮೀಶೋ ಉದ್ಯೋಗಿಗಳಿಗೆ ಬಿಗ್ ಶಾಕ್ ಒಂದು ಎದುರಾಗಿದ್ದು, ಮೀಶೋ ಭಾರತದಲ್ಲಿ ತನ್ನ ದಿನಸಿ ವ್ಯವಹಾರವನ್ನ ಮುಚ್ಚಿದೆ. ಈ ಕಾರಣದಿಂದಾಗಿ, ಸುಮಾರು 300 ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಿದೆ.

ಭಾರತದ ಶೇಕಡಾ 90ಕ್ಕೂ ಹೆಚ್ಚು ನಗರಗಳಲ್ಲಿ ಸೂಪರ್ ಸ್ಟೋರ್ ಹೆಸರಿನಲ್ಲಿ ನಡೆಯುತ್ತಿರುವ ಕಿರಾಣಿ ವ್ಯಾಪಾರವನ್ನ ಮುಚ್ಚಿದೆ. ಮೀಶೋ ಪ್ರಸ್ತುತ ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಸೂಪರ್ ಸ್ಟೋರ್‌ಗಳನ್ನು ಹೊಂದಿದೆ. ಪ್ರಸ್ತುತ, ಈ ಮಳಿಗೆಗಳು ನಾಗ್ಪುರ ಮತ್ತು ಮೈಸೂರಿನಲ್ಲಿ ಮಾತ್ರ ನಡೆಯುತ್ತಿವೆ.

ಈ ಕಾರಣದಿಂದಾಗಿ ಕಂಪನಿಯು ವಿವಿಧ ನಗರಗಳಲ್ಲಿ ಸುಮಾರು 300 ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಿದೆ. ಆದಾಗ್ಯೂ, ಮೀಶೋ ಕಂಪನಿಯು ಈ ಬೆಳವಣಿಗೆಯ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಹಿಂದೆ, ಸಾಮಾಜಿಕ ವಾಣಿಜ್ಯ ವೇದಿಕೆಯು ಕೊರೊನಾ ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲೂ 200ಕ್ಕೂ ಹೆಚ್ಚು ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಿತ್ತು. ಒಂದು ವರದಿಯ ಪ್ರಕಾರ, ಹೆಚ್ಚಿನ ನಗರಗಳಲ್ಲಿ ಕಾರ್ಯಾಚರಣೆಗಳನ್ನ ಮುಚ್ಚುವುದರ ಹಿಂದೆ ಬಂಡವಾಳದ ಕೊರತೆ ಇದೆ ಎಂದು ಹೇಳಲಾಗುತ್ತದೆ.

Leave A Reply

Your email address will not be published.