KPSC : 1323 SDA ನೇಮಕಾತಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ

ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳ ಕಿರಿಯ ಸಹಾಯಕರು/ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ಪರೀಕ್ಷೆಯ ಅರ್ಹತಾ ಪಟ್ಟಿಯನ್ನು ಆಗಸ್ಟ್ 25 ರಂದು ಪ್ರಕಟಿಸಲಿದೆ.

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿಯಿದ್ದ 1,323 ಕಿರಿಯ ಸಹಾಯಕರ ನೇಮಕಾತಿಗೆ 2019-20 ನೇ ಸಾಲಿನಲ್ಲಿ ಅಧಿಸೂಚನೆ ಹೊರಡಿಸಿ 2021 ರ ಸೆ. 18 ಹಾಗೂ 19 ರಂದು ಪರೀಕ್ಷೆ ನಡೆಸಲಾಗಿತ್ತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಗಿದಿದ್ದು, ಆಗಸ್ಟ್ 25 ರಂದು ಅರ್ಹತಾ ಪಟ್ಟಿ ಪ್ರಕಟಿಸುವುದಾಗಿ ಕೆಪಿಎಸ್ ಸಿ ಕಾರ್ಯದರ್ಶಿ ಕಿಶೋರ್ ವಿಕಾಸ್ ಸುರಸ್ಕರ್ ತಿಳಿಸಿದ್ದಾರೆ.

ಇನ್ನು ಗ್ರೂಪ್ ಎ ಹುದ್ದೆಯಾದ 2019-20 ನೇ ಸಾಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ (ACF) ತಾತ್ಕಾಲಿಕ ಅರ್ಹತಾ ಪಟ್ಟಿ ನವೆಂಬರ್ 30 ರಂದು ಪ್ರಕಟವಾಗಲಿದೆ.

Leave A Reply

Your email address will not be published.