ಪುರುಷರಿಗೆ ಕಾಡುವ ಈ ‘ ಬ್ಲೂ ಬಾಲ್ ‘ ಸಮಸ್ಯೆಗೆ ಕಾರಣವೇನು? ಇದರಿಂದ ಮುಕ್ತಿ ಹೇಗೆ? ಉತ್ತರ ಇಲ್ಲಿದೆ

‘ಬ್ಲೂ ಬಾಲ್’ ಎಂಬುದನ್ನು ಪುರುಷರು ಅಪರೂಪವಾಗಿ ಬಳಸುತ್ತಾರೆ. ಆದರೆ ಈ ಸಮಸ್ಯೆ ಪುರುಷರು ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸುತ್ತಾರೆ. ಮುಖ್ಯವಾದ ವಿಷಯವೇನೆಂದರೆ ಇದು ದೇಹಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಆದ್ದರಿಂದ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ‌. ಇದನ್ನು ಸುಲಭವಾಗಿ ನಿವಾರಿಸಬಹುದು. ವಿಶೇಷವೆಂದರೆ ಪುರುಷರ ಈ ಸ್ಥಿತಿಯ ಬಗ್ಗೆ ಯಾವುದೇ ವಿಶೇಷ ಸಂಶೋಧನೆಯನ್ನು ಮಾಡಲಾಗಿಲ್ಲ. ಆದ್ದರಿಂದ, ಈ ಬಗ್ಗೆ ಸಲಹೆಗಳನ್ನು ಮಾತ್ರ ನೀಡಬಹುದು. ನಿಮಗೂ ಬ್ಲೂ ಬಾಲ್ ಬಗ್ಗೆ ತಿಳಿಯಬೇಕು ಎಂಬ ಆಸಕ್ತಿ ಇದ್ದರೆ, ಈ ಮಾಹಿತಿ ಓದಿ.

ಬ್ಲೂ ಬಾಲ್ ಎಂದರೇನು? ಬ್ಲೂ ಬಾಲ್ ಇದು ಒಂದು ರೀತಿಯ ಮಾನಸಿಕ ಸ್ಥಿತಿ. ಶಾರೀರಿಕ ಸಂಬಂಧ ( ಸೆಕ್ಸ್) ಗಳಿಲ್ಲದೆ ದೀರ್ಘಕಾಲದವರೆಗೆ ಪುರುಷರು ಉದ್ವಿಗ್ನರಾಗಿರುತ್ತಾರೆ. ಈ ಪರಿಸ್ಥಿತಿಯಲ್ಲಿ ಪುರುಷರು ತುಂಬಾನೇ ಎಕ್ಸೈಟ್ ಆಗಿರುತ್ತಾರೆ. ಅಂದರೆ ಅವರು ಆರ್ಗಸಂ ಪಡೆಯುವುದಿಲ್ಲ. ಕೊನೆಯಲ್ಲಿ ಅವರು ತಮ್ಮ ಎಕ್ಸೈಟ್ ಮೆಂಟ್ ಕಳೆದುಕೊಳ್ಳುತ್ತಾರೆ.

ಈ ಬ್ಲೂ ಬಾಲ್ ಅನೇಕ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಇದೊಂದು ಸಾಮಾನ್ಯ ಸಮಸ್ಯೆಯಾಗಿ ಕಂಡರೂ ಕೆಲವೊಮ್ಮೆ ಪುರುಷರನ್ನು ದೈಹಿಕವಾಗಿ ತೊಂದರೆಗೊಳಿಸಬಹುದು.

ಇದರ ಲಕ್ಷಣ : ವೃಷಣಗಳಲ್ಲಿ ನೋವು, ಪುರುಷರಿಗೆ ಖಾಸಗಿ ಭಾಗದಲ್ಲಿ ನೋವು ಕಾಡಬಹುದು. ಈ ನೋವು ಕೆಲವೊಮ್ಮೆ ಎಷ್ಟು ಹೆಚ್ಚಾಗುತ್ತೆ ಎಂದರೆ ಅದು ಕೆಳಹೊಟ್ಟೆ ಮತ್ತು ಸೊಂಟದವರೆಗೂ ತಲುಪಬಹುದು.

ಬ್ಲೂ ಬಾಲ್ ಸಮಸ್ಯೆ ಬರುವುದಕ್ಕೆ ಕಾರಣ ಏನು?
ಕಾಮೋತ್ತೇಜಕಗಳ ಕಾರಣದಿಂದಾಗಿ, ಲಿಕ್ವಿಡ್ ಹೊರಚರ್ಮದಲ್ಲಿ ಶೇಖರಣೆಯಾಗುತ್ತದೆ. ದೀರ್ಘಕಾಲದವರೆಗೆ ಸ್ಪಲನದ ಕೊರತೆ ಉಂಟಾಗುವುದು ಇದಕ್ಕೆ ಕಾರಣ. ಈ ಸಂದರ್ಭದಲ್ಲಿ ಸೆಕ್ಸ್ ಮಾಡುವಾಗ, ವೀರ್ಯವು ಎಲ್ಲೆಡೆಯಿಂದ ಹೋಗುವಂತಹ ಪರಿಸ್ಥಿತಿ ಬರುತ್ತದೆ. ಆದರೆ ಇದು ಸಂಭವಿಸದಿದ್ದರೆ, ಬ್ಲೂ ಬಾಲ್ ಸಮಸ್ಯೆ ಉಂಟಾಗುತ್ತೆ. ಆದರೆ, ಈ ಸ್ಥಿತಿಯನ್ನು ಕೆಲವು ಗಂಟೆಗಳಲ್ಲಿ ಗುಣಪಡಿಸಲಾಗುವುದು.

ಹೆಚ್ಚಿನ ಪುರುಷರು ತಮ್ಮಲ್ಲೇ ಏನೋ ಕೊರತೆ ತಮ್ಮದೇ ತಪ್ಪು ಎಂದು ಅಂದುಕೊಳ್ಳುತ್ತಾರೆ. ಹಾಗಾಗಿ ತಮ್ಮನ್ನು ತಾವೇ ದೂಷಿಸಿಕೊಳ್ಳುತ್ತಾರೆ. ಆದರೆ ಈ ಆಲೋಚನೆ ತಪ್ಪು. ಬದಲಾಗಿ, ಅದರಿಂದ ಹೊರಬರಲು ಮಾರ್ಗಗಳನ್ನು ಕಂಡುಕೊಂಡರೆ ಒಳ್ಳೆಯದು.

ಬ್ಲೂ ಬಾಲ್ ಸಮಸ್ಯೆಗೆ ಮೊದಲ ಪರಿಹಾರವೆಂದರೆ ಪರಾಕಾಷ್ಠೆ. ಇದು ತುಂಬಾನೆ ಫಾಸ್ಟ್ ಆಗಿರೋ ರಿಸಲ್ಟ್ ಕೊಡುತ್ತೆ. ಜೊತೆಗೆ ನಿಮ್ಮ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಮತ್ತೊಂದು ವಿಷಯ ಏನೆಂದರೆ ಆರ್ಗಸಂನಿಂದ ಒತ್ತಡ ಕೂಡಾ ಕಡಿಮೆಯಾಗುತ್ತದೆ.

ಆರ್ಗಸಂ ಉಂಟಾದಾಗ, ನಿಮ್ಮ ಖಾಸಗಿ ಭಾಗದಲ್ಲಿ ರಕ್ತವು ಹರಿದುಹೋಗುತ್ತದೆ ಮತ್ತು ನಿಮಗೆ ಆರಾಮವನ್ನು ನೀಡುತ್ತದೆ. ಹಸ್ತಮೈಥುನದಿಂದ ಈ ಕೆಲಸವನ್ನು ಸುಲಭವಾಗಿ ಮಾಡಬಹುದು. ಇದಲ್ಲದೆ, ಸಂಗಾತಿಯೊಂದಿಗೆ ಸೆಕ್ಸ್ ಮಾಡುವ ಮೂಲಕವೂ ಇದನ್ನು ಮಾಡಬಹುದು. ಆದರೆ ಈ ಕೆಲಸಕ್ಕಾಗಿ, ನೀವು ನಿಮ್ಮ ಸಂಗಾತಿಯ ಮೇಲೆ ಅನಗತ್ಯ ಒತ್ತಡವನ್ನು ಹಾಕಬೇಕಾಗಬಹುದು. ಆದ್ದರಿಂದ ಪರಿಸ್ಥಿತಿಗೆ ಅನುಗುಣವಾಗಿ ಕೆಲಸ ಮಾಡಿ.

ವ್ಯಾಯಾಮ : ವ್ಯಾಯಾಮ ಮಾಡುವಾಗ, ಜನನಾಂಗಗಳಿಂದ ರಕ್ತ ಹರಿಯುತ್ತದೆ. ಇದು ದೇಹದ ಇತರ ಭಾಗಗಳನ್ನು ತಲುಪುತ್ತದೆ. ಹೀಗೆ ಆದಾಗ ಹೆಚ್ಚಿನ ನೋವು ಉಂಟಾಗೋದಿಲ್ಲ.

ಕೋಲ್ಡ್ ವಾಟರ್ ಕೂಡಾ ಉತ್ತಮ ಪರಿಹಾರ ನೀಡುತ್ತದೆ. ಅನೇಕ ಬಾರಿ ಹಸ್ತಮೈಥುನ ಅಥವಾ ಸೆಕ್ಸ್ ಮಾಡಲು ಸಾಧ್ಯವಾಗೋದಿಲ್ಲ. ಈ ಸಮಯದಲ್ಲಿ ವೃಷಣಗಳ ಮೇಲೆ ಕೋಲ್ಡ್ ವಾಟರ್ ಹಾಕುವ ಮೂಲಕ ನಿಮ್ಮ ಸಮಸ್ಯೆ ನಿವಾರಿಸಬಹುದು. ಆರಂಭದಲ್ಲಿ ಇದು ನಿಮಗೆ ಕಷ್ಟ ಅಂತ ಅನಿಸುತ್ತದೆ. ಆದರೆ ಇದು ಖಂಡಿತವಾಗಿಯೂ ನೋವನ್ನು ನಿವಾರಿಸುತ್ತದೆ.

ಬ್ಲೂ ಬಾಲ್ ಉಂಟಾಗಲು ಮುಖ್ಯ ಕಾರಣ, ಲೈಂಗಿಕತೆ ಅಥವಾ ಸೆಕ್ಸ್ ಬಗ್ಗೆ ಯೋಚನೆ ಮಾಡೋದು. ಸೆಕ್ಸ್ ಗೆ ಸಂಬಂಧಿಸಿದ ವಿಷಯಗಳಿಂದ ನೀವು ನಿಮ್ಮ ಮನಸ್ಸನ್ನು ದೂರ ಮಾಡಬೇಕು. ಹಾಗಾಗಿ ನೀವು ಇವುಗಳ ಬಗ್ಗೆ ಯೋಚನೆ ಮಾಡೋದನ್ನು ನಿಲ್ಲಿಸಿದರೆ, ಸಮಸ್ಯೆಯಿಂದ ಹೊರ ಬರಲು ಶೀಘ್ರ ಸಾಧ್ಯವಾಗುತ್ತದೆ.

Leave A Reply

Your email address will not be published.