ಸಮುದ್ರದ ತೀರದಲ್ಲಿ ಉಡಗಳ ಅದ್ಭುತ ಆಲಿಂಗನ, ಅಚ್ಚರಿ ಮೂಡಿಸುತ್ತದೆ ಈ ಅಪರೂಪದ ದೃಶ್ಯ | ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್

ಇಲ್ಲಿಯವರೆಗೆ ನಾವು ಮನುಷ್ಯರೇ ಪ್ರೀತಿಯಿಂದ ಅಪ್ಪುವ ದೃಶ್ಯ ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಉಡಗಳ ಆಲಿಂಗನ ಅದ್ಭುತ ವೀಡಿಯೋವೊಂದು ವೈರಲ್ ಆಗಿದೆ.

ಪ್ರೀತಿ ನಿಜಕ್ಕೂ ಅದ್ಭುತ‌. ಪ್ರೀತಿ ವ್ಯಕ್ತಪಡಿಸಲು ನಾನಾ ವಿಧಗಳಿವೆ. ಅದರಲ್ಲಿ ಆಲಿಂಗನ ಕೂಡಾ ಒಂದು. ಪ್ರೀತಿಯ ಆಲಿಂಗನ ಬದುಕಿಗೊಂದು ಶಕ್ತಿ. ಹಾಗಂತ, ಮನುಷ್ಯರಲ್ಲಿ ಮಾತ್ರ ಇಂತಹ ಬಾಂಧವ್ಯ ಇಲ್ಲ. ನಾವು ಸಕಲ ಜೀವರಾಶಿಯಲ್ಲೂ ಪ್ರೀತಿಯ ಇಂತಹ ಸುಂದರ ದೃಶ್ಯಗಳನ್ನು ನೋಡಬಹುದು. ಅದಕ್ಕೆ ಸಾಕ್ಷಿ ಈ ದೃಶ್ಯ.

ಕೆಲವೊಂದು ದೃಶ್ಯಗಳು ನಮ್ಮನ್ನು ನಿಜಕ್ಕೂ ಹುಬ್ಬೇರಿಸುವಂತೆ ಮಾಡುತ್ತದೆ. ಹಾಗೆನೇ ಈ ವೀಡಿಯೋ ಕೂಡಾ ಅದೇ ಸಾಲಿಗೆ ಸೇರುತ್ತದೆ. ಏಕೆಂದರೆ ನಿಜಕ್ಕೂ ಅಷ್ಟೊಂದು ಅಚ್ಚರಿ ಮೂಡಿಸಿದ ವೀಡಿಯೋ ಇದು. ಕೆಲವರು ಈ ದೃಶ್ಯವನ್ನು ಎರಡೆರಡು ಸಲ ನೋಡಿದರೂ ಅಚ್ಚರಿಯೇನೂ ಇಲ್ಲ. ಇದು ಉಡಗಳ ಆಲಿಂಗನದ ದೃಶ್ಯ.

@glurpo ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸಮುದ್ರದ ತೀರದಲ್ಲಿ ಎರಡು ಉಡಗಳು ಪರಸ್ಪರ ಆಲಿಂಗಿಸಿಕೊಳ್ಳುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ದೃಶ್ಯವನ್ನು ನೋಡುವಾಗಲೇ ಅಚ್ಚರಿಯಾಗುತ್ತದೆ. ಇಂಗ್ಲೀಷ್‌ನಲ್ಲಿ ಇವುಗಳನ್ನು ಮಾನಿಟರ್ ಲಿಜಾರ್ಡ್ ಅಥವಾ ಕೊಮೊಡೊ ಡ್ರಾಗನ್ ಎಂದೂ ಕರೆಯುತ್ತಾರೆ.

ಈ ವೀಡಿಯೋ ಕ್ಲಿಪ್ ಎಲ್ಲಿ ಸೆರೆಯಾಗಿದ್ದು ಎಂಬುದು ನಿಖರಗೊಂಡಿಲ್ಲ. ಆದರೆ, ಈ ವಿಡಿಯೋ ಮಾತ್ರ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಎಲ್ಲರೂ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡುತ್ತಿದ್ದಾರೆ. ಹೀಗಾಗಿ, ಈ ವಿಡಿಯೋ ಈಗ ಸಾಕಷ್ಟು ವೀಕ್ಷಣೆಯನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿದೆ. ಈ ಉಡಗಳ ಆಲಿಂಗನದ ವೀಡಿಯೋ ಈ ಕೆಳಗೆ ನೀಡಲಾಗಿದೆ.

https://twitter.com/glurpo/status/1561605850267287552?ref_src=twsrc%5Etfw%7Ctwcamp%5Etweetembed%7Ctwterm%5E1561605850267287552%7Ctwgr%5E6ed3d6030caf8dc32e065bc49e245ff9ee669cbe%7Ctwcon%5Es1_c10&ref_url=https%3A%2F%2Fd-23114444643957309250.ampproject.net%2F2208051912001%2Fframe.html

Leave A Reply

Your email address will not be published.