ಶಿವನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವನು, ಲಕ್ಷ್ಮಿಮತ್ತು ಜಗನ್ನಾಥ ದೇವತೆಗಳು ಬುಡಕಟ್ಟು ಜನಾಂಗದಿಂದ ಬಂದವರು – ಕಿಚ್ಚು ಹಚ್ಚಿಸಿದ ಶಾಂತಿಶ್ರೀ ಧೂಳಿಪುಡಿ ಹೇಳಿಕೆ !

ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ, ವಿವಾದಗಳ ತವರು ಮನೆ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಹಲವು ವಿವಾದಾತ್ಮಕ ಸಂಗತಿಗಳಿಗೂ ಕಾರಣವಾಗಿರುವ ಜೆಎನ್ ಯು ಈಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಜೆಎನ್ ಯು ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಅವರು ನೀಡಿದ ಹೇಳಿಕೆ ಸಾಕಷ್ಟು ಚರ್ಚೆಗೆ ಆಹಾರವಾಗಿದೆ.

ಜೆಎನ್ ಯು ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಅವರು, ‘ಹಿಂದೂ ದೇವರು ಮತ್ತು ದೇವತೆಗಳು ಮೇಲ್ಜಾತಿಗೆ ಸೇರಿದವರಲ್ಲ. ಭಗವಂತ ಶಿವನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವನು ಆಗಿರಬಹುದು’ ಎಂದು ಹೇಳಿಕೆ ನೀಡಿದ್ದಾರೆ. “ಮನುಕುಲದ ವಿಜ್ಞಾನದ ಪ್ರಕಾರ ನಮ್ಮ ದೇವರುಗಳ ಮೂಲವನ್ನು ತಿಳಿದಿರಬೇಕು. ಯಾವ ದೇವರು ಬ್ರಾಹ್ಮಣನಲ್ಲ. ಅತ್ಯುನ್ನತ ಸ್ಥಾನಮಾನ ಹೊಂದಿರುವ ಜಾತಿಯೆಂದರೆ ಕ್ಷತ್ರಿಯ. ಭಗವಂತ ಶಿವನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವನಾಗಿರಬೇಕು” ಹೀಗಂತ ಅವರು ಹೇಳಿಕೆ ನೀಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

ಜಾತಿ ಮತ್ತು ಧರ್ಮ ಕುರಿತ ಹಲವು ಹೇಳಿಕೆಗಳಿಂದ ಈಗಾಗಲೇ ದೇಶದಲ್ಲಿ ಸಮಾಜದ ಸ್ಥಿತಿ ಕೆಟ್ಟಿದೆ. ಕೋಮುವಾದ, ಪ್ರಚೋದನೆಗಳು ಹೆಚ್ಚುತ್ತಿದೆ. ಇಂತಹ ವೇಳೆ ಜೆಎನ್ ಯು ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಅವರ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಮನುಕುಲದ ವಿಜ್ಞಾನದ ಪ್ರಕಾರ ದೇವರುಗಳು ಉನ್ನತ ಜಾತಿಗೆ ಸೇರಿದವರಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದೆಹಲಿಯಲ್ಲಿ ಸೋಮವಾರ ವಿಚಾರ ಸಂಕಿರಣವನ್ನು ಆಯೋಜನೆ ಮಾಡಿತ್ತು. ಡಾ. ಬಿ.ಆರ್. ಅಂಬೇಡ್ಕರ್ ಲಿಂಗ ನ್ಯಾಯದ ಕುರಿತು ಚಿಂತನೆ: ಏಕರೂಪ ನಾಗರಿಕ ಸಂಹಿತೆಯ ಡಿಕೋಡಿಂಗ್ ಎಂಬ ವಿಚಾರವಾಗಿ ಮಾತನಾಡಿದ ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಅವರು, ಮನುಸ್ಮೃತಿಯಲ್ಲಿ ಮಹಿಳೆಯರಿಗೆ ಶೂದ್ರರ ಸ್ಥಾನಮಾನ ನೀಡಲಾಗಿದೆ ಎಂದಿದ್ದಾರೆ.

ಭಗವಂತ ಶಿವನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವನಾಗಿರಬೇಕು ಎಂದ ಶಾಂತಿಶ್ರೀ ಧೂಳಿಪುಡಿ

ಭಗವಂತ ಶಿವನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವನಾಗಿರಬೇಕು.’ ಏಕೆಂದರೆ ಅವನು ಸ್ಮಶಾನದಲ್ಲಿ ಕುಳಿತುಕೊಳ್ಳುತ್ತಾನೆ. ಹಾವುಗಳು ಅವನೊಟ್ಟಿಗೆ ವಾಸಿಸುತ್ತವೆ. ಕಡಿಮೆ ಬಟ್ಟೆ ಧರಿಸುತ್ತಾನೆ. ಸ್ಮಶಾನದಲ್ಲಿ ಬ್ರಾಹ್ಮಣರು ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಮನುಸ್ಮೃತಿ ಪ್ರಕಾರ ಎಲ್ಲಾ ಮಹಿಳೆಯರು ಶೂದ್ರರು. ಮಹಿಳೆಯರು ತಮ್ಮ ತಂದೆ ಅಥವಾ ಪತಿಯಿಂದ ಜಾತಿ ಸ್ಥಾನ ಪಡೆಯುತ್ತಾರೆ. ನಿಮ್ಮಲ್ಲಿ ಹೆಚ್ಚಿನವರು ಮನುಕುಲದ ವಿಜ್ಞಾನದ ಪ್ರಕಾರ ನಮ್ಮ ದೇವರುಗಳ ಮೂಲವನ್ನು ತಿಳಿದಿರಬೇಕು. ಯಾವ ದೇವರು ಕೂಡಾ ಬ್ರಾಹ್ಮಣನಲ್ಲ. ಅತ್ಯುನ್ನತ ಸ್ಥಾನಮಾನ ಹೊಂದಿರುವ ಜಾತಿಯೆಂದರೆ ಕ್ಷತ್ರಿಯ.

ದೇವಾನುದೇವತೆಗಳಲ್ಲಿ ಯಾರೂ ಕೂಡ ಮೇಲ್ಜಾತಿಯಿಂದ ಬಂದವರಲ್ಲ. ನೋಡಿದರೆ ದೇವಾನುದೇವತೆಗಳಲ್ಲಿ ಯಾರೂ ಕೂಡ ಮೇಲ್ಜಾತಿಯಿಂದ ಬಂದವರಲ್ಲ. ಹಾಗೇ ನೋಡಿದರೆ ಲಕ್ಷ್ಮಿ, ಶಕ್ತಿ ಮತ್ತು ಜಗನ್ನಾಥ ಎಲ್ಲಾ ದೇವತೆಗಳು ಬುಡಕಟ್ಟು ಜನಾಂಗದಿಂದ ಬಂದವರು. ಆದರೆ ಈಗಲೂ ನಾವು ಜಾತಿ ವ್ಯವಸ್ಥೆ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಇದು ನಿಜಕ್ಕೂ ಅಮಾನವೀಯ ಎಂದು ಹೇಳಿದ್ದಾರೆ.

ಅತ್ಯಂತ ಅಮಾನವೀಯವಾದ ಈ ತಾರತಮ್ಯವನ್ನು ಇನ್ನೂ ಏಕೆ ಮುಂದುವರಿಸುತ್ತಿದ್ದೇವೆ. ಬಾಬಾಸಾಹೇಬರ ಅಭಿಪ್ರಾಯವನ್ನು ನಾವು ಮರುಪರಿಶೀಲನೆ ಮಾಡಬೇಕಿದೆ. ಅಂತಹ ಶ್ರೇಷ್ಠ ಚಿಂತಕರು ಆಧುನಿಕ ಭಾರತದಲ್ಲಿ ಯಾವ ನಾಯಕರೂ ಇಲ್ಲ ಎಂದರು. ಹಿಂದೂ ಧರ್ಮ ಒಂದು ಧರ್ಮವಲ್ಲ. ಅದು ಜೀವನ ವಿಧಾನ. ಹೀಗಿದ್ದಾಗಲೂ ನಾವು ಟೀಕೆಗಳಿಗೆ ಯಾಕೆ ಹೆದರುತ್ತೇವೆ ಎಂದು ಪ್ರಶ್ನಿಸಿದರು.

ಜಲೋರ್‌ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಉಪಕುಲಪತಿ ಶಾಂತಿಶ್ರೀ, ತಮ್ಮ ಭಾಷಣದಲ್ಲಿ ರಾಜಸ್ಥಾನದಲ್ಲಿ ಒಂಬತ್ತು ವರ್ಷದ ದಲಿತ ಬಾಲಕನ ಸಾವಿನ ಬಗ್ಗೆ ಪ್ರಸ್ತಾಪಿಸಿದರು. ಆ ಹುಡುಗ ಮೇಲ್ಜಾತಿಯ ಶಿಕ್ಷಕನಿಂದ ಹಲ್ಲೆಗೆ ತುತ್ತಾದ. ದುರದೃಷ್ಟವಶಾತ್ ಇಂದು ಜಾತಿ ಹುಟ್ಟಿನ ಮೇಲೆ ಆಧಾರಿತವಾಗಿದೆ. ಯಾರಾದರೂ ಬ್ರಾಹ್ಮಣ ಅಥವಾ ಚಮ್ಮಾರರಾಗಿದ್ದರೆ, ಅವನು ಹುಟ್ಟಿದ ತಕ್ಷಣ ದಲಿತನಾಗುತ್ತಾನೆಯೇ? ಎಂದು ಪ್ರಶ್ನಿಸಿದ್ದಾರೆ, ಮತ್ತೆ ಪ್ರಚೋದಕ ಮಾತು ಜವಾಹರಲಾಲ್ ಕ್ಯಾಂಪಸ್ ನ ಅಣ್ಣ ತಿಂದ ಜನರಿಂದ ಬಂದಿದೆ.

Leave A Reply

Your email address will not be published.