Voter ID ಗೆ Aadhar ಸಂಖ್ಯೆ ಲಿಂಕ್ ಕಡ್ಡಾಯವಲ್ಲ | ಚುನಾವಣಾ ಆಯೋಗದಿಂದ ಸ್ಪಷ್ಟನೆ

ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡಬೇಕು ಎಂಬ ಮಾಹಿತಿ ಬಗ್ಗೆ
ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಸುದ್ದಿಗಳು
ಹರಿದಾಡುತ್ತಿರೋ ಸಂಬಂಧ, ಚುನಾವಣಾ ಆಯೋಗವು ಮಾಹಿತಿಯೊಂದನ್ನು ನೀಡಿದೆ. ಇದರ ಪ್ರಕಾರ,ವೋಟರ್ ಐಡಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು
ಕಡ್ಡಾಯವಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆಯ ಜೋಡಣೆಯು ಕಡ್ಡಾಯವಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.

ಮತದಾರರು ಸ್ವಯಂಪ್ರೇರಿತರಾಗಿ ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆಯನ್ನು ಬಳಸಿ ಅಥವಾ ಇತರೆ ನಿಗಧಿತ ದಾಖಲೆಗಳ ಮೂಲಕವೂ ಸಹ ಗುರುತಿಸಿ, ದೃಢೀಕರಿಸಿ ಜೋಡಣೆ ಮಾಡಬಹುದಾಗಿರುತ್ತದೆಂದು ವಿಶೇಷ ಆಯುಕ್ತರು(ಆಡಳಿತ) ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ (ಕೇಂದ್ರ), ಬಿಬಿಎಂಪಿ ಮತ್ತು ವಲಯ ಆಯುಕ್ತರು(ಯಲಹಂಕ) ರಂಗಪ್ಪ ಅವರು ತಿಳಿಸಿದ್ದಾರೆ.

ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗವು ಮಾಹಿತಿ ಬಿಡುಗಡೆ ಮಾಡಿದ್ದು, ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆಯನ್ನು ಗುರುತಿಸಿ, ದೃಢೀಕರಿಸಿ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಿರುವುದಾಗಿ ಹಾಗೂ ಆಧಾರ್ ಲಿಂಕ್ ಮಾಡಿಕೊಳ್ಳದಿದ್ದಲ್ಲಿ ಮತದಾರರ ಗುರುತಿನ ಚೀಟಿ ರದ್ದಾಗುವ ಸಾಧ್ಯತೆಗಳಿರುತ್ತದೆಂದು ಕೆಲವು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ವರದಿಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಸದರಿ ಪ್ರಕಟಣೆಗಳಲ್ಲಿನ ಅಂಶಗಳು ಭಾರತ ಚುನಾವಣಾ ಆಯೋಗದ ನಿರ್ದೇಶನಕ್ಕೆ ವ್ಯತಿರಿಕ್ತವಾಗಿರುತ್ತದೆ ಎಂದು ಹೇಳಇದೆ.

Leave A Reply

Your email address will not be published.