Day: August 20, 2022

ಮತ್ತೆ ರಾತ್ರಿ ಕಂಪಿಸಿದ ಭೂಮಿ | ಆತಂಕದಿಂದ ಮನೆಯಿಂದ ಆಚೆ ಬಂದ ಜನ

ವಿಜಯಪುರ ಜಿಲ್ಲೆಯಲ್ಲಿ ಇಂದು ಮತ್ತೆ ಭೂಮಿ ನಡುಗಿದ ಅನುಭವವಾಗಿದೆ. ಶನಿವಾರ ರಾತ್ರಿ 8.16 ಕ್ಕೆ ಭೂಕಂಪದ ಅನುಭವಾಗಿದೆ. ಆದರೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಆಸ್ತಿಪಾಸ್ತಿ ನಷ್ಟದ ಬಗ್ಗೆಯೂ ವರದಿಯಾಗಿಲ್ಲ. ವಿಜಯಪುರ ನಗರದ ವಿವಿಧ ಭಾಗಗಳಲ್ಲಿ ಭೂಮಿ ನಡುಗಿದೆ. ವಿಜಯಪುರ ಜಿಲ್ಲೆಯ ತಿಕೋಟಾ, ಬಬಲೇಶ್ವರ, ಬಸವನಬಾಗೇವಾಡಿ ತಾಲೂಕುಗಳು ಸೇರಿದಂತೆ ಇತರೆ ಭಾಗಗಳಲ್ಲೂ ಭೂಮಿ ನಡುಗಿದ ಅನುಭವವಾಗಿದೆ. ಭೂಕಂಪನ ಅನುಭವವಾಗುತ್ತಿದ್ದಂತೆ ಜನರು ಆತಂಕದಿಂದ ಮನೆಯಿಂದ ಆಚೆ ಬಂದಿದ್ದಾರೆ. ಮೇಲಿಂದ ಮೇಲೆ ಭೂಕಂಪನ ಆಗುತ್ತಿರೋದಕ್ಕೆ ಜನ ಭಯಭೀತರಾಗಿದ್ದಾರೆ. ಈ ಮಧ್ಯೆ …

ಮತ್ತೆ ರಾತ್ರಿ ಕಂಪಿಸಿದ ಭೂಮಿ | ಆತಂಕದಿಂದ ಮನೆಯಿಂದ ಆಚೆ ಬಂದ ಜನ Read More »

ಎಳನೀರನ್ನು ಕುಡಿದು ಹಾಗೆ ಎಸೆಯೋ ಮುಂಚೆ ತಿಳಿಯಿರಿ ಗಂಜಿಯಲ್ಲಿರುವ ಇಷ್ಟೊಂದು ಉಪಯೋಗ!

ಭಾರತದಲ್ಲಿ ಎಳನೀರಿಗೆ ಆಧ್ಯತೆ ಮತ್ತು ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ತುಳುನಾಡಿನಲ್ಲಿ ಒಂದು ಕೈ ಮೇಲೆನೇ ಅನ್ನಬಹುದು. ಎಲ್ಲಾ ತಂಪು ಪಾನೀಯಕಿಂತಲೂ ಶ್ರೇಷ್ಠವಾದ ಎಳನೀರು, ದೇಹವನ್ನು ಹೈಡ್ರಿಕರಿಸುತ್ತದೆ. ಮಾತ್ರವಲ್ಲ, ಉತ್ತಮ ಆರೋಗ್ಯ ಒದಗಿಸುತ್ತದೆ. ಎಳನೀರಿನಿಂದ ಹಲವು ಆರೋಗ್ಯಕರ ಮತ್ತು ಪ್ರಯೋಜನಕಾರಿಯಾಗಿದೆ. ಇದರಿಂದ ನಮ್ಮ ಆರೋಗ್ಯವನ್ನು ವೃದ್ಧಿಸಬಹುದಾಗಿದೆ. ಇದು ನಮ್ಮ ದೇಹದ ಸೌಂದರ್ಯ ಹೆಚ್ಚಿಸಬಹುದಾಗಿದ್ದು, ಆರೋಗ್ಯ ಮತ್ತು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಬಹಳ ಹಿಂದೆ ಚರ್ಮದ ಬಳಕೆಗೆ ಸೌಂದರ್ಯವರ್ಧಕಗಳು ಇರಲಿಲ್ಲ. ಅವಾಗ ದೇಹ ಶುದ್ಧ ಮಾಡಿಕೊಳಲ್ಲೂ ಮೂರು ದಿವಸ …

ಎಳನೀರನ್ನು ಕುಡಿದು ಹಾಗೆ ಎಸೆಯೋ ಮುಂಚೆ ತಿಳಿಯಿರಿ ಗಂಜಿಯಲ್ಲಿರುವ ಇಷ್ಟೊಂದು ಉಪಯೋಗ! Read More »

KPSC : 2017, 19ನೇ ಸಾಲಿನ FDA ನೇಮಕಕ್ಕೆ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ!!!

2017 ಮತ್ತು 2019 ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ ನೇಮಕಾತಿಗೆ ಸಂಬಂಧಿಸಿದಂತೆ, ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ಹೆಚ್ಚುವರಿ ಆಯ್ಕೆಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಹಾಗೂ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಚೆಕ್ ಮಾಡಬಹುದು. 2017 ರಲ್ಲಿ ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ 960 (810+150HK) ಪ್ರಥಮ ದರ್ಜೆ ಸಹಾಯಕ ಹುದ್ದೆಗಳಿಗೆ ಅಧಿಸೂಚನೆಯನ್ನು ಪ್ರಕಟಣೆ ಮಾಡಿಸಿತ್ತು. ಹಾಗೂ ಈ ಹುದ್ದೆಯ …

KPSC : 2017, 19ನೇ ಸಾಲಿನ FDA ನೇಮಕಕ್ಕೆ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟ!!! Read More »

‘ RSS ಎನ್ನುವುದು ಏನು ?’ ಈ ಸಿನಿಮಾ ಬರಲಿದೆ, ಬಾಹುಬಲಿ ನಿರ್ದೇಶಕ ರಾಜಮೌಳಿ ತಂದೆಯೇ ಅದರ ನಿರ್ದೇಶಕ !

ಭಾರತೀಯ ಸಿನಿಮಾ ರಂಗದ ಸದ್ಯದ ನಂಬರ್ ಒನ್ ಡೈರೆಕ್ಟರ್, ಖ್ಯಾತ ನಿರ್ದೇಶಕ, ಬಾಹುಬಲಿ ಖ್ಯಾತಿಯ ಎಸ್.ಎಸ್. ರಾಜಮೌಳಿ ಅವರ ತಂದೆ ಸ್ವತಹ ಚಿತ್ರ ನಿರ್ದೇಶನ ಮಾಡಲು ಇಳಿದಿದ್ದಾರೆ. ರಾಜ್ಯ ಸಭಾ ಸಂಸದರೂ ಆಗಿರುವ  ವಿಜಯೇಂದ್ರ ಪ್ರಸಾದ್ ಅವರು ಆರ್.ಎಸ್.ಎಸ್. ಕುರಿತಾಗಿ ಸಿನಿಮಾ ಮತ್ತು ವೆಬ್ ಸೀರಿಸ್ ಮಾಡುವುದಾಗಿ ತಿಳಿಸಿದ್ದು, ಅದು ಸಿನಿ ಪ್ರಿಯರಿಗೆ ಕುತೂಹಲ ಮೂಡಿಸಿದೆ. ವಿಜಯವಾಡದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ವಿಜಯೇಂದ್ರ ಪ್ರಸಾದ್ ಅವರು ಆರ್ ಎಸ್ ಎಸ್ ಚಿತ್ರ ನಿರ್ಮಾಣದ ಕುರಿತು …

‘ RSS ಎನ್ನುವುದು ಏನು ?’ ಈ ಸಿನಿಮಾ ಬರಲಿದೆ, ಬಾಹುಬಲಿ ನಿರ್ದೇಶಕ ರಾಜಮೌಳಿ ತಂದೆಯೇ ಅದರ ನಿರ್ದೇಶಕ ! Read More »

ಬಸ್‌ ಪ್ರಯಾಣದ ವೇಳೆ ಮಹಿಳೆಯರನ್ನು ದಿಟ್ಟಿಸಿ ನೋಡಿದ್ರೆ ಹುಷಾರ್ ; ಹೊಸ ಕಾನೂನು ಏನು ಹೇಳುತ್ತೆ ಗೊತ್ತಾ?

ಮೋಟಾರು ವಾಹನ ಕಾಯ್ದೆಗೆ ಹೊಸ ತಿದ್ದುಪಡಿಯೊಂದು ಬಂದಿದ್ದು, ಇದರ ಪ್ರಕಾರ ಇನ್ಮುಂದೆ ಬಸ್‌ನಲ್ಲಿ ಪ್ರಯಾಣಿಸುವಾಗ ಗಂಡಸರು ಮಹಿಳೆಯರನ್ನು ದಿಟ್ಟಿಸಿ ನೋಡುವಂತಿಲ್ಲ. ಈ ನಿಯಮ ಮೀರಿದ್ರೆ ಶಿಕ್ಷೆ ಫಿಕ್ಸ್.. ಹೌದು. ಇಂತಹ ಒಂದು ನಿಯಮವನ್ನು ತಮಿಳುನಾಡಿನಲ್ಲಿ ಜಾರಿಗೆ ಬಂದಿದ್ದು, ಈ ಕಾಯ್ದೆಯ ಪ್ರಕಾರ ಬಸ್‌ ಪ್ರಯಾಣದ ವೇಳೆ ಮಹಿಳೆಯರನ್ನು ದಿಟ್ಟಿಸಿ ನೋಡುವವರನ್ನು ಬಂಧಿಸಲು ಅವಕಾಶವಿದೆ. ಅಷ್ಟೇ ಅಲ್ಲದೆ, ಶಿಳ್ಳೆ ಹೊಡೆಯುವುದು, ಅಶ್ಲೀಲ ಸನ್ನೆಗಳನ್ನು ಮಾಡುವುದು, ಮಹಿಳೆಯರನ್ನು ಲೈಂಗಿಕ ಪ್ರಲೋಭನೆಗಳಿಗೆ ಒಳಪಡಿಸಲು ಯತ್ನಿಸುವುದು ಕೂಡ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ. ತಿದ್ದುಪಡಿ …

ಬಸ್‌ ಪ್ರಯಾಣದ ವೇಳೆ ಮಹಿಳೆಯರನ್ನು ದಿಟ್ಟಿಸಿ ನೋಡಿದ್ರೆ ಹುಷಾರ್ ; ಹೊಸ ಕಾನೂನು ಏನು ಹೇಳುತ್ತೆ ಗೊತ್ತಾ? Read More »

ತಲೆಗೆ ಗಾಯ ಆದ ಜಾಗಕ್ಕೆ ಹತ್ತಿ ಇಡಬೇಕಾದಲ್ಲಿ “ಕಾಂಡೋಮ್​” ಇಟ್ಟ ಆಸ್ಪತ್ರೆ!!!

ತಲೆಗೆ ಗಾಯಮಾಡಿಕೊಂಡು ಬಂದ ಮಹಿಳೆಯೋರ್ವರ ತಲೆಗೆ ಬ್ಯಾಂಡೇಜ್ ಜೊತೆಗೆ ಕಾಂಡೋಂ ಇಟ್ಟ ಘಟನೆಯೊಂದು ನಡೆದಿದೆ. ಈ ಘಟನೆ ಮಧ್ಯಪ್ರದೇಶದಲ್ಲಿ ಬಂದಿದೆ. ಸರಕಾರಿ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಗಳ ಆಗರ ಎಂದೇ ಹೇಳಬಹುದು. ತಲೆಗೆ ಗಾಯಮಾಡಿಕೊಂಡ ಮಹಿಳೆಗೆ ರಕ್ತ ಕ್ಲೀನ್ ಮಾಡಿ ಅಲ್ಲಿಗೆ ಹತ್ತಿ ಬದಲು ಕಾಂಡೋಂ ಇಟ್ಟಿದ್ದು ನಿಜಕ್ಕೂ ಅವ್ಯವಸ್ಥೆಗಳ ಆಗರ ಎಂದೇ ಹೇಳಬಹುದು. ತಲೆಗೆ ಗಾಯ ಮಾಡಿಕೊಂಡ ಮಹಿಳೆಯೋರ್ವಳು ಸಮುದಾಯ ಜಿಲ್ಲಾಸ್ಪತ್ರೆಗೆ ಬಂದಿದ್ದ ಸಂದರ್ಭದಲ್ಲಿ ನಡೆದಿದೆ. ಮಹಿಳೆಯ ತಲೆಗೆ ಹಾಕಿದ ಬ್ಯಾಂಡೇಜ್​ ತೆಗೆದಾಗ ಕಾಂಡೋಂ ರ‍್ಯಾಪರ್​ ಕಂಡು ಡಾಕ್ಟರ್ …

ತಲೆಗೆ ಗಾಯ ಆದ ಜಾಗಕ್ಕೆ ಹತ್ತಿ ಇಡಬೇಕಾದಲ್ಲಿ “ಕಾಂಡೋಮ್​” ಇಟ್ಟ ಆಸ್ಪತ್ರೆ!!! Read More »

ಸಿದ್ದರಾಮಯ್ಯ ಹಿಂದೂ ವಿರೋಧಿ ಹೇಳಿಕೆಯಿಂದ ನೋವಾಗಿತ್ತು: ಮೊಟ್ಟೆ ಹೊಡೆದಿದ್ದ ಕಾಂಗ್ರೆಸ್ ಆರೋಪಿ ಹೇಳಿಕೆ !

ಕೊಡಗಿನಲ್ಲಿ ಮಳೆಹಾನಿ ವೀಕ್ಷಣೆಗೆಂದು ಬಂದಿದ್ದ, ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆತ ಪ್ರಕರಣದಿನಕ್ಕೊಂದು ಹೊಸತು ಆಯಾಮ ಪಡೆದುಕೊಳ್ಳುತ್ತಿದೆ. ಈಗ ಮೊಟ್ಟೆ ಎಸೆತ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನೇ ಮೊಟ್ಟೆ ಎಸೆದಿರುವುದಾಗಿ ತಿಳಿದು ಬಂದಿದೆ. ಆತನೇ ಹೇಳಿರುವ ಪ್ರಕಾರ, ನಾನು ಕಾಂಗ್ರೆಸ್ ಕಾರ್ಯಕರ್ತನೇ, ಕಾಂಗ್ರೆಸ್‌ನಲ್ಲಿ ಹಿಂದೂಗಳಿಲ್ವಾ? ವಿಪಕ್ಷ ನಾಯಕ ಸಿದ್ದರಾಮಯ್ಯ ಹಿಂದೂಗಳೂ ದನದ ಮಾಂಸ ತಿಂತಾರೆ ಅಂದಿದ್ದು ತಪ್ಪಲ್ವಾ ? ಹಿಂದೂ ವಿರೋಧಿ ಹೇಳಿಕೆಯಿಂದ ನೋವಾಗಿತ್ತು. ಹೀಗಾಗಿ ಮೊಟ್ಟೆ ಹೊಡೆದಿದ್ದೆ ಎಂದು ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದಿದ್ದ ಆರೋಪಿ ಸಂಪತ್ …

ಸಿದ್ದರಾಮಯ್ಯ ಹಿಂದೂ ವಿರೋಧಿ ಹೇಳಿಕೆಯಿಂದ ನೋವಾಗಿತ್ತು: ಮೊಟ್ಟೆ ಹೊಡೆದಿದ್ದ ಕಾಂಗ್ರೆಸ್ ಆರೋಪಿ ಹೇಳಿಕೆ ! Read More »

ಇಯರ್ ಫೋನ್ ನಿಂದಾಗಿ ಹೋಯ್ತು ಯುವಕರಿಬ್ಬರ ಪ್ರಾಣ!

ಇಂದು ಪ್ರತಿಯೊಬ್ಬರ ಕಿವಿಯಲ್ಲೂ ಇಯರ್ ಫೋನ್ ಇದ್ದೇ ಇರುತ್ತದೆ. ಅದೊಂತರ ಫ್ಯಾಷನ್ ಆಗಿ ಬಿಟ್ಟಿದೆ. ರಸ್ತೆಯಲ್ಲಿ ಹೋದ್ರೂ, ಬಸ್ ಲ್ಲಿ ಹೋದ್ರೂ ಅದು ಮಾತ್ರ ಕಿವಿಯಲ್ಲಿ ಇರುತ್ತದೆ. ಇಂತಹ ಇಯರ್ ಫೋನ್ ಎಂತಹ ಅಪಾಯ ತಂದೊಡ್ಡ ಬಹುದು ಎಂಬುದಕ್ಕೆ ಇಲ್ಲೊಂದು ಕಡೆ ನಡೆದ ಘಟನೆಯೇ ಉದಾಹರಣೆಯಾಗಿದೆ. ಹೌದು. ಇಯರ್ ಫೋನ್ ಕಿವಿಗಿಟ್ಟುಕೊಂಡು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರ ಮೇಲೆ ರೈಲು ಹರಿದು ಮೃತಪಟ್ಟಿರುವ ಘಟನೆ ನಡೆದಿದೆ. ಅಶೋಕ್ ಕುಮಾರ್ ಸಿಂಗ್ (20) ಸ್ನೇಹಿತ ಮೋನು (18) ಮೃತರು. …

ಇಯರ್ ಫೋನ್ ನಿಂದಾಗಿ ಹೋಯ್ತು ಯುವಕರಿಬ್ಬರ ಪ್ರಾಣ! Read More »

BIGG BREAKING NEWS: ಗಣೇಶೋತ್ಸವಕ್ಕೆ ಮಾರ್ಗಸೂಚಿ ಪ್ರಕಟ !!! ಇಲ್ಲಿದೆ ಡಿಟೇಲ್ಸ್

ಬೆಂಗಳೂರು:ನಾಡಿನ ಜನತೆ ಇನ್ನೇನು ಗೌರಿ-ಗಣೇಶ ಹಬ್ಬದ ತಯಾರಿಯ ಸಂಭ್ರಮದಲ್ಲಿದ್ದಾರೆ. ಇದಕ್ಕಾಗಿ ನಗರದ ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಮಕ್ಕಳಿಗಂತೂ ಗಣೇಶ ಹಬ್ಬ ಬಂತೆಂದರೆ ಖುಷಿಯೋ ಖುಷಿ. ಕಾಯಿ ಕಡುಬು ತಿಂದು ಸಂಭ್ರಮಿಸುವ ಕ್ಷಣಗಳೆಂದರೆ ತಪ್ಪಿಲ್ಲ. ಅಷ್ಟು ಮಾತ್ರವಲ್ಲದೇ, ನಗರದ ಪ್ರಮುಖ ಬೀದಿಗಳಲ್ಲಿ ಗಣೇಶನ ಕೂರಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಕೊರೊನಾದಿಂದ ಕಳೆದ ಎರಡು ವರ್ಷ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುವುದಕ್ಕೆ ಆಗಿಲ್ಲ. ಆದರೆ ಈ ಬಾರಿ ಎಲ್ಲದಕ್ಕೂ ಅನುಮತಿಯನ್ನು ಸರ್ಕಾರ ನೀಡಿದೆ. ಆದರೆ ನಗರದ ಪ್ರಮುಖ ಬೀದಿಗಳಲ್ಲಿ …

BIGG BREAKING NEWS: ಗಣೇಶೋತ್ಸವಕ್ಕೆ ಮಾರ್ಗಸೂಚಿ ಪ್ರಕಟ !!! ಇಲ್ಲಿದೆ ಡಿಟೇಲ್ಸ್ Read More »

ಬೆಳ್ತಂಗಡಿ : ಬೈಕ್ ಹಾಗೂ ಕಾರಿನ ನಡುವೆ ಅಪಘಾತ ; ಬೈಕ್ ಸವಾರ ಗಂಭೀರ

ಬೆಳ್ತಂಗಡಿ : ಪಡಂಗಡಿ ಪೆರ್ನಮಂಜೆ ತಿರುವಿನಲ್ಲಿ ಬೈಕ್ ಮತ್ತು ಕಾರಿನ ನಡುವೆ ಇಂದು ಮಧ್ಯಾಹ್ನದ ವೇಳೆ ಭೀಕರ ಅಪಘಾತವೊಂದು ಸಂಭವಿಸಿದೆ. ಮಾರುತಿ ಕಾರು ಸವಾರ ಬೆಳ್ತಂಗಡಿಯಿಂದ ಮೂಡಬಿದಿರೆ ಮಾರ್ಗವಾಗಿ ಚಲಿಸುತ್ತಿದ್ದು, FZ ಬೈಕ್ ಸವಾರ ವೇಣೂರು ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ವೇಳೆ ಮುಖಾಮುಖಿಯಾಗಿ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಈ ಅಪಘಾತದ ತೀವ್ರತೆಗೆ ಬೈಕ್ ಸವಾರನಿಗೆ ಗಂಭೀರ ಪೆಟ್ಟಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

error: Content is protected !!
Scroll to Top