ಮಂಗಳೂರು:ತಂದೆ ಮಗನಿಂದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ!! ಬರ್ಕೆ ಪೊಲೀಸರಿಂದ ಆರೋಪಿಗಳ ಬಂಧನ

ಮಂಗಳೂರು: ನಗರದ ಬೋಳೂರು ಜಾರಂದಾಯ ದೈವಸ್ಥಾನದ ಬಳಿಯಲ್ಲಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ತಂದೆ ಮಗನನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೋಳೂರು ನಿವಾಸಿಗಳಾದ ತಂದೆ ಮಗ ದೇವದಾಸ್ ಬೋಳೂರು(61) ಹಾಗೂ ಕಿರಣ್(21) ಎಂದು ಗುರುತಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಘಟನೆ ವಿವರ:ಮೊಗವೀರ ಮಹಾಸಭಾದ ಆಡಳಿತದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಈ ಬಗ್ಗೆ ಈ ಹಿಂದೆಯೂ ಒಮ್ಮೆ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ. ಆದರೆ ಹಳೇ ವೈಷಮ್ಯ ತಾರಕಕ್ಕೇರಿದ್ದು, ನವೀನ್ ಸಾಲ್ಯಾನ್ ಎಂಬರೊಂದಿಗೆ ಆರೋಪಿಗಳು ಜಗಳಕ್ಕೆ ಇಳಿದಿದ್ದರು ಎನ್ನಲಾಗಿದೆ.

ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದಿದ್ದು, ಬಳಿಕ ಆರೋಪಿಗಳು ನವೀನ್ ಸಾಲ್ಯಾನ್ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದು, ಪರಿಣಾಮ ಗಾಯಾಳುವನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದ್ಯ ಬರ್ಕೆ ಠಾಣಾ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

error: Content is protected !!
Scroll to Top
%d bloggers like this: