ವೀರ ಸಾವರ್ಕರ್ ಹೆಸರಿನಲ್ಲಿ ಒಂದು ವೃತ್ತ, ಒಂದು ಸೇತುವೆ ನಿರ್ಮಿಸುವುದು ಖಂಡಿತ – ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿಕೆ

ಸುರತ್ಕಲ್: ತಿರಂಗ ರಾಷ್ಟ್ರಧ್ವಜ ಅಭಿಯಾನ ಮಂಗಳೂರು ಉತ್ತರ ಮಂಡಲ ಇದರ ವತಿಯಿಂದ ಚಿತ್ರಾಪುರ ಮೊಗವೀರ ಸಂಘದ ಸಭಾಂಗಣದ ವೀರ ಸಾರ್ವಕರ್ ವೇದಿಕೆಯಲ್ಲಿ ಭಾನುವಾರ ನಡೆದ ಉತ್ತಿಷ್ಟ ಭಾರತ ಕಾರ್ಯಕ್ರಮ ಉದ್ಘಾಟಿಸುತ್ತಾ ಡಾ.ವೈ.ಭರತ್ ಶೆಟ್ಟಿ ಅವರು, ವೀರ ಸಾವರ್ಕರ್ ಹೆಸರಿನಲ್ಲಿ ಒಂದು ವೃತ್ತ, ಸೇತುವೆ ನಿರ್ಮಿಸುವುದು ಖಂಡಿತ. ಮಕ್ಕಳ ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯ ಯೋಧರ ವಿವರ ಸೇರ್ಪಡೆಗೆ ಕಾರ್ಯಕ್ರಮ ಅಗತ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ರಾಣಿ ಅಬ್ಬಕ್ಕ ಮೊದಲಾದ ಯೋಧರು ಅಂದು ಕರಾವಳಿಯಲ್ಲಿ ಹಚ್ಚಿದ್ದ ದೇಶ ಭಕ್ತಿಯ ಕಿಚ್ಚು ಅಪ್ರತಿಮ ಎಂದು ಹೇಳಿದರು.

“ಸ್ವಾತಂತ್ರ್ಯ ಹೋರಾಟಕ್ಕೆ ಕರಾವಳಿಯ ಮೊದಲ ಬಲಿಯಾಗಿದ್ದ ಕೆದಂಬಾಡಿ ರಾಮಯ್ಯ ಗೌಡರ ಪುತ್ಥಳಿ ನಿರ್ಮಾಣಕ್ಕೆ ಶಾಸಕ ಡಾ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಕ್ರಮ ತೆಗೆದುಕೊಳ್ಳಲಿದ್ದಾರೆ ” ಎಂದು ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಬಿಜೆಪಿ ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಪ್ರಧಾನ ಕಾರ್ಯದರ್ಶಿಗಳಾದ ಪ್ರಮುಖರಾದ ರಾಜೇಶ್ ಕೊಟ್ಟಾರಿ, ಸಂದೀಪ್ ಪಚ್ಚನಾಡಿ, ತಿರಂಗ ಅಭಿಯಾನದ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಪ್ರಮೋದ್ ಕುಮಾರ್ ಬೆಳ್ತಂಗಡಿ, ವಿಕಾಸ್ ಕುಮಾರ್ ಪುತ್ತೂರು, ಉಪಮೇಯರ್ ಸುಮಂಗಳಾ, ಮಾಜಿ ಉಪಮೇಯರ್ ವೇದಾವತಿ, ಪಾಲಿಕೆ ಸದಸ್ಯೆ ಸುಮಿತ್ರಾ ಕೆ, ಬಿಜೆಪಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಧೀರ್ ಶೆಟ್ಟಿ ಕಣ್ಣೂರು, ಗಣೇಶ್ ಹೊಸಬೆಟ್ಟು, ಪಣಂಬೂರು ಕುಳಾಯಿ ಮೊಗವೀರ ಸಭಾದ ಅಧ್ಯಕ್ಷ ಪಿ ಮಾಧವ ಸುವರ್ಣ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.