ಪುಷ್ಪ- 2 ಚಿತ್ರಕ್ಕೆ ಎಂಟ್ರಿ ಕೊಟ್ಟ ಲೇಡಿ ಪವರ್ ಸ್ಟಾರ್ ಸಾಯಿ ಪಲ್ಪವಿ | ಫಿದಾ ಬೆಡಗಿಯ ಪಾತ್ರವೇನು? ಇಲ್ಲಿದೆ ಡಿಟೇಲ್ಸ್!

ಈ ವರ್ಷದ ಸೆನ್ಸೇಶನ್ ಕ್ರಿಯೇಟ್ ಮಾಡಿದ ಸಿನಿಮಾ
ಸುಕುಮಾರ್ ನಿರ್ದೇಶನದ ‘ಪುಷ್ಪ’. ಪುಷ್ಪ 1 ಬಿಡುಗಡೆಯಾದ ನಂತರ ಪುಷ್ಪ- 2 ಚಿತ್ರಕ್ಕಾಗಿ ಪ್ರೇಕ್ಷಕರು ಕಾಯ್ತಿದ್ದಾರೆ. ಸ್ಟೈಲಿಶ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರಿದಂತೂ ನಿಜ. ಸೆಕೆಂಡ್ ಪಾರ್ಟ್ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿಬರ್ತಿದೆ.

ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 350 ಕೋಟಿ ರೂ. ಕಲೆಕ್ಷನ್ ಮಾಡಿ ‘ಪುಷ್ಪ’ ಸಿನಿಮಾ ದೊಡ್ಡ ದಾಖಲೆ ಮಾತ್ರ ಸಿನಿಮಾ ಬಗ್ಗೆ ಒಳ್ಳೆ ವಿರ್ಮರ್ಶೆ ಕೂಡಾ ಬಂದಿತ್ತು. ಈಗ ಪುಷ್ಪಾ 1 ಕ್ಕಿಂತ ದೊಡ್ಡ ಮಟ್ಟದಲ್ಲಿ ಮುಂದುವರೆದ ಭಾಗವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಸೀಕ್ವೆಲ್‌ನಲ್ಲಿ ಯಾರೆಲ್ಲಾ ಇರ್ತಾರೆ ಅನ್ನುವ ಬಗ್ಗೆಯೂ ಕುತೂಹಲ ಅಭಿಮಾನಿಗಳಲ್ಲಿದೆ. ‘ಪುಷ್ಪ’- 2 ಚಿತ್ರದಲ್ಲೂ ಅಲ್ಲು ಅರ್ಜುನ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ಮುಂದುವರೆಯಲಿದ್ದಾರೆ. ರಶ್ಮಿಕಾ ಜೊತೆಗೆ ಮತ್ತೊಬ್ಬ ನಾಯಕಿಯ ಆಗಮನವಾಗುತ್ತಿದೆ ಅನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಗಿರಿಕಿ ಹೊಡೆಯುತ್ತಿದೆ.ಹೌದು ಹೊಸ ಸುದ್ದಿ ಏನಪ್ಪಾ ಅಂದರೆ, ಈ ಚಿತ್ರಕ್ಕೆ ಮತ್ತೊಬ್ಬ ನಾಯಕಿಯ ಆಗಮನವಾಗ್ತಿದೆಯಂತೆ.

ಯಸ್, ನಟಿ ಸಾಯಿ ಪಲ್ಲವಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸ್ತಾರೆ ಎನ್ನಲಾಗುತ್ತಿದೆ. ಲೇಡಿ ಪವರ್ ಸ್ಟಾರ್ ‘ಪುಷ್ಪ’ ಸೀಕ್ವೆಲ್‌ನಲ್ಲಿ ನಟಿಸ್ತಾರೆ ಅನ್ನುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಪಾತ್ರವೇನು? ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತಚಂದನ ಸ್ಮಗ್ಲರ್ ‘ಪುಷ್ಪ’ರಾಜ್ ಪಾತ್ರದಲ್ಲಿ ನಟಿಸಿದ್ದರು. ಅದು ಮುಂದುವರೆಯಲಿದ್ದು, ಆತನಿಗೆ ಸಹಾಯ ಮಾಡುವ ಗಿರಿಜನ ಹುಡುಗಿಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸ್ತಾರೆ ಅನ್ನುವ ಮಾತುಗಳು ಕೇಳಿಬರ್ತಿದೆ. ನಿಜಕ್ಕೂ ಈ ಪಾತ್ರ ರೌಡಿ ಬೇಬಿಗೆ ಹೇಳಿ ಮಾಡಿಸಿದಂತಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಡಿ ಗ್ಲಾಮರಸ್ ರೋಲ್ ಅದರಲ್ಲೂ ನಟನೆಯ ಅವಕಾಶ ಇರುವ ಪಾತ್ರದಲ್ಲಿ ನಟಿಸಲು ಸಾಯಿ ಪಲ್ಲವಿ ಸದಾ ಮುಂದಿರುತ್ತಾರೆ. ಮೊದಲ ಭಾಗದಲ್ಲಿ ಸಮಂತಾ ಕುಣಿದಿದ್ದ ‘ಹೂಂ ಅಂಟಾವಾ ಮಾವ’ ಸಾಂಗ್ ಸೂಪರ್ ಹಿಟ್ ಆಗಿತ್ತು. ಇನ್ನು ಪುಷ್ಪ 2 ಸಿನಿಮಾದಲ್ಲಿ ಐಟಂ ಸಾಂಗ್‌ಗಾಗಿ ಬಾಲಿವುಡ್ ಟಾಪ್ ಹೀರೊಯಿನ್‌ನ ಕರೆದುಕೊಂಡು ಬರುವ ಎಲ್ಲಾ ಕೆಲಸ ಕಾರ್ಯ ಸುಗಮವಾಗಿ ನಡೆಯುತ್ತಿದೆ.

Leave A Reply

Your email address will not be published.