ತಜ್ಞರ ಪ್ರಕಾರ ಇಷ್ಟು”ಎಣ್ಣೆ” ಹೊಡೆದರೆ ನೀವು ಪಕ್ಕಾ ಸೇಫ್!!!

ಕುಡಿಯೋದು ಒಂದು ರೀತಿಯ ಚಟ ಎಂದರೆ ತಪ್ಪಾಗಲಾರದೇನೋ ಅಲ್ಲವೇ? ಇದು ಭಾರತೀಯರ ಜೀವನ ಶೈಲಿಯ ಒಂದು ಭಾಗ ಎಂದೇ ಹೇಳಬಹುದು. ನೀವು ಗಮನಿಸಿರಬಹುದು ಪಾರ್ಟಿ ಮಾಡೋಣ ಫ್ರೆಂಡ್ಸ್ ಎಂದರೆ ಇದರ ಅರ್ಥ, ಅಲ್ಲಿ ಎಣ್ಣೆ ಇದ್ದೇ ಇದೆ ಎಂದು. ಕುಡಿತ ಮನೆ ಹಾಳು ಮಾಡಿತು ಎಂಬ ಮಾತಂತೂ ಕುಡಿದಾಗ ಹೇಳಹೆಸರಿಲ್ಲದಂತೆ ಕಳೆದು ಹೋಗುತ್ತದೆ.

ಮದ್ಯ ಸೇವನೆ ಸೀಮಿತ ಮಟ್ಟದಲ್ಲಿ ಮಾಡಿದ್ದಷ್ಟು ಒಳ್ಳೆಯದು. ಅಷ್ಟಕ್ಕೂ ವಿಜ್ಞಾನಿಗಳು ಈ ಬಗ್ಗೆ ಏನಂತಾರೆ? ನಾವು ದಿನಕ್ಕೆ ಎಷ್ಟು ಮದ್ಯ ಸೇವಿಸಿದರೆ
ಸೇಫ್? ಈ ಬಗ್ಗೆ ಕುತೂಹಲಭರಿತವಾದ ಮಾಹಿತಿ ಇಲ್ಲಿ ನೀಡಲಾಗಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ವಿಸ್ಕಿ, ಬ್ರಾಂದಿ, ರಮ್ಮು, ಬಿಯರ್ ಇತ್ಯಾದಿ ಮದ್ಯವು ವಿವಿಧ ಕಾಳು, ಹಣ್ಣು ಇತ್ಯಾದಿಯಿಂದ ತಯಾರಿ ಮಾಡಲಾಗುತ್ತದೆ. ಅದೇನು ಹಾನಿಕರ ಅಲ್ಲ ಎನಿಸಬಹುದು. ವಿಸ್ಕಿ, ಬ್ರಾಂದಿ ಇತ್ಯಾದಿ ಹಾಟ್ ಡ್ರಿಂಕ್ಸ್‌ಗಳಲ್ಲಿ ಶೇ.20ರಿಂದ 50ರಷ್ಟು ಆಲ್ಕೋಹಾಲ್ ಇರುತ್ತದೆ. ಬಿಯರ್‌ನಲ್ಲಿ 4ರಿಂದ 10 ಪ್ರತಿಶತದವರೆಗೆ ಆಲ್ಕೋಹಾಲ್ ಇರುತ್ತದೆ. ಹೀಗಾಗಿ, ಮದ್ಯ ಸೇವನೆಗೆ ಆಲ್ಕೋಹಾಲ್ ಸೇವನೆ ಎಂದೂ ಹೇಳುತ್ತಾರೆ. ಇದು ಆರೋಗ್ಯ ಕೆಡಲು ಮೂಲ ಕಾರಣ. ಮದ್ಯದ ಜೊತೆ ಇರುವ ಆಲ್ಕೋಹಾಲ್ ಸೇವನೆಯಿಂದ ನಮ್ಮ ಆರೋಗ್ಯ ಕೆಡುತ್ತದೆ.

ಈ ಆಲ್ಕೋಹಾಲ್ ಲಿವರ್‌ಗೆ ಹಾನಿ ಮಾಡುತ್ತದೆ. ನಿಯಮಿತವಾಗಿ ನೀವು ಮದ್ಯ ಸೇವನೆ ಅಥವಾ ಆಲ್ಕೋಹಾಲ್ ಕುಡಿಯುವುದರಿಂದ ಯಕೃತ್ತು ಊದಿಕೊಳ್ಳುತ್ತದೆ. ಲಿವರ್‌ನಲ್ಲಿ ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುತ್ತಾ ಹೋಗುತ್ತದೆ. ಕೊನೆಗೆ ಊತವಾಗಿ ಪರಿಣಿಸುತ್ತದೆ.

ವಿಷಕಾರಿ ವಸ್ತುಗಳನ್ನು ನಾಶ ಮಾಡುವುದು ಯಕೃತ್ತಿನ ಪ್ರಮುಖ ಕಾರ್ಯಗಳಲ್ಲಿ ಒಂದು. ನಾವು ಡ್ರಿಂಕ್ಸ್ ಮಾಡಿದಾಗ, ಅದರಲ್ಲಿರುವ ಆಲ್ಕೋಹಾಲ್ ಅನ್ನು ನಾಶ ಮಾಡುವಂತಹ ಹಲವು ಕಿಣ್ವಗಳನ್ನು ಯಕೃತ್ತು ಬಿಡುಗಡೆ ಮಾಡುತ್ತದೆ. ಇದು ಸಮರ್ಪಕವಾಗಿ ಕೆಲಸ ಮಾಡಿದರೆ ಆಲ್ಕೋಹಾಲ್ ನಮ್ಮ ದೇಹದಿಂದ ಹೊರಹೋಗುತ್ತದೆ.

ಆಲ್ಕೋಹಾಲ್ ದೇಹದೊಳಗೆ ಹೋದಾಗ, ಯಕೃತ್ತಿನ ಕೆಲ ಕೋಶಗಳು ನಾಶವಾಗುತ್ತಲೇ ಹೋಗುತ್ತವೆ. ಅನಂತರ ಹೊಸ ಕೋಶಗಳು ಉತ್ಪತ್ತಿಯಾದರೂ ನಿರಂತರ ಆಲ್ಕೋಹಾಲ್ ಪ್ರವೇಶದಿಂದ ಆ ಸಾಮರ್ಥ್ಯ
ಕುಂದುತ್ತಾ ಹೋಗುತ್ತದೆ. ಕೊನೆಗೆ ಯಕೃತ್ತು ಗೆ ದೀರ್ಘಕಾಲದ ಸಮಸ್ಯೆ ಉಂಟಾಗುತ್ತದೆ.

ಈಗ ನಿಮ್ಮಲ್ಲಿ ಮೂಡುವ ಪ್ರಶ್ನೆ ಎಂದರೆ ಎಷ್ಟು ಆಲ್ಕೋಹಾಲ್ ಸೇವನೆಯಿಂದ ಯಕೃತ್ತು ಘಾಸಿಗೊಳ್ಳುತ್ತದೆ ಎಂಬುದು. ಅದಕ್ಕೆ ತಜ್ಞರು ನೀಡಿದ ಉತ್ತರ ಇಲ್ಲಿದೆ.

ಡ್ರಿಂಕಾವೇರ್ ಎಂಬ ಸಂಸ್ಥೆ ಪ್ರಕಾರ ದಿನಕ್ಕೆ 40 ಗ್ರಾಮ್‌ಗಿಂತ ಹೆಚ್ಚು ಆಲ್ಕೋಹಾಲ್ ಸೇವಿಸುವ ಶೇ. 90ರಷ್ಟು ಜನರಿಗೆ ಫ್ಯಾಟಿ ಲಿವರ್ ಕಾಯಿಲೆ ಕಾಣಿಸಿಕೊಳ್ಳುತ್ತದೆಯಂತೆ.

ಇಲ್ಲಿ ಗ್ರಾಮ್ ಲೆಕ್ಕದಲ್ಲಿ ಆಲ್ಕೋಹಾಲ್ ಅಂತ ತಿಳಿಸಲಾಗಿದೆ. ಮದ್ಯ ಪ್ರಿಯರಿಗೆ ಇದು ಅಂದಾಜಿಗೆ ಸಿಗಲಿಕ್ಕಿಲ್ಲ. ಮದ್ಯದ ಬಾಟಲಿಗಳು ಎಂಎಲ್, ಪಿಂಟ್ ಲೆಕ್ಕದಲ್ಲಿ ಬರುತ್ತವೆ. ಶೇ. 12ರಷ್ಟು ಆಲ್ಕೋಹಾಲ್ ಇರುವ ವೈನ್ ಆದರೆ 175 ಎಂಎಲ್‌ಗಿಂತ ಹೆಚ್ಚು ಪ್ರಮಾಣ ಡೇಂಜರಸ್ ಆಗುತ್ತದೆ. ಆಲ್ಕೋಹಾಲ್ ಪ್ರಮಾಣ ಇನ್ನೂ ಹೆಚ್ಚು ಇದ್ದರೆ ಮದ್ಯ ಸೇವನೆಯನ್ನು ಇನ್ನೂ ಕಡಿಮೆ ಮಾಡಬೇಕಾಗುತ್ತದೆ. ಇನ್ನು ಶೇ. 4ರಷ್ಟು ಆಲ್ಕೋಹಾಲ್ ಇರುವ ಬಿಯರ್ ವಿಚಾರಕ್ಕೆ ಬಂದರೆ ಎರಡು ಪಿಂಟ್‌ಗಿಂತ ಹೆಚ್ಚು ಸೇವನೆ ಮಾಡಲೇಬಾರದು. ಇಲ್ಲಿ 180 ಎಂಎಲ್ ಅಂದರೆ ಒಂದು ಕ್ವಾರ್ಟರ್ ಆಗುತ್ತದೆ. ಒಂದು ಪಿಂಟ್ ಎಂಬುದು 568 ಎಂಎಲ್ ಇರುತ್ತದೆ.

ಕುತೂಹಲಕಾರಿ ವಿಷಯ ಏನೆಂದರೆ, ವಿಜ್ಞಾನಿಗಳು ಹೇಳಿರುವ ಪ್ರಕಾರ, ಪುರುಷರಿಗೆ ಹೋಲಿಸಿದರೆ ಮಹಿಳೆಯರು ಅಂದರೆ ಯಾರು ಕುಡಿಯುತ್ತಾರೋ ಅವರಿಗೆ ಲಿವರ್ ತೊಂದರೆ ಹೆಚ್ಚು ಇರುತ್ತದೆಯಂತೆ. ಆಲ್ಕೋಹಾಲ್ ಸಂಬಂಧಿತ ಲಿವರ್ ಕಾಯಿಲೆ ಎಆರ್‌ಎಲ್‌ಡಿ ಕೇವಲ ಕುಡುಕರಿಗೆ ಮಾತ್ರವಲ್ಲ, ದಡೂತಿ ದೇಹದವರು ಮತ್ತು ಹೆಪಾಟಿಟಿಸ್ ಸಿ ಮುಂತಾದ ಲಿವರ್ ಸಮಸ್ಯೆ ಹೊಂದಿರುವವರನ್ನೂ ಬಾಧಿಸುತ್ತದೆ.

ಇನ್ನೊಂದು ಮುಖ್ಯವಾದ ವಿಷಯವೇನೆಂದರೆ, ಎಆರ್‌ಎಲ್‌ಡಿ ಕಾಯಿಲೆಯ ರೋಗಲಕ್ಷಣಗಳು ಬಹಳ ಬೇಗ ಗೊತ್ತಾಗುವುದಿಲ್ಲ. ಯಕೃತ್ತು ಸಂಪೂರ್ಣವಾಗಿ ಹಾನಿಗೊಳಗಾದಾಗ ಮಾತ್ರ ಇದರ ನೋವು ಅರಿವಿಗೆ ಬರುತ್ತದೆ. ಹಾಗಾಗಿ, ನಿಯಮಿತವಾಗಿ ವೈದ್ಯರ ಬಳಿ ಈ ರೋಗದ ತಪಾಸಣೆ ಮಾಡಿಸಿದರೆ ಉತ್ತಮ. ಸಿಬಿಸಿ, ಲಿವರ್ ಟೆಸ್ಟ್, ಹೊಟ್ಟೆಯ ಸಿಟಿ ಸ್ಕ್ಯಾನ್ ಮಾಡಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

Leave A Reply

Your email address will not be published.