ನೂಪುರ್ ಶರ್ಮಾ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಇನ್ನು ಮುಂದೆ ಒಂದೇ ಕಡೆ ವಿಚಾರಣೆ : ಸುಪ್ರೀಂಕೋರ್ಟ್ ಆದೇಶ

ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಹೇಳಿದೆ. ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಲ್ಲಾ ಕೇಸ್ ಗಳನ್ನು ಒಂದೇ ಕಡೆ ನಡೆಸುವಂತೆ ಮಾಡಿಕೊಂಡ ಮನವಿಯನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.

ನುಪೂರ್ ಶರ್ಮಾ ವಿರುದ್ಧದ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಒಟ್ಟಿಗೆ ಸೇರಿಸಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಪೊಲೀಸರು ಅಮಿತ್ ಶಾ ನೇತೃತ್ವದ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಬೇಕಿದೆ.

ಜುಲೈ 1ರ ವಿಚಾರಣೆಯ ಸಂದರ್ಭದಲ್ಲಿ ಶರ್ಮಾ ಅವರು ದೇಶಾದ್ಯಂತ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸಿ ದೆಹಲಿಗೆ ವರ್ಗಾಯಿಸಲು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ನ್ಯಾಯಾಲಯದ ವಿಚಾರಣೆಗಾಗಿ ಪ್ರತಿ ರಾಜ್ಯಕ್ಕೆ ಹೋಗುವುದರಿಂದ ತನಗೆ ಮತ್ತು ಕುಟುಂಬಕ್ಕೆ ಭದ್ರತಾ ಬೆದರಿಕೆ ಎದುರಿಸಬೇಕಾಗುತ್ತದೆ ಎಂದಿದ್ದರು.

ಪ್ರವಾದಿಯ ಬಗ್ಗೆ ನುಪುರ್ ಶರ್ಮಾ ಮಾಡಿದ ಹೇಳಿಕೆಯ ಮೇಲೆ ಶರ್ಮಾ ವಿರುದ್ಧದ ಒಂಭತ್ತು ಪ್ರಕರಣಗಳಲ್ಲಿ ಅವರನ್ನು ಬಂಧಿಸಲಾಗುವುದಿಲ್ಲ ಜುಲೈ 19 ರಂದು ಸುಪ್ರೀಂಕೋರ್ಟ್ ಹೇಳಿತ್ತು. ಜುಲೈ 1ರ ಆದೇಶದ ನಂತರ, ಅಜೀರ್ ದರ್ಗಾದ ಉದ್ಯೋಗಿಯೊಬ್ಬರು ಕತ್ತು ಸೀಳುವುದಾಗಿ ವೀಡಿಯೊದಲ್ಲಿ ಬೆದರಿಕೆ ಹಾಕಿದ್ದಾರೆ. ಉತ್ತರ ಪ್ರದೇಶದ ಮತ್ತೊಬ್ಬ ತನ್ನನ್ನು ನಿಂದಿಸಿ ತನ್ನ ಶಿರಚ್ಛೇದ ಮಾಡುವುದಾ ಬೆದರಿಕೆ ಹಾಕಿರುವ ಉದಾಹರಣೆಗಳಿವೆ ಎಂದು ಶರ್ಮಾ ನ್ಯಾಯಾಲಯದಲ್ಲಿ ಹೇಳಿದ್ದರು

ನೂಪುರ್ ಶರ್ಮಾ ವಿರುದ್ಧ ದೆಹಲಿ, ಮಹಾರಾಷ್ಟ್ರ ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂನಲ್ಲಿ ಪ್ರಕರಣಗಳು ದಾಖಲಾಗಿವೆ.

ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಹೇಳಿಕೆ ಖಂಡಿಸಿ ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಗಲ್ಫ್ ರಾಷ್ಟ್ರಗಳಿಂದ ಅಧಿಕೃತ ದೂರುಗಳು ಬಂದ ನಂತರ ಬಿಜೆಪಿ ಅವರನ್ನು ವಕ್ತಾರ ಸ್ಥಾನದಿಂದ ವಜಾಗೊಳಿಸಿತ್ತು. ನೂಪುರ್ ಶರ್ಮಾ ವಿರುದ್ಧ ಅನೇಕ ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಅವುಗಳನ್ನು ಒಟ್ಟುಗೂಡಿಸುವಂತೆ ಶರ್ಮಾ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು.

Leave A Reply

Your email address will not be published.