Day: August 10, 2022

ಚೀನಾದಲ್ಲಿ ಕಂಡು ಬಂತು ಮತ್ತೊಂದು ಡೆಡ್ಲಿ ವೈರಸ್ | ಇದರ ಲಕ್ಷಣಗಳೇನು? ಇದು ಹೇಗೆ ಹರಡುತ್ತವೆ… ಎಲ್ಲಾ ಮಾಹಿತಿ ಇಲ್ಲಿದೆ

ಕೊರೊನಾ ಮಹಾಮಾರಿಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಹೊಸ ವೈರಸ್ ನಿಜಕ್ಕೂ ಭೀತಿಗೊಳಪಡಿಸುವುದು ಸಹಜ. ಅದು ಕೂಡಾ ಚೀನಾ ದೇಶದಲ್ಲಿ ಕಂಡು ಬಂದರಂತೂ ಅದು ಇನ್ನೂ ಹೆಚ್ಚಿನ ಭಯ ಮೂಡಿಸದೇ ಇರದು. ಈ ಹೊಸ ವೈರಸ್‌ ನ 35 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಜನರಿಗೆ ಮತ್ತೆ ಆತಂಕ ಶುರುವಾಗಿದೆ. ಲ್ಯಾಂಗ್ಯಾ ಹೆನಿಪಾವೈರಸ್ (ಲೇವ್) ಎಂಬ ಈಶಾನ್ಯ ಪ್ರಾಂತ್ಯಗಳಾದ ಶಾಂಡೊಂಗ್ ಮತ್ತು ಹೆನಾನ್ನಲ್ಲಿ ಮೊದಲ ಬಾರಿಗೆ ಕಂಡು ಬಂದಿದೆ. ಈ ವೈರಸ್‌ ಅನ್ನು ಕಳೆದ ವಾರದಲ್ಲಿ ಅಧಿಕೃತವಾಗಿ ಕಂಡುಹಿಡಿಯಲಾಯಿತು. ಚೀನಾದ …

ಚೀನಾದಲ್ಲಿ ಕಂಡು ಬಂತು ಮತ್ತೊಂದು ಡೆಡ್ಲಿ ವೈರಸ್ | ಇದರ ಲಕ್ಷಣಗಳೇನು? ಇದು ಹೇಗೆ ಹರಡುತ್ತವೆ… ಎಲ್ಲಾ ಮಾಹಿತಿ ಇಲ್ಲಿದೆ Read More »

ಮೂಡುಬಿದ್ರೆ: ಹಗಲು ಹೊತ್ತಲ್ಲೇ ಅಕ್ರಮ ಗೋ ಸಾಗಾಟ!! ಹಿಂದೂ ಯುವಕರಿಬ್ಬರ ಬಂಧನ

ಮೂಡುಬಿದ್ರೆ:ಅಕ್ರಮವಾಗಿ ಮೂರು ಗೋವುಗಳನ್ನು ಸಾಗಿಸುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ ಘಟನೆಯೊಂದು ಮೂಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾಗಿರಿಯಲ್ಲಿ ನಡೆದಿದೆ. ಬಂಧಿತರನ್ನು ಮೂಡುಬಿದ್ರೆ ಲಾಡಿ ನಿವಾಸಿಗಳಾದ ಸಂದೇಶ್ ಶೆಟ್ಟಿ ಹಾಗೂ ಪ್ರಣೀತ್ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಅಕ್ರಮವಾಗಿ ಗೋ ಸಾಗಾಟ ನಡೆಸಿ, ಕಸಾಯಿಖಾನೆ ನಡೆಸುವವರಿಗೆ ಮಾರಲು ಯತ್ನಿಸಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಘಟನೆ ವಿವರ:ಮೂಡುಬಿದ್ರೆಯ ವಿದ್ಯಾಗಿರಿಯಲ್ಲಿ ಹಗಲು ಹೊತ್ತಿನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಟೆಂಪೋವೊಂದು ಬಂದಿದ್ದು, ಟೆಂಪೋದಲ್ಲಿ ಮೂರು ಹಸುಗಳನ್ನು ಕಟ್ಟಿ ಸಾಗಿಸಲಾಗುತ್ತಿತ್ತು.ಕೂಡಲೇ …

ಮೂಡುಬಿದ್ರೆ: ಹಗಲು ಹೊತ್ತಲ್ಲೇ ಅಕ್ರಮ ಗೋ ಸಾಗಾಟ!! ಹಿಂದೂ ಯುವಕರಿಬ್ಬರ ಬಂಧನ Read More »

ಉಡುಪಿ:ಭೀಕರ ರಸ್ತೆ ಅಪಘಾತ!! ಬೈಕ್ ಸವಾರ ಸ್ಥಳದಲ್ಲೇ ಸಾವು

ಉಡುಪಿ: ಬೈಕ್ ಹಾಗೂ ಟಾಂಕರ್ ನಡುವೆ ನಡೆದ ಅಪಘಾತವೊಂದರಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೊಂದು ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸೇತುವೆಯಲ್ಲಿ ನಡೆದಿದೆ. ಮೃತ ಸವಾರನನ್ನು ಮಲ್ಲಾರು ನಿವಾಸಿ ಅಲ್ಫಜ್ ಎಂದು ಗುರುತಿಸಲಾಗಿದ್ದು, ಘಟನೆಗೆ ಕಾರಣವಾದ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತ ಸವಾರ ಕಾಪುವಿನಿಂದ ತನ್ನ ಸ್ಕೂಟಿಯಲ್ಲಿ ಉಡುಪಿಯತ್ತ ತೆರಳುತ್ತಿದ್ದ ಸಂದರ್ಭ ಉದ್ಯಾವರ ಸೇತುವೆಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಸವಾರನ ಮೇಲೆಯೇ ಟ್ಯಾಂಕರ್ ಹರಿದಿದ್ದು, ಸ್ಥಳದಲ್ಲೇ ಅಸುನಿಗಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಕಾಪು ಪೊಲೀಸರು …

ಉಡುಪಿ:ಭೀಕರ ರಸ್ತೆ ಅಪಘಾತ!! ಬೈಕ್ ಸವಾರ ಸ್ಥಳದಲ್ಲೇ ಸಾವು Read More »

ಉಡುಪಿ: ಕಾಲು ಸಂಕ ದಾಟುವಾಗ ನೀರಿಗೆ ಬಿದ್ದಿದ್ದ ಬಾಲಕಿಯ ಮೃತದೇಹ ಪತ್ತೆ!

ಉಡುಪಿ: ಶಾಲಾ ಬಾಲಕಿಯೊಬ್ಬಳು ಕಾಲು ಸಂಕದಿಂದ ಜಾರಿ ನೀರಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಬೀಜಮಕ್ಕಿ ಎಂಬಲ್ಲಿ ಸೋಮವಾರ ಸಂಜೆ ನಡೆದಿತ್ತು. ಸತತ ಮೂರು ದಿನಗಳ ಕಾರ್ಯಚರಣೆಯ ಬಳಿಕ ಇದೀಗ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಸೋಮವಾರ ಸಂಜೆ ಶಾಲೆ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ. 2ನೇ ತರಗತಿಯ ಬಾಲಕಿ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ದಂಪತಿಗಳ ಪುತ್ರಿ ಸಾನಿಧ್ಯ ಕಾಲು ಸಂಕವೊಂದರ ಮೂಲಕ ದಾಟುವಾಗ ಕಾಲು ಜಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಳು. ಬಳಿಕ ಅಧಿಕಾರಿಗಳ, ಪೋಲಿಸರ …

ಉಡುಪಿ: ಕಾಲು ಸಂಕ ದಾಟುವಾಗ ನೀರಿಗೆ ಬಿದ್ದಿದ್ದ ಬಾಲಕಿಯ ಮೃತದೇಹ ಪತ್ತೆ! Read More »

ಸುಪ್ರೀಂ ಕೋರ್ಟಿನ 49ನೇ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡ ನ್ಯಾ.ಉದಯ್ ಉಮೇಶ್ ಲಲಿತ್

ನವದೆಹಲಿ: ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ನ್ಯಾಯಮೂರ್ತಿ ಯು.ಯು.ಲಲಿತ್ ಅವರನ್ನು ಸುಪ್ರೀಂ ಕೋರ್ಟಿನ 49ನೇ ಮುಖ್ಯ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ನ್ಯಾಯಾಧೀಶರಾದ ಎಸ್.ವಿ ರಮಣ್ ಅವರು ಇದೇ ತಿಂಗಳ 26ರಂದು ನಿವೃತ್ತಿ ಹೊಂದಲಿದ್ದಾರೆ. ಅವರ ಸ್ಥಾನಕ್ಕೆ ಇದೀಗ ಯು.ಯು.ಲಲಿತ್ ಅವರನ್ನು ಆರಿಸಲಾಗಿದೆ. ಆಗಸ್ಟ್ 27ರಿಂದ ಸುಪ್ರೀಂ ಕೋರ್ಟಿನ ಚುಕ್ಕಾಣಿಯನ್ನು ಯು.ಯು.ಲಲಿತ್ ಹಿಡಿಯಲಿದ್ದಾರೆ. ಈ ವರ್ಷದ ನವೆಂಬರ್ 8ರವರೆಗೆ ಇವರು ಅಧಿಕಾರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಮಡಿಕೇರಿ – ಸಂಪಾಜೆ ಹೆದ್ದಾರಿ : ಆ.10 – 11 ರಾತ್ರಿ ವೇಳೆ‌ ಸಂಚಾರ ಬಂದ್ – ಜಿಲ್ಲಾಧಿಕಾರಿ ಆದೇಶ

ಕೊಡಗು ಜಿಲ್ಲೆಯ ಮದೆನಾಡು ಬಳಿ ಭೂಕುಸಿತದ ಆತಂಕ ಇರುವ ಹಿನ್ನೆಲೆಯಲ್ಲಿ ಮಡಿಕೇರಿ-ಸುಳ್ಯ ಹೆದ್ದಾರಿಯನ್ನು ಎರಡು ದಿನಗಳ ಕಾಲ ರಾತ್ರಿ ವೇಳೆ ಬಂದ್ ಮಾಡಲು ಕೊಡಗು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಆ.10 ಹಾಗೂ 11 ರಂದು ರಾತ್ರಿ ವೇಳೆ ವಾಹನ ಸಂಚಾರ ಬಂದ್ ಆ ಮಾಡಲಾಗುತ್ತಿದೆ. ರಾತ್ರಿ 8.30 ರಿಂದ ಬೆಳಗ್ಗೆ 6.30 ವರೆಗೆ ವಾಹನ ಸಂಚಾರ ನಿಷೇಧ ಇರುತ್ತದೆ. ಹಗಲಿನ ವೇಳೆ ಎಂದಿನಂತೆ ವಾಹನ ಸಂಚಾರ ಇರುತ್ತದೆ. ಹೆದ್ದಾರಿಯ ಮದೆನಾಡು ಬಳಿಯ ಕರ್ತೋಜಿ ಎಂಬಲ್ಲಿ ಗುಡ್ಡ …

ಮಡಿಕೇರಿ – ಸಂಪಾಜೆ ಹೆದ್ದಾರಿ : ಆ.10 – 11 ರಾತ್ರಿ ವೇಳೆ‌ ಸಂಚಾರ ಬಂದ್ – ಜಿಲ್ಲಾಧಿಕಾರಿ ಆದೇಶ Read More »

ಬ್ಯಾಂಕ್ ಗ್ರಾಹಕರೇ ಗಮನಿಸಿ | ಆರು ದಿನಗಳ ಕಾಲ ಬ್ಯಾಂಕ್ ಗೆ ರಜೆ !!!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ರಜಾ ಕ್ಯಾಲೆಂಡರ್ ಪ್ರಕಾರ, ವಿವಿಧ ಹಬ್ಬಗಳ ಕಾರಣದಿಂದಾಗಿ ಕೆಲವು ನಗರಗಳಲ್ಲಿ ನಾಳೆಯಿಂದ ಆರು ದಿನಗಳ ಕಾಲ ಬ್ಯಾಂಕುಗಳು ಬಂದ್‌ ಆಗಲಿದೆ . ಈ ರಜಾದಿನಗಳನ್ನು ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ಘೋಷಿಸಲಾಗುತ್ತದೆ. ನೀವು ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಹೊಂದಿದ್ದರೆ, ನೀವು ಅದನ್ನು ಮುಂದೂಡಬೇಕಾಗುತ್ತದೆ. ಪ್ರತಿ ರಾಜ್ಯಕ್ಕೂ ಬ್ಯಾಂಕ್ ರಜಾದಿನಗಳು ವಿಭಿನ್ನವಾಗಿರುತ್ತವೆ, ಆದಾಗ್ಯೂ, ಭಾರತದಾದ್ಯಂತ ಬ್ಯಾಂಕುಗಳನ್ನು ಮುಚ್ಚುವ ಕೆಲವು ದಿನಗಳಿವೆ. ಆಗಸ್ಟ್ 11 : ರಂದು ಬ್ಯಾಂಕ್ ರಜೆ ಆಗಸ್ಟ್ …

ಬ್ಯಾಂಕ್ ಗ್ರಾಹಕರೇ ಗಮನಿಸಿ | ಆರು ದಿನಗಳ ಕಾಲ ಬ್ಯಾಂಕ್ ಗೆ ರಜೆ !!! Read More »

BIGG BOSS : ತಪ್ಪು ಮಾಡಿದ್ದೀನಿ, ಆದರೆ ಬದುಕೋಕೆ ಅವಕಾಶ ಕೊಡಿ; ಸೋನು ಗೌಡ

ಸೋನು ಶ್ರೀನಿವಾಸ್ ಗೌಡ ಟಿಕ್ ಟಾಕ್ ಮೂಲಕ ಬೆಳಕಿಗೆ ಬಂದ ಸ್ಪರ್ಧಿ. ಈಗ ಬಿಗ್ ಬಾಸ್ ಕನ್ನಡ ಓಟಿಟಿ ಸ್ಪರ್ಧಿ. ಸೋನು ಗೌಡ, ಬಿಗ್ ಬಾಸ್ ಗೆ ಬರುವ ಮೊದಲು ಟ್ರೋಲ್‌ಗಳ ಮೂಲಕ ಖ್ಯಾತಿ ಪಡೆದರು. ಸೋಶಿಯಲ್ ಮೀಡಿಯಾದಲ್ಲಿ ಲಿಪ್ ಸಿಂಕ್ ವೀಡಿಯೋ ಮಾಡುತ್ತಿದ್ದ ಸೋನು, ಹೆಚ್ಚಾಗಿಯೇ ಟ್ರೋಲ್ ಗೊಳಗಾಗಿದ್ದಾರೆ ಎಂದೇ ಹೇಳಬಹುದು. ಬಹುಶಃ ಆ ನೆಗೆಟಿವ್ ಫೇಮ್ ಈಗ ಬಿಗ್ ಬಾಸ್ಚಮನೆವರೆಗೆ ಕರೆದುಕೊಂಡು ಬಂದಿದೆ. ಈಗ ಹೊರಗಡೆ ಜನರು ಟ್ರೋಲ್ ಮಾಡಿರುವ ಬಗ್ಗೆ ಬಿಗ್ ಬಾಸ್ …

BIGG BOSS : ತಪ್ಪು ಮಾಡಿದ್ದೀನಿ, ಆದರೆ ಬದುಕೋಕೆ ಅವಕಾಶ ಕೊಡಿ; ಸೋನು ಗೌಡ Read More »

ನೂಪುರ್ ಶರ್ಮಾ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಇನ್ನು ಮುಂದೆ ಒಂದೇ ಕಡೆ ವಿಚಾರಣೆ : ಸುಪ್ರೀಂಕೋರ್ಟ್ ಆದೇಶ

ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಹೇಳಿದೆ. ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಲ್ಲಾ ಕೇಸ್ ಗಳನ್ನು ಒಂದೇ ಕಡೆ ನಡೆಸುವಂತೆ ಮಾಡಿಕೊಂಡ ಮನವಿಯನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ನುಪೂರ್ ಶರ್ಮಾ ವಿರುದ್ಧದ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಒಟ್ಟಿಗೆ ಸೇರಿಸಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಸುಪ್ರೀಂ …

ನೂಪುರ್ ಶರ್ಮಾ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಇನ್ನು ಮುಂದೆ ಒಂದೇ ಕಡೆ ವಿಚಾರಣೆ : ಸುಪ್ರೀಂಕೋರ್ಟ್ ಆದೇಶ Read More »

ರಸ್ತೆ ಮೇಲೆ ಸ್ಟಂಟ್ ಮಾಡುತ್ತಿರುವ ಪುಟ್ಟ ಬಾಲಕ | ಈತನ ಪ್ರತಿಭೆಯನ್ನು ಕೊಂಡಾಡಿ ವೀಡಿಯೊ ಶೇರ್ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ

ಇಂದಿನ ಯುವಪೀಳಿಗೆಯ ಮಕ್ಕಳಲ್ಲಿ ಅದೆಷ್ಟೋ ಪ್ರತಿಭೆಗಳು ಕಾಣಸಿಗುತ್ತದೆ. ಆದರೆ, ಅವಕಾಶವೆಂಬ ವೇದಿಕೆ ಕಾಣದೆ ಅಲ್ಲೇ ಚಿವುಟಿ ಹೋಗುತ್ತಿದೆ. ಇಂತಹ ಪ್ರತಿಭೆಗಳನ್ನು ಉತ್ತಮ ಮಟ್ಟಕ್ಕೆ ತರಲು ಪ್ರಯತ್ನಿಸುವವರಲ್ಲಿ ಉದ್ಯಮಿ ಆನಂದ್ ಮಹೀಂದ್ರಾ ಕೂಡ ಒಬ್ಬರು. ಪ್ರತೀ ಬಾರಿ ವಿಶೇಷತೆಯಿಂದ ಕೂಡಿದ ವಿಷಯಗಳ ಕುರಿತು ಟ್ವೀಟ್ ಮಾಡುವ ಇವರು, ಈ ಬಾರಿ ಬಾಲಕನ ಸ್ಟಂಟ್ ವೀಡಿಯೊವನ್ನು ಶೇರ್ ಮಾಡಿದ್ದಾರೆ. ತಿರುನೆಲ್ವೇಲಿ ಸಮೀಪದ ಹಳ್ಳಿಯಲ್ಲಿ ಈ ಹುಡುಗನನ್ನು ನೋಡಿದವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಚಿಕ್ಕ ಹುಡುಗ ರಸ್ತೆಯೊಂದರಲ್ಲಿ ತನ್ನ …

ರಸ್ತೆ ಮೇಲೆ ಸ್ಟಂಟ್ ಮಾಡುತ್ತಿರುವ ಪುಟ್ಟ ಬಾಲಕ | ಈತನ ಪ್ರತಿಭೆಯನ್ನು ಕೊಂಡಾಡಿ ವೀಡಿಯೊ ಶೇರ್ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ Read More »

error: Content is protected !!
Scroll to Top