ಒಡೆಯನ ಸಾವಿಗೆ ಕೊರಗಿ ಸತ್ತಿತಾ ನಾಯಿ ? | ಪ್ರವೀಣ್ ನೆಟ್ಟಾರ್ ಪ್ರೀತಿಯ ಶ್ವಾನ ಸಾವು

ಸುಳ್ಯ : ಕೆಲ ದಿನಗಳ ಹಿಂದೆಯಷ್ಟೇ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರು ಪ್ರೀತಿಯಿಂದ ಸಾಕಿದ್ದ ನಾಯಿ ಅಸೌಖ್ಯದಿಂದಾಗಿ ಸಾವನ್ನಪ್ಪಿದೆ.

ಪ್ರವೀಣ್ ನೆಟ್ಟಾರು ಫೇಸ್ ಬುಕ್ ನಲ್ಲಿ ನಾಯಿಗಳ ರಕ್ಷಣೆ ಮಾಡಿದ್ದ ಪೋಸ್ಟ್ ಒಂದು ವೈರಲ್ ಆಗಿತ್ತು. ಸಾಕು ಪ್ರಾಣಿಗಳ ಬಗ್ಗೆ ಅಪಾರ ಕಾಳಜಿ, ಪ್ರೀತಿ ಹೊಂದಿದ್ದ ಪ್ರವೀಣ್ ನೆಟ್ಟಾರು ಪ್ರೀತಿಯಿಂದ ಸಾಕಿದ್ದ ನಾಯಿ ಕಳೆದ ಮೂರು ದಿನಗಳಿಂದ ಅಸೌಖ್ಯದಿಂದಿದ್ದು ಆ.9 ರಂದು ಸಾವನ್ನಪ್ಪಿದೆ. ನಾಯಿಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಪ್ರವೀಣ್ ನೆಟ್ಟಾರ್ ನ ಸಾಕಿದ ನಾಯಿ ಸಾವಿಗೆ ಒಡೆಯನ ಸಾವಿನ ನೋವು ಕಾರಣ ಆಯಿತೇ ಎನ್ನುವುದು ಪ್ರಶ್ನೆಯಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಅವರ ನಾಯಿ ಇತ್ತೀಚಿಗೆ ಮಂಕಾಗಿತ್ತು. ಒಡೆಯನ ಅನುಪಸ್ಥಿತಿ ಒಂದು ಕಡೆ, ದುಃಖತಪ್ತ ರೋಧಿಸುವ ಮನೆಯವರು ಇನ್ನೊಂದು ಕಡೆ, ಸದಾ ಮನೆಯತ್ತ ಬರುವ ಜನಜಂಗುಳಿ ಮಗದೊಂದು ಕಡೆ ಇವೆಲ್ಲದರ ಮಧ್ಯೆ ಪ್ರಾಣಿಗಳೂ ಕೂಡಾ ಸಂಕಟ ಅನುಭವಿಸಿದಂತಿದೆ. ಈಗ ಯಜಮಾನನ ದಾರಿ ಹುಡುಕಿ ಹೊರಟಿದೆ ಪ್ರವೀಣ್ ನೆಟ್ಟಾರ್ ಆಶ್ರಯ ಕೊಟ್ಟ ಪ್ರೀತಿಯ ನಾಯಿ.

error: Content is protected !!
Scroll to Top
%d bloggers like this: