ಫಾಸ್ಟ್ಯಾಗ್ ವ್ಯವಸ್ಥೆಯ ಬದಲಿಗೆ ಹೊಸ ತಂತ್ರಜ್ಞಾನ ಜಾರಿ!

ಬೆಂಗಳೂರು: ಹೆದ್ದಾರಿಗಳಲ್ಲಿ ಸುಲಭವಾಗಿ ಟೋಲ್ ಸಂಗ್ರಹಿಸಲೆಂದು ಜಾರಿಗೆ ತಂದ ಫಾಸ್ಟ್ಯಾಗ್ ವ್ಯವಸ್ಥೆಯ ಬದಲಿಗೆ ಹೊಸ ವ್ಯವಸ್ಥೆ ಜಾರಿಯಾಗಲಿದೆ. ಹೌದು. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಹೆದ್ದಾರಿಗಳಲ್ಲಿ ವಾಹನ ಸಂಚರಿಸಿದಷ್ಟು ದೂರವನ್ನು ಲೆಕ್ಕ ಹಾಕಿ ಟೋಲ್ ನಿಗದಿಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ.


Ad Widget

ಟೋಲ್​ಪ್ಲಾಜಾಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲೆಂದು 2016ರಲ್ಲಿ ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೆ ತರಲಾಯಿತು. ಈ ವ್ಯವಸ್ಥೆಯಡಿ ವಾಹನವೊಂದು ಟೋಲ್ ಪ್ಲಾಜಾ ದಾಟಿದ ತಕ್ಷಣ ಹಣ ಕಡಿತಗೊಳ್ಳುತ್ತದೆ. ಫಾಸ್ಟ್ಯಾಗ್ ಜಾರಿಯಾದ ನಂತರ ಹೆದ್ದಾರಿಗಳಲ್ಲಿ ವಾಹನ ಸಂಚಾರ ಸುಗಮವಾಗಿತ್ತು. ಇದೀಗ ಸರ್ಕಾರವು ಮತ್ತೊಂದು ಸುಧಾರಣೆಯನ್ನು ಜಾರಿಗೆ ತರಲು ಮುಂದಾಗಿದೆ.

ಜಿಪಿಎಸ್ ಉಪಗ್ರಹ ತಂತ್ರಜ್ಞಾನವನ್ನು ಟೋಲ್ ನಿಗದಿಪಡಿಸಲು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದರ ಕಾರ್ಯಸಾಧ್ಯತೆ ಪರಿಶೀಲಿಸಲು ಪ್ರಾಯೋಗಿಕವಾಗಿ ಭಾರತದಲ್ಲಿ ಹೊಸ ವ್ಯವಸ್ಥೆಯನ್ನು ಕೆಲವೆಡೆ ಜಾರಿಗೆ ತರಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್​ಡಿಟಿವಿ ಜಾಲತಾಣ ವರದಿ ಮಾಡಿದೆ.


Ad Widget

ಟೋಲ್​ಬೂತ್​ಗಳ ಜಾಗದಲ್ಲಿ ಜಿಪಿಎಸ್-ಆಧರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ. ಚಲಿಸುವ ವಾಹನಗಳು ಟೋಲ್ ರಸ್ತೆಯಲ್ಲಿ ಎಷ್ಟು ದೂರ ಸಂಚರಿಸಿವೆ ಎಂಬುದನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಿ ಈ ವ್ಯವಸ್ಥೆಯು ಟೋಲ್ ಸಂಗ್ರಹಿಸಲಿದೆ. ವಾಹನವೊಂದು ಟೋಲ್ ಪ್ರದೇಶಕ್ಕೆ ಪ್ರವೇಶಿಸಿದ ತಕ್ಷಣ ತೆರಿಗೆ ಲೆಕ್ಕಾಚಾರ ಆರಂಭವಾಗುತ್ತದೆ. ಭಾರತದಲ್ಲಿಯೂ ಈ ವ್ಯವಸ್ಥೆ ಜಾರಿಗೊಳಿಸಲು ಸಾರಿಗೆ ನೀತಿಯನ್ನೇ ಬದಲಿಸಬೇಕಾಗುತ್ತದೆ. ಹಾಲಿ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಎಕ್ಸ್​ಪ್ರೆಸ್ ವೇ ಅಥವಾ ಹೆದ್ದಾರಿಯಲ್ಲಿ ಸಾಗುವ ಎಲ್ಲ ವಾಹನಗಳು ಒಂದು ಟೋಲ್ ದಾಟುವಾಗ ಮತ್ತೊಂದು ಟೋಲ್​ವರೆಗಿನ ಅಂತರಕ್ಕೆ ಇಡಿಯಾಗಿ. ವಾಹನ ಎಷ್ಟು ದೂರ ಚಲಿಸಿತು ಎನ್ನುವುದನ್ನು ಪರಿಗಣಿಸಲು ಅವಕಾಶವಿಲ್ಲ.


Ad Widget

ವಿದೇಶಗಳಲ್ಲಿ, ಮುಖ್ಯವಾಗಿ ಐರೋಪ್ಯ ದೇಶಗಳಲ್ಲಿ ಜಿಪಿಎಸ್ ಆಧರಿತ ವ್ಯವಸ್ಥೆ ಜಾರಿಗೆ ಬಂದಿದೆ. ಭಾರತದಲ್ಲಿಯೂ ಇದೇ ವ್ಯವಸ್ಥೆ ಅಳವಡಿಸುವ ಬಗ್ಗೆ ಗಂಭೀರ ಚಿಂತನೆ ನಡೆದಿದ್ದು, ಪ್ರಾಯೋಗಿಕ ಯೋಜನೆ ಜಾರಿಗೊಳಿಸಲಾಗಿದೆ. ಪ್ರಸ್ತುತ ಪ್ರಾಯೋಗಿಕ ಜಾರಿಗಾಗಿ ದೇಶಾದ್ಯಂತ 1.37 ಲಕ್ಷ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ.

error: Content is protected !!
Scroll to Top
%d bloggers like this: