ಕುಡಿದು ವಾಹನ ಚಲಾಯಿಸುವ ಸವಾರರ ಮೇಲೆ ಪೋಲಿಸರಿಗೆ ಇದೆಂಥಾ ಕಾಳಜಿ, ‘ ಜೈಲಿನಲ್ಲಿ ತುಂಬಾ ಚಳಿ ಇದೆ ‘ ಎಂಬ ಎಚ್ಚರಿಕೆ ಫಲಕ ವೈರಲ್

ಹರಿಯಾಣ: ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಬಾರದು ಎಂಬ ಸಂಚಾರ ನಿಯಮ ಕಡ್ಡಾಯವಾಗಿದ್ದರೂ, ಅನೇಕರು ಇದನ್ನು ಪಾಲಿಸುತ್ತಿಲ್ಲ. ವಾಹನ ಚಾಲಕರ ನಿಲ೯ಕ್ಷ್ಯಕ್ಕೆ ಬೇಸತ್ತ ಹರಿಯಾಣದ ಪೋಲಿಸರು ಆಕಷ೯ಕ ಫಲಕವೊಂದನ್ನು ರಸ್ತೆ ಬದಿಯಲ್ಲಿ ತಂದು ನಿಲ್ಲಿಸಿದ್ದಾರೆ.
ಇದೀಗ ಈ ವಿಶಿಷ್ಟ ಫಲಕ ಎಲ್ಲರ ಗಮನ ಸೆಳೆಯುತ್ತಿದೆ. ನಿಜಕ್ಕೂ ಅದು ಕುಡಿದು ವಾಹನ ಸವಾರಿ ಮಾಡುವವರ ಬಗ್ಗೆ ಕನಿಕರ ವ್ಯಕ್ತಪಡಿಸಿದೆ. ನಿಜಕ್ಕೂ ಅಲ್ಲಿನ ಪೊಲೀಸರು ಕುಡುಕರ ಬಗ್ಗೆ ಒಂದಷ್ಟು ಹೆಜ್ಜೆ ಕಾಳಜಿ ತಗೊಂಡಿದ್ದಾರೆ. ಆ ಸಂದರ್ಭದಲ್ಲಿ ಮನಾಲಿಯಲ್ಲಿ ತುಂಬಾ ಚಳಿ ಇದೆ ಅನ್ನುವುದನ್ನು ನೆನಪಿಸಿದೆ. ಆವರ ಯಾಶೀಲ ಪೋಸ್ಟ್ ಇದೀಗ ವೈರಲ್ ಆಗಿದೆ.
ಸಂದೇಶ ಏನಪ್ಪಾ ಅಂದ್ರೆ, “ಕುಡಿದು ವಾಹನ ಚಲಾಯಿಸಬೇಡಿ, ಮನಾಲಿ ಜೈಲಿನಲ್ಲಿ ವಿಪರೀತ ಚಳಿ ಇದೆ.” ಎಂದು ಅಲ್ಲಿನ ಪೊಲೀಸರು ಫಲಕ ತೂಗು ಹಾಕಿದ್ದಾರೆ.
ಇದೀಗ ಈ ಬೋರ್ಡ್ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗ್ತಿದೆ. ಇದು ಚಾಲಕರು ಚಳಿಯ ಭಯದಿಂದಾದರೂ ಸಂಚಾರ ನಿಯಮವನ್ನು ಪಾಲಿಸಿ, ತಮ್ಮ ಜೀವ ರಕ್ಷಿಸಿಕೊಳ್ಳಲಿ ಎಂದು ಪೋಲೀಸರ ಕಳಕಳಿಯ ಫಲಕ ಆಗಿದೆ.