Day: August 6, 2022

ಕರ್ನಾಟಕದಲ್ಲಿ ಈವರೆಗೆ ಮಂಕಿಪಾಕ್ಸ್ ಕೇಸ್ ದೃಢಪಟ್ಟಿಲ್ಲ – ಡಾ.ಕೆ.ಸುಧಾಕರ್‌

ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ಮಂಕಿಪಾಕ್ಸ್ ಸೋಂಕು ದೃಢ ಪಟ್ಟಿತ್ತು, ಆದರೆ ಇದೀಗ ಈವರೆಗೆ ರಾಜ್ಯದಲ್ಲಿ ಮಂಕಿಪಾಕ್ಸ್‌ ಪ್ರಕರಣ ಕಂಡುಬಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸ್ಪಷ್ಟಪಡಿಸಿದ್ದಾರೆ. ವಿಶ್ವ ವ್ಯಾಸ್ಕ್ಯುಲರ್‌ ದಿನ ಪ್ರಯುಕ್ತ, ವ್ಯಾಸ್ಕ್ಯುಲರ್‌ ಸರ್ಜನ್ಸ್‌ ಅಸೋಸಿಯೇಶನ್‌ ವತಿಯಿಂದ ಆಯೋಜಿಸಿದ್ದ, ಟೌನ್‌ಹಾಲ್‌ನಿಂದ ಕಂಠೀರವ ಸ್ಟೇಡಿಯಂವರೆಗಿನ ಜಾಗೃತಿ ನಡಿಗೆ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡಿದ್ದರು. ಈ ವೇಳೆ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಮಂಕಿ ಫಾಕ್ಸ್‌ ಹಿನ್ನೆಲೆಯಲ್ಲಿ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಸಿದ್ಧತೆ …

ಕರ್ನಾಟಕದಲ್ಲಿ ಈವರೆಗೆ ಮಂಕಿಪಾಕ್ಸ್ ಕೇಸ್ ದೃಢಪಟ್ಟಿಲ್ಲ – ಡಾ.ಕೆ.ಸುಧಾಕರ್‌ Read More »

ಮುಲ್ಕಿ:ಕಾಲೇಜು ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ!! ಹೊರಗಿನ ದುಷ್ಕರ್ಮಿಗಳು ಭಾಗಿಯಾಗಿರುವ ಶಂಕೆ-ಓರ್ವ ಆಸ್ಪತ್ರೆಗೆ

ಮುಲ್ಕಿ:ಕಾಲೇಜ್ ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು,ಹತ್ತಕ್ಕೂ ಹೆಚ್ಚು ಮಂದಿಯಿಂದ ಓರ್ವನ ಮೇಲೆ ಹಲ್ಲೆ ನಡೆದ ಘಟನೆಯೊಂದು ಇಲ್ಲಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಹಲ್ಲೆಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗಿದ್ದು, ಕಾಲೇಜು ಡೇ ಕಾರ್ಯಕ್ರಮದಂದೇ ಹಳೇ ವಿಚಾರದ ಬಗ್ಗೆ ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದಿದೆ ಎನ್ನಲಾಗಿದೆ. ಬಳಿಕ ವಿದ್ಯಾರ್ಥಿಗಳ ಜಗಳಕ್ಕೆ ಒಂದು ಗುಂಪಿನ ಪರವಾಗಿ ಹೊರಗಿನ ದುಷ್ಕರ್ಮಿಗಳು ಕೈಜೋಡಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಪರಸ್ಪರ ಹಲ್ಲೆ ನಡೆದಿದ್ದು, ಸುಮಾರು …

ಮುಲ್ಕಿ:ಕಾಲೇಜು ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ!! ಹೊರಗಿನ ದುಷ್ಕರ್ಮಿಗಳು ಭಾಗಿಯಾಗಿರುವ ಶಂಕೆ-ಓರ್ವ ಆಸ್ಪತ್ರೆಗೆ Read More »

ದಕ್ಷಿಣ ಕನ್ನಡ : ಆ.8 ರವರೆಗೆ ನಿರ್ಬಂಧಗಳು ಜಾರಿ!

ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ಆಗಸ್ಟ್ 05 ರಿಂದ 8ರವರೆಗೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಇತರ ತುರ್ತು ಸೇವೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು ಆ.05 …

ದಕ್ಷಿಣ ಕನ್ನಡ : ಆ.8 ರವರೆಗೆ ನಿರ್ಬಂಧಗಳು ಜಾರಿ! Read More »

ಪುತ್ತೂರು ಗ್ರಾಮಾಂತರ ಸಿಪಿಐ ಆಗಿ ರವಿ ಬಿ.ಎಸ್

ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕಚೇರಿ ಹೊಂದಿರುವ ಸಂಪ್ಯ, ಕಡಬ, ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ (ಸಿ.ಪಿ.ಐ.) ಆಗಿ ರವಿ ಬಿ.ಎಸ್. ಇವರಿಗೆ ವರ್ಗಾವಣೆ ಆದೇಶ ಆಗಿದೆ. ಬಿ.ಎಸ್. ರವಿಯವರು ಪ್ರಸಕ್ತ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ఆగి ಕೆಲಸ ನಿರ್ವಹಿಸುತ್ತಿದ್ದು, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾಗಿ ವರ್ಗಾವಣೆಗೊಳಿಸಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕಚೇರಿಯಿಂದ ಹೊರಡಿಸಲಾದ ಆದೇಶದಲ್ಲಿ …

ಪುತ್ತೂರು ಗ್ರಾಮಾಂತರ ಸಿಪಿಐ ಆಗಿ ರವಿ ಬಿ.ಎಸ್ Read More »

‘ ಇಲ್ಲಿ ಸರಿಯಾಗಿ ನಿದ್ರೆ ಮಾಡಲು ಆಗ್ತಿಲ್ಲ, ನಿಮ್ಮ ಸಿನಿಮಾ ಇರೋ ಥಿಯೇಟರಿಗಿಂತ ಪ್ರಶಸ್ತ ಸ್ಥಳ ನಿದ್ರೆಗೆ ಇನ್ನೆಲ್ಲಿದೆ ? ‘ ಎಂದು ಕುಟುಕಿದ ಅಭಿಮಾನಿ !

ಮುಂಬೈ: ಸೆಲೆಬ್ರಿಟಿಗಳಿಗೆ ಮತ್ತು ಅಭಿಮಾನಿಗಳ ಮಧ್ಯೆ ಪ್ರಶ್ನೋತ್ತರ ಕಾರ್ಯಕ್ರಮ ಶುರುವಾದದ್ದು ನಿಮಗೆಲ್ಲ ಗೊತ್ತೇ ಇದೆ. ” ಏನ್ ಬೇಕಾದ್ರೂ ಕೇಳಿ ” ಅಂತ ಸೆಲೆಬ್ರಿಟಿಗಳು ಹೇಳೋದು, ” ಬೇಡದ್ದನ್ನು” ಅಭಿಮಾನಿಗಳು ಕೇಳೋದು ಮಾಮೂಲಾಗಿಬಿಟ್ಟಿದೆ. ಪ್ರಶ್ನೆ ಕೇಳಲು ಹೇಗೆ ಪ್ರೆಪರೇಷನ್ ಮಾಡಿಕೊಳ್ಳಬಹುದೋ ಹಾಗೆಯೇ, ಉತ್ತರ ಕೂಡಾ ಪ್ರಿಪೇರ್ ಮಾಡ್ಕೊಂಡು, ತಿದ್ದಿ ತೀಡಿ ಕೊಡಬಹುದಾದ್ದರಿಂದ ಸಂವಾದ ಚೆನ್ನಾಗೇ ಇರುತ್ತದೆ, ಅಂತಹ ಪ್ರಶ್ನೆಗೆ ಅದಕ್ಕೆ ತಕ್ಕುದಾದ ಖಾರದ ಉತ್ತರವೇ ಸಾಮಾನ್ಯವಾಗಿ ಸಿಗ್ತದೆ. ಮೊನ್ನೆ ಹಾಗೇ ಆಗಿತ್ತು. ಈ ಸಲ ಹುಷಾರಿನ ಓದುಗನೊಬ್ಬ …

‘ ಇಲ್ಲಿ ಸರಿಯಾಗಿ ನಿದ್ರೆ ಮಾಡಲು ಆಗ್ತಿಲ್ಲ, ನಿಮ್ಮ ಸಿನಿಮಾ ಇರೋ ಥಿಯೇಟರಿಗಿಂತ ಪ್ರಶಸ್ತ ಸ್ಥಳ ನಿದ್ರೆಗೆ ಇನ್ನೆಲ್ಲಿದೆ ? ‘ ಎಂದು ಕುಟುಕಿದ ಅಭಿಮಾನಿ ! Read More »

Breaking News । PFI ಮತ್ತು SDPI ನಿಷೇಧಕ್ಕೆ ರಾಜ್ಯ ಶಿಫಾರಸು – ಜಗದೀಶ್ ಶೆಟ್ಟರ್ ಹೇಳಿಕೆ !

ಹುಬ್ಬಳ್ಳಿ: ಯಾವುದೇ ಹಂತದಲ್ಲಾದರೂ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಬಿಜೆಪಿಯ ಹಿರಿಯರೊಬ್ಬರು ಹೇಳಿದ್ದಾರೆ. ಹಾಗಾದರೆ, ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳ ನಿಷೇಧ ಸನ್ನಿಹಿತವಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸುವ ಕುರಿತು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ. ಯಾವುದೇ ಹಂತದಲ್ಲಾದರೂ ಇವುಗಳನ್ನು ನಿಷೇಧಿಸುವ ವಿಶ್ವಾಸವಿದೆ. ಆ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು. ಆ ಮೂಲಕ ರಾಜ್ಯದ ಮನವಿಯನ್ನು ಕೇಂದ್ರ ಪರಿಗಣಿಸಿ, …

Breaking News । PFI ಮತ್ತು SDPI ನಿಷೇಧಕ್ಕೆ ರಾಜ್ಯ ಶಿಫಾರಸು – ಜಗದೀಶ್ ಶೆಟ್ಟರ್ ಹೇಳಿಕೆ ! Read More »

ಏಳನೇ ವಯಸ್ಸಿನಲ್ಲಿ ನಾಪತ್ತೆಯಾಗಿದ್ದಾಕೆ ಒಂಬತ್ತು ವರ್ಷದ ಬಳಿಕ ಪತ್ತೆ!!

ಮುಂಬೈ: ಶಾಲೆಯ ಸಮೀಪ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ ಹುಡುಗಿಯೊಬ್ಬಳು ಬರೋಬ್ಬರಿ 9 ವರ್ಷಗಳ ಬಳಿಕ ಮನೆ ಸೇರಿದ ಅಪರೂಪದ ಘಟನೆ ಗುರುವಾರ ಮುಂಬೈನಲ್ಲಿ ನಡೆದಿದೆ. ಹೌದು. ತನ್ನ ಏಳನೇ ವಯಸ್ಸಿನಲ್ಲಿ ಅಪ್ಪ-ಅಮ್ಮನಿಂದ ದೂರವಾದಕೆ ಹದಿನಾರನೇ ವಯಸ್ಸಿನಲ್ಲಿ ಮತ್ತೆ ಮನೆಗೆ ಸೇರಿದ್ದಾಳೆ. ಅಷ್ಟಕ್ಕೂ ಇಷ್ಟು ವರ್ಷ ಆಕೆ ಇದ್ದಿದ್ದು ಎಲ್ಲಿ? ಏನಿದರ ಹಿಂದಿರುವ ಸ್ಟೋರಿ ಎಂಬುದನ್ನು ಮುಂದೆ ನೋಡಿ. ಅಂದಹಾಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾರಿ ಡಿಸೋಜಾ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಾಪತ್ತೆಯಾಗಿ ಒಂಬತ್ತು ವರ್ಷದ ಬಳಿಕ ಪತ್ತೆಯಾದಕೆ …

ಏಳನೇ ವಯಸ್ಸಿನಲ್ಲಿ ನಾಪತ್ತೆಯಾಗಿದ್ದಾಕೆ ಒಂಬತ್ತು ವರ್ಷದ ಬಳಿಕ ಪತ್ತೆ!! Read More »

ಬಿಜೆಪಿ ಕಾರ್ಯಕರ್ತರನ್ನು ದೊಣ್ಣೆಯಿಂದ ಥಳಿಸಿದ ಶಾಸಕ‌| ವೀಡಿಯೋ ವೈರಲ್

ಮೆರವಣಿಗೆಯಲ್ಲಿ ಕೂಗಿದ ಘೋಷಣೆಗಳಿಂದ ಕ್ರೋಧಗೊಂಡ ಟಿಎಂಸಿ ಶಾಸಕ ಮತ್ತು ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಜೆಪಿ ಮೆರವಣಿಗೆ ರ್ಯಾಲಿಯ ಮೇಲೆ ಟಿಎಂಸಿ ಶಾಸಕ, ಕಾರ್ಯಕರ್ತರು ದಾಳಿ ಮಾಡಿ ಕೋಲಿನಿಂದ ಥಳಿಸಿದ ಘಟನೆ ನಡೆದಿದೆ. ಪಶ್ಚಿಮಬಂಗಾಳದಲ್ಲಿ ಟಿಎಂಸಿ, ಬಿಜೆಪಿ ಮಧ್ಯೆ ಕಾದಾಟ ಆಗಿದ್ದು, ಬಿಜೆಪಿ ಮೆರವಣಿಗೆ ರ್ಯಾಲಿಯ ಮೇಲೆ ಟಿಎಂಸಿ ಶಾಸಕ, ಕಾರ್ಯಕರ್ತರು ದಾಳಿ ಮಾಡಿ ಕೋಲಿನಿಂದ ಥಳಿಸಿದ ಘಟನೆಯೊಂದು ನಡೆದಿದೆತೃಣಮೂಲ ಕಾಂಗ್ರೆಸ್ ಶಾಸಕ ಅಸಿತ್ ಮುಜುಂದಾರ್ ಹಲ್ಲೆ ನಡೆಸಿದ್ದಲ್ಲದೇ, ಹಲ್ಲೆ ಪ್ರೇರೇಪಣೆ ನೀಡಿದ್ದಾರೆ. ಈ …

ಬಿಜೆಪಿ ಕಾರ್ಯಕರ್ತರನ್ನು ದೊಣ್ಣೆಯಿಂದ ಥಳಿಸಿದ ಶಾಸಕ‌| ವೀಡಿಯೋ ವೈರಲ್ Read More »

ಕಣ್ಣಿಗೆ ಖಾರದ ಪುಡಿ ಬಿದ್ದರೂ, ಓಡುವಾಗ ಬಿದ್ದು ಗಾಯ ಮಾಡಿಕೊಂಡರೂ ಹಠ ಹಿಡಿದು ಡಕಾಯಿತನನ್ನು ಬೆನ್ನಟ್ಟಿ ಹಿಡಿದು ಶೌರ್ಯ ಮೆರೆದ ಗೃಹಿಣಿ !

ಹೈದರಾಬಾದ್: ಹೈದರಾಬಾದ್‌ನ ಈ ಗಟ್ಟಿಗಿತ್ತಿ ಗೃಹಿಣಿಯ ಶೌರ್ಯದ ಕಥೆ ಕೇಳಿದರೆ ಎಂಥವರೂ ತಲೆದೂಗಲೇಬೇಕು. ಕಳ್ಳ ಕಣ್ಣಿಗೆ ಖಾರದ ಪುಡಿ ಎರಚಿದರೂ, ಆತನನ್ನು ಹಿಡಿಯುವ ರಭಸದಲ್ಲಿ ಜಾರಿ ಬಿದ್ದು ಕಾಲಿಗೆ ಏಟಾದರೂ ಬಿಡದೇ ಈಕೆ  ಓಡಿ ಹೋಗುತ್ತಿದ್ದ ಕಳ್ಳನನ್ನು ಹಿಡಿದಿದ್ದಾಳೆ. ತೆಲಂಗಾಣದ ಸೂರ್ಯಪೇಟೆ ಜಿಲ್ಲೆ ಮೋಟೆ ತಾಲೂಕಿನ ಅಪ್ಪಣ್ಣಗುಡೆಂ ಗ್ರಾಮದ ಬಾಲಾಜಿನಗರದಲ್ಲಿ ಗೃಹಿಣಿ ಸಿರೀಶಾ ತಮ್ಮ ಕುಟುಂಬದ ಜತೆ ವಾಸಿಸುತ್ತಿದ್ದಾರೆ. ಇವರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪಕ್ಕದ ಇನ್ನೆರಡು ಮನೆಗಳು ಬಾಡಿಗೆಗೆ ಇವೆ ಎಂದು ಮಾಲೀಕರು ಬೋರ್ಡ್ ಹಾಕಿದ್ದರು. …

ಕಣ್ಣಿಗೆ ಖಾರದ ಪುಡಿ ಬಿದ್ದರೂ, ಓಡುವಾಗ ಬಿದ್ದು ಗಾಯ ಮಾಡಿಕೊಂಡರೂ ಹಠ ಹಿಡಿದು ಡಕಾಯಿತನನ್ನು ಬೆನ್ನಟ್ಟಿ ಹಿಡಿದು ಶೌರ್ಯ ಮೆರೆದ ಗೃಹಿಣಿ ! Read More »

BIG NEWS | ಗೌರಿ-ಗಣೇಶ ಹಬ್ಬಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಬಿಬಿಎಂಪಿ

ಬೆಂಗಳೂರು: ಗೌರಿ-ಗಣೇಶ ಹಬ್ಬ ಬಂತೆಂದರೆ ಎಲ್ಲರಿಗೂ ಸಂಭ್ರಮದ ಹಬ್ಬ. ಗ್ರಾಂಡ್ ಆಗಿ ಆಚರಿಸಲು, ಗಣೇಶನನ್ನು ಕೂರಿಸಲು ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ಈ ವರ್ಷವೂ ಗೌರಿ-ಗಣೇಶ ಹಬ್ಬ ಅದ್ದೂರಿ ಆಚರಣೆಗೆ ಬಿಬಿಎಂಪಿ ಕಡಿವಾಣ ಹಾಕಲಿದೆ. ಹೌದು. ಗೌರಿ-ಗಣೇಶ ಹಬ್ಬಕ್ಕೆ ಹೊಸ ನಿಯಮವನ್ನು ಬಿಬಿ ಎಂಪಿ ಹೊರಡಿಸಿದೆ. ಈ ವರ್ಷವೂ ಕೂಡ ವಾರ್ಡ್‌ ಗೆ ಒಂದೇ ಗಣೇಶ ಕೂರಿಸಬೇಕು ಎಂದು ತಿಳಿಸಿದೆ. ಅಲ್ಲದೆ, ಪಿಓಪಿ ಗಣೇಶ ವಿಗ್ರಹಗಳನ್ನು ಕೂರಿಸುವಂತಿಲ್ಲ. ಹೀಗಾಗಿ, ಪಿಓಪಿ ಗಣೇಶ ವಿಗ್ರಹಗಳನ್ನು ತಯಾರಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ …

BIG NEWS | ಗೌರಿ-ಗಣೇಶ ಹಬ್ಬಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಬಿಬಿಎಂಪಿ Read More »

error: Content is protected !!
Scroll to Top