‘ ಇಲ್ಲಿ ಸರಿಯಾಗಿ ನಿದ್ರೆ ಮಾಡಲು ಆಗ್ತಿಲ್ಲ, ನಿಮ್ಮ ಸಿನಿಮಾ ಇರೋ ಥಿಯೇಟರಿಗಿಂತ ಪ್ರಶಸ್ತ ಸ್ಥಳ ನಿದ್ರೆಗೆ ಇನ್ನೆಲ್ಲಿದೆ ? ‘ ಎಂದು ಕುಟುಕಿದ ಅಭಿಮಾನಿ !

ಮುಂಬೈ: ಸೆಲೆಬ್ರಿಟಿಗಳಿಗೆ ಮತ್ತು ಅಭಿಮಾನಿಗಳ ಮಧ್ಯೆ ಪ್ರಶ್ನೋತ್ತರ ಕಾರ್ಯಕ್ರಮ ಶುರುವಾದದ್ದು ನಿಮಗೆಲ್ಲ ಗೊತ್ತೇ ಇದೆ. ” ಏನ್ ಬೇಕಾದ್ರೂ ಕೇಳಿ ” ಅಂತ ಸೆಲೆಬ್ರಿಟಿಗಳು ಹೇಳೋದು, ” ಬೇಡದ್ದನ್ನು” ಅಭಿಮಾನಿಗಳು ಕೇಳೋದು ಮಾಮೂಲಾಗಿಬಿಟ್ಟಿದೆ. ಪ್ರಶ್ನೆ ಕೇಳಲು ಹೇಗೆ ಪ್ರೆಪರೇಷನ್ ಮಾಡಿಕೊಳ್ಳಬಹುದೋ ಹಾಗೆಯೇ, ಉತ್ತರ ಕೂಡಾ ಪ್ರಿಪೇರ್ ಮಾಡ್ಕೊಂಡು, ತಿದ್ದಿ ತೀಡಿ ಕೊಡಬಹುದಾದ್ದರಿಂದ ಸಂವಾದ ಚೆನ್ನಾಗೇ ಇರುತ್ತದೆ, ಅಂತಹ ಪ್ರಶ್ನೆಗೆ ಅದಕ್ಕೆ ತಕ್ಕುದಾದ ಖಾರದ ಉತ್ತರವೇ ಸಾಮಾನ್ಯವಾಗಿ ಸಿಗ್ತದೆ.

ಮೊನ್ನೆ ಹಾಗೇ ಆಗಿತ್ತು. ಈ ಸಲ ಹುಷಾರಿನ ಓದುಗನೊಬ್ಬ ಕೀಟಲೆಯ ಕಾಲೆಳೆಯುವ ಪ್ರಶ್ನೆ ಕೇಳಿದ್ದಾನೆ. ಬಾಲಿವುಡ್ ಬೋಲ್ಡ್ ಬ್ಯೂಟಿ ಸ್ವರಾ ಭಾಸ್ಕರ್ ಕೂಡಾ ಒಳ್ಳೆಯ ಉತ್ತರ ನೀಡಿದ್ದಾರೆ. ಸ್ವರಾ ಅವರು ತಮ್ಮ ಮುಂಬರುವ ‘ ಜಹಾನ್ ಚರ್್ರ ಯಾರ್’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದು, ಈ ಸಿನಿಮಾ ಬಗ್ಗೆ ಸ್ವರಾ ಅವರು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.
ಅದಕ್ಕೆ ಅಭಿಮಾನಿಯೊಬ್ಬ( ?), ” ನಿಮಗೆ ಸ್ವಾಗತ, ನಿಮ್ಮ ಸಿನಿಮಾ ಎದುರು ನೋಡುತ್ತಿದ್ದೇನೆ. ನಮ್ಮ ಅಪಾರ್ಟ್ಮೆಂಟ್ ನಲ್ಲಿ ಕಟ್ಟಡ ಕಾರ್ಯ ನಡೀದಿದೆ. ಇಲ್ಲಿ ಸರಿಯಾಗಿ ನಿದ್ರೆ ಮಾಡಲು ಆಗ್ತಿಲ್ಲ. ನಿಮ್ಮ ಸಿನಿಮಾ ಷೋ ಇರೋ ಥಿಯೇಟರಿಗಿಂತ ಪ್ರಶಸ್ತ ಸ್ಥಳ ನಿದ್ರೆಗೆ ಇನ್ನೆಲ್ಲಿದೆ ? ” ಎಂದು ಹಾಸ್ಯಾತ್ಮಕವಾಗಿ ಕುಟುಕಿದ್ದಾನೆ.

ಅದಕ್ಕೆ ಸ್ವರಾ ಕೂಡಾ ಟ್ವೀಟ್ ಮಾಡಿ ಉತ್ತರಿಸಿದ್ದಾಳೆ. ಇದಕ್ಕೆ ಉತ್ತರವಾಗಿ ಸ್ವರಾ ಮೊದಲಿಗೆ ಆತನಿಗೆ ಧನ್ಯವಾದಗಳನ್ನು ತಿಳಿಸಿದ್ದಾಳೆ. ಇದಾದ ನಂತರ, ಪ್ರತಿಕ್ರಿಯೆ ನೀಡಿರುವ ಸ್ವರಾ, ಆಹಾ.. ನಿಮ್ಮ ಹೆಚ್ಚು ಅಭ್ಯಾಸ (ರಿಹರ್ಸಲ್ ) ಮಾಡಿದ ಹಾಸ್ಯವನ್ನು ಪ್ರಸ್ತುತ ಪಡಿಸಲು ನಿಮಗೊಂಡು ಅವಕಾಶ ನೀಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಈಗ ಹೋಗಿ ನಿಮ್ಮ ಗೆಳೆಯರಿಗೆ ನಾನು ಉತ್ತರಿಸಿದೆ ಎಂದು ಷೋ ಆಫ್ ಮಾಡು !” ಎಂದಿದ್ದಾರೆ.
ಸದ್ಯ ಸ್ವರಾ ಅವರ ಟ್ವಿಟ್‌ಗೆ ಹಾಸ್ಯಪರ ಪರ-ವಿರೋಧ ವ್ಯಕ್ತವಾಗುತ್ತಿದೆ. ಅಭಿಮಾನಿಗಳ ಮತ್ತು ಸೆಲೆಬ್ರಿಟಿಗಳ ಇಂತಹಾ ಕೀಟಲೆಯೆ ಹಾಸ್ಯ ಚಟಾಕಿಗಳ ಜುಗಲ್ ಬಂಧಿ ಮಾಧ್ಯಮದವರಿಗೆ ಮತ್ತು ಜನಸಾಮಾನ್ಯರಿಗೆ ಸಕತ್ ಸಬ್ಜೆಕ್ಟ್ ಅನ್ನು ಒದಗಿಸುತ್ತಲೇ ಇರುತ್ತದೆ.

Leave A Reply