ಮತ್ತೆ ಕಿರುತೆರೆಯಲ್ಲಿ ಬರಲಿದೆ “ವೀಕೆಂಡ್ ವಿತ್ ರಮೇಶ್” | ಈ ಬಾರಿ ಸಾಧಕರ ಸೀಟಲ್ಲಿ ರಾರಾಜಿಸುವ ವ್ಯಕ್ತಿಗಳು ಯಾರು ಗೊತ್ತೇ?

ವೀಕೆಂಡ್ ವಿತ್ ರಮೇಶ್ ಪ್ರೋಗ್ರಾಮ್ ಎಂದರೆ ಭಾರೀ ಇಷ್ಟ ಪಡುವ ಅಭಿಮಾನಿಗಳಿದ್ದಾರೆ. ಕೊರೊನಾ ಬಂದ ನಂತರ ನಿಂತು ಹೋದ ಈ ಶೋ ಅನಂತರ ಪ್ರಾರಂಭವಾಗಲಿಲ್ಲ. ಹಿರಿತೆರೆ ಕಿರುತೆರೆ ನಿಧಾನವಾಗಿ ಚೇತರಿಸಿಕೊಳ್ಳುವ  ಸಮಯದಲ್ಲಿ ನಿಂತೇ ಹೋಯಿತು ಎಂದ ಈ ಶೋ ಈಗ ಮತ್ತೆ ಬರಲು ರೆಡಿಯಾಗಿದೆ. ಆದರೆ ಈ ಶೋ ಯಾವಾಗ ಶುರುವಾಗುತ್ತದೆ? ಈ ಸಲ ಅತಿಥಿಗಳಾಗಿ ಯಾರ್ಯಾರು,  ಹೀಗೆ ಸಾವಿರ ಪ್ರಶ್ನೆ ಎಲ್ಲಾ ವೀಕ್ಷಕರಲ್ಲಿ ಮೂಡಬಹುದು. ಯಾಕೆಂದ್ರೆ ವೀಕೆಂಡ್ ವಿತ್ ರಮೇಶ್ ಎನ್ನುವುದು ಕರ್ನಾಟಕದ  ಮನೆ ಮಂದಿಯ ಮನಸ್ಸಿನಲ್ಲಿ ಅಚ್ಚಳಿಯಾಗಿ ಕುಳಿತ ಕಾರ್ಯಕ್ರಮ.

ನಾಡಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಕರೆಸಿ, ಅವರ ಕಷ್ಟ ಸುಖ, ಜೀವನಗಾಥೆ ಬಗ್ಗೆ ನಟ ರಮೇಶ್ ಅರವಿಂದ್ ವೀಕ್ಷಕರಿಗೆ ತಿಳಿಸಿಕೊಡುತ್ತಿದ್ದರು. ಈಗ ಎಲ್ಲರ ಮನಸ್ಸಿನ ಇಂಗಿತದಂತೆ ಮತ್ತೆ ವೀಕೆಂಡ್ ವಿತ್ ರಮೇಶ್ ಶುರುವಾಗಲಿದೆಯಂತೆ. ಹೌದು, ಈ ಬಗ್ಗೆ ಖುದ್ದು ಜೀ ಕನ್ನಡದ ಬ್ಯುಸಿನೆಸ್ ಹೆಡ್  ರಾಘವೇಂದ್ರ ಹುಣಸೂರು ಅವರೇ ಸಣ್ಣ ಸುಳಿವು ನೀಡಿದ್ದಾರೆ. 2014 ರಲ್ಲಿ ‘ವೀಕೆಂಡ್ ವಿತ್ ರಮೇಶ್’ ಮೊದಲ ಸೀಸನ್ ಪ್ರಸಾರ ಕಂಡಿತ್ತು. ಎರಡನೇ ಸೀಸನ್ 2015-16ರಲ್ಲಿ ಮೂರನೇ ಸೀಸನ್ 2017ರಲ್ಲಿ 4ನೇ ಸೀಸನ್ 2019ರಲ್ಲಿ ಪ್ರಸಾರವಾಗಿತ್ತು. 2019ರ ಜುಲೈ ತಿಂಗಳಿನಲ್ಲಿ ‘ವೀಕೆಂಡ್ ವಿತ್ ರಮೇಶ್ 4’ ಕಾರ್ಯಕ್ರಮ ಅಂತ್ಯ ಕಂಡಿತ್ತು. ಇದಾದ ಬಳಿಕ ಹೊಸ ಸೀಸನ್ ಶುರುವಾಗಿಲ್ಲ. ‘ವೀಕೆಂಡ್ ವಿತ್ ರಮೇಶ್’ ಮತ್ತೆ ಯಾವಾಗ ಶುರುವಾಗುತ್ತೆ ಅಂತ ವೀಕ್ಷಕರು ಕೇಳುತ್ತಲೇ ಇದ್ದಾರೆ. ಈಗ ಇದೇ ಪ್ರಶ್ನೆಗೆ ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಸುಳಿವು ಕೊಟ್ಟಿದ್ದಾರೆ. ಇದೀಗ ಐದನೇ ಸೀಸನ್ ಪ್ರಾರಂಭಿಸುವ ಸುಳಿವು ಸಿಕ್ಕಿದೆ.

ರಾಘವೇಂದ್ರ ಹುಣಸೂರು ಅವರ ಫೇಸ್‌ಬುಕ್
ಪೋಸ್ಟ್ : “ವೈಯಕ್ತಿಕವಾಗಿ ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮ ‘ವೀಕೆಂಡ್ ವಿತ್ ರಮೇಶ್’ ಶುರುವಾಗಿ 8 ವರ್ಷಗಳು ಉರುಳಿವೆ. ಕಿರುತೆರೆಯಲ್ಲಿ ಮತ್ತೊಂದು ಸೀಸನ್ ಸಾಧ್ಯವೇ? ಸಾಧಕರ ಸೀಟ್ ಮೇಲೆ ಕೂರಲು ಅರ್ಹತೆ ಇರುವ ಸಾಧಕರನ್ನು ದಯವಿಟ್ಟು ಹೆಸರಿಸಿ..” ಎಂದು ರಾಘವೇಂದ್ರ ಹುಣಸೂರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಒಟಿಟಿಯಲ್ಲಿ ನಾಳೆಯಿಂದ ಪ್ರಾರಂಭವಾಗುತ್ತಿದೆ. ಹೀಗಾಗಿ ಜೀ ಕನ್ನಡದ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳಲು ಹಾಗೂ ಬಿಗ್ ಬಾಸ್‌ಗೆ ಪ್ರತಿಸ್ಪರ್ಧಿಯಾಗಿ ಟಿಆರ್‌ಪಿ ರೇಸ್‌ನಲ್ಲಿ ಪೈಪೋಟಿ ಕೊಡಲು ವೀಕೆಂಡ್ ವಿತ್ ರಮೇಶ್ ಪ್ರಾರಂಭಿಸುವ ಸಾಧ್ಯತೆಗಳು ಹೆಚ್ಚಿವೆ.

ವೀಕೆಂಡ್ ವಿತ್ ರಮೇಶ್ ಮತ್ತೊಮ್ಮೆ ಕಿರುತೆರೆಯಲ್ಲಿ ಬರಲಿದೆ ಎಂಬ ಸಣ್ಣ ಸುಳಿವು ವೀಕ್ಷಕರಿಗೆ ನಿಜಕ್ಕೂ ಖುಷಿ ತಂದಿದೆ ಎಂದೇ ಹೇಳಬಹುದು. ಹಾಗಾಗಿ ವೀಕ್ಷಕರು ತಮ್ಮ ಇಷ್ಟದ ಸಾಧಕರನ್ನು ಈ ಶೋ ಗೆ ಕರೆತರಲು ಈಗಾಗಲೇ ಮನವಿ ಮಾಡಿದ್ದಾರೆ. ಆ ಲಿಸ್ಟ್ ನಲ್ಲಿರುವ ಪ್ರಕಾರ, ಖ್ಯಾತ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ನಾದ ಬ್ರಹ್ಮ ಹಂಸಲೇಖ, ಖ್ಯಾತ ವೈದ್ಯ ಡಾ.ದೇವಿ ಶೆಟ್ಟಿ, ರಂಗಕರ್ಮಿ, ಹಿರಿಯ ನಟಿ ಅರುಂಧತಿ ಶಂಕರ್ ನಾಗ್, ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ, ಮಾಜಿ ಸಿಎಂ, ಹಿರಿಯ ರಾಜಕಾರಣಿ ಬಿ.ಎಸ್.ಯಡಿಯೂರಪ್ಪ, ಸಾಹಿತಿ ದೇವನೂರು ಮಹಾದೇವ, ಪದ್ಮಶ್ರೀ ಮಂಜಮ್ಮ ಜೋಗತಿ, ಹರೆಕಳ ಹಾಜಬ್ಬ, ತುಳಸಿ ಗೌಡ, ಸಾಲು ಮರದ ತಿಮ್ಮಕ್ಕ, ಸುಕ್ರಿಗೌಡ ಸೇರಿದಂತೆ ಹಲವು ಸಾಧಕರ ಹೆಸರನ್ನು ವೀಕ್ಷಕರು ಬರೆದಿದ್ದಾರೆ.

Leave A Reply

Your email address will not be published.