ಸ್ಯಾನಿಟರಿ ಪ್ಯಾಡ್ ಮೇಲೆ ಕೃಷ್ಣ ದೇವರ ಫೋಟೋ|ವಿವಾದ ಸೃಷ್ಟಿಸಿದ ಚಿತ್ರದ ಪೋಸ್ಟರ್

ಸಿನಿಮಾ ರಂಗದಲ್ಲಿ ವಿವಾದಗಳೇ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಕಾಳಿ ಮಾತೆಯ ಕೈಯಲ್ಲಿ ಸಿಗರೇಟ್ ಪೋಸ್ಟರ್ ನೋಡಿ ಅಭಿಮಾನಿಗಳು ಸಿಟ್ಟುಗೊಂಡಿದ್ದರು. ಹಿಂದೂ ದೇವರ ಫೋಟೋವನ್ನು ಎಲ್ಲೆಂದರಲ್ಲಿ ಬೇಕಾಬಿಟ್ಟಿ ಬಳಸುವ ಜನರಿಂದ ಈ ವಿವಾದ ಉಂಟಾಗಿದೆ. ಎಲ್ಲಾ ವಿವಾದ ಮುಗಿಯುವ ಮುನ್ನವೇ ಮತ್ತೊಂದು ಚಿತ್ರದ ಪೋಸ್ಟರ್ ವಿವಾದಕ್ಕೆ ಹುಟ್ಟಿಹಾಕಿದೆ.

ಸಂತೋಷ್ ಉಪದ್ಯಾಯ ನಿರ್ದೇಶನದ ` ಮಾಸೂಮ್ ಸವಾಲ್ ‘ ಪೋಸ್ಟರ್ ಇದೀಗ ಮತ್ತೊಂದು ವಿವಾದ ಶುರು ಮಾಡಿದೆ. ಈ ಚಿತ್ರದ ಪೋಸ್ಟರ್ ನಲ್ಲಿ ಸ್ಯಾನಿಟರಿ ಪ್ಯಾಡ್ ಮೇಲೆ ಭಗವಾನ್ ಕೃಷ್ಣ ಇರುವ ಪೋಸ್ಟರ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ .


Ad Widget

Ad Widget

Ad Widget

Ad Widget

Ad Widget

Ad Widget

ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ರಿಲೀಸ್ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಚಿತ್ರದಲ್ಲಿ ಮುಟ್ಟಿನ ವಿಚಾರದ ಬಗ್ಗೆಯೇ ಸಿನಿಮಾವಿದೆ. ಹಾಗಾಗಿ ಪ್ಯಾಡ್ ತೋರಿಸಬೇಕಿತ್ತು. ಅದಕ್ಕಾಗಿಯೇ ಸಿನಿಮಾ ಪೋಸ್ಟರ್ ನಲ್ಲಿ ಪ್ಯಾಡ್ ಇದೆಯೇ ಹೊರತು ಭಗವಾನ್ ಕೃಷ್ಣ ಇಲ್ಲ ಎಂದು ನಿರ್ದೇಶಕ ಸಂತೋಷ್ ಪ್ರತಿಕ್ರಿಯೇ ನೀಡಿದ್ದಾರೆ . ಪ್ಯಾಡ್ ಮೇಲೆ ಹಿಂದೂ ದೇವರ ಫೋಟೋ ಇರೋದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಕೆಲವರು ಹೇಳಿದ್ದಾರೆ . ಆದರೆ ನಾವು ನೋಡುತ್ತಿರುವ ದೃಷ್ಟಿ ಸರಿಯಲ್ಲ ಅದೇ ತಪ್ಪು ತಿಳುವಳಿಕೆಗೆ ದಾರಿ ಮಾಡಿಕೊಡುತ್ತದೆ ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಕೃತ್ಯಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಸ್ಯಾನಿಟರಿ ಪ್ಯಾಡ್ ಮೇಲೆ ಹಿಂದೂ ದೇವರ ಫೋಟೋವಿರೋದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದು, ಆಗಸ್ಟ್ 5ಕ್ಕೆ ‘ ಮಾಸೂಮ್ ಸವಾಲ್’ ತೆರೆಗೆ ಬರಲಿದೆ.

error: Content is protected !!
Scroll to Top
%d bloggers like this: