RBI ನಿಂದ ಮತ್ತೆ ರೆಪೋ ದರ ಹೆಚ್ಚಳ !!!

ಹಣಕಾಸು ನೀತಿ ಸಮಿತಿಯ ಆಗಸ್ಟ್ 2022 ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ ಎಂಪಿಸಿ) ಸಭೆ ಬುಧವಾರದಿಂದ ಶುಕ್ರವಾರದವರೆಗಿನ ಮೂರು ದಿನಗಳ ಸಭೆಯ ನಂತರ, ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಇಂದು ಬೆಳಿಗ್ಗೆ 10 ಗಂಟೆಗೆ ರೆಪೊ ದರ ಏರಿಕೆಯನ್ನು ಈ ಬಾರಿ ಶೇಕಡಾ 0.50 ರಷ್ಟು ಹೆಚ್ಚಿಸಲು ನಿರ್ಧಾರ ತೆಗೆದುಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ರೆಪೊ ದರವು ಶೇಕಡಾ 1.40 ರಷ್ಟು ಹೆಚ್ಚಾಗಿದೆ. ಇದರ ನೇರ ಪರಿಣಾಮವು ಜನರ ಗೃಹ ಸಾಲದಿಂದ ವೈಯಕ್ತಿಕ ಸಾಲದವರೆಗಿನ ಇಎಂಐಗಳ ಮೇಲೆ ಬೀಳಲಿದೆ.

ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದ ಮೇ ತಿಂಗಳಿನಿಂದ ರೆಪೋ ದರ ಹೆಚ್ಚಳವನ್ನು ಪ್ರಾರಂಭ ಮಾಡಿತು. ರಿಸರ್ವ್ ಬ್ಯಾಂಕ್ ಮೇ ತಿಂಗಳಲ್ಲಿ ಹಣಕಾಸು ನೀತಿ ಸಮಿತಿಯ (ಆರ್ಬಿಐ) ತುರ್ತು ಸಭೆಯನ್ನು ಕರೆದಿತ್ತು. ಮೇ 2022 ರ ಸಭೆಯಲ್ಲಿ, ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಶೇಕಡಾ 0.40 ರಷ್ಟು ಹೆಚ್ಚಿಸಿತ್ತು. ಇದರ ನಂತರ ಜೂನ್ ತಿಂಗಳಲ್ಲಿ ಹಣಕಾಸು ನೀತಿ ಸಮಿತಿಯ ನಿಯಮಿತ ಸಭೆ ನಡೆಯಿತು, ಇದರಲ್ಲಿ ರೆಪೊ ದರವನ್ನು ಶೇಕಡಾ 0.50 ರಷ್ಟು ಹೆಚ್ಚಿಸಲಾಯಿತು.

ಆರ್ ಬಿ ಐ ಎರಡು ವರ್ಷಗಳ ನಂತರ ಮೇ ತಿಂಗಳಲ್ಲಿ ಮೊದಲ ಬಾರಿಗೆ ರೆಪೋ ದರವನ್ನು ಬದಲಾವಣೆ ಮಾಡಿತು. ಎರಡು ವರ್ಷಗಳಿಂದ, ರೆಪೊ ದರ ರಿಸರ್ವ್ ಬ್ಯಾಂಕ್ ಈ ಬಾರಿ ರೆಪೊ ದರವನ್ನು ಶೇಕಡಾ 0.35 ರಿಂದ ಶೇಕಡಾ 0.50 ಕ್ಕೆ ಹೆಚ್ಚಿಸಬಹುದು ಎಂಬ ವಿಶ್ಲೇಷಕರು ಅಂದಾಜಿಸಿದ್ದರು. ಕೇವಲ ಶೇಕಡಾ 4 ರಷ್ಟಿದ್ದ ರೆಪೊ ದರವು ಶೇಕಡಾ 5.40 ಕ್ಕೆ ಏರಿಕೆ ಕಂಡಿದೆ.

ರೆಪೋ ದರ ಎಂದರೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ.

Leave A Reply

Your email address will not be published.