BIG BREAKING NEWS || ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದು ಕೇರಳಿಗರಲ್ಲ, ಸ್ಥಳೀಯರು : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಗೃಹ ಸಚಿವ ಅರಗ ಜ್ಞಾನೇಂದ್ರ

ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರುವಿನಲ್ಲಿ ನಡೆದಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಕುರಿತಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಈವರೆಗೆ ಕೇರಳದಿಂದ ಬಂದ ಹಂತಕರು ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಾಡಿದ್ದು, ಅವರಿಗೆ ಸ್ಥಳೀಯರು ಸಹಾಯ ಮಾಡಿದ್ದಾರೆ ಎಂದು ಭಾವಿಸಲಾಗಿತ್ತಾದರೂ ಆದರೆ ಹತ್ಯೆ ಮಾಡಿದ್ದು ಸ್ಥಳೀಯರೇ ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈ ಕುರಿತಂತೆ ಖಾಸಗಿ ಸುದ್ದಿವಾಹಿನಿಗೆ ನೀಡಿರುವಂತ ಸಂದರ್ಶನದಲ್ಲಿ ಮಾತನಾಡಿರುವಂತ ಅವರು, ಜುಲೈ.26ರಂದು ರಾತ್ರಿ ಪ್ರವೀಣ್ ನೆಟ್ಟಾರು ಕೊಲೆಯಾಗಿತ್ತು. ಬೆಳ್ಳಾರೆ ಗ್ರಾಮದಲ್ಲಿಯೇ ಹತ್ಯೆ ಮಾಡಲಾಗಿದೆ. ಕೊಂದವರು ಕೇರಳದವರು ಎನ್ನಲಾಗಿತ್ತು. ಆದ್ರೇ ಪ್ರವೀಣ್ ನೆಟ್ಟಾರು ಕೊಂದವರು ಸ್ಥಳೀಯರು, ಕೇರಳದವರು ಅಲ್ಲ ಎಂಬುದಾಗಿ ಹೇಳಿದ್ದಾರೆ.
ಅಂದಹಾಗೇ ದಕ್ಷಿಣ ಕನ್ನಡ ಜಿಲ್ಲೆಯ ನೆಟ್ಟಾರುವಿನಲ್ಲಿ ಪ್ರವೀಣ್ ಹತ್ಯೆಯಾದ ಬಳಿಕ, ಬೆಳ್ಳಾರೆಯಲ್ಲಿ ಬಂದ್ ಮಾಡಿ ಹಿಂದೂ ಸಂಘಟನೆಯ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಅನೇಕ ಕಾರ್ಯಕರ್ತರು ಬಿಜೆಪಿ ಸ್ಥಳೀಯ ಸಂಘಟನೆಗಳಿಗೆ ರಾಜೀನಾಮೆ ಕೂಡ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ಇಂದು ಸ್ಪೋಟಕ ಮಾಹಿತಿಯನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಬಿಚ್ಚಿಟ್ಟಿದ್ದಾರೆ.

ಇದೀಗ ಗೃಹ ಸಚಿವರ ಈ ಹೇಳಿಕೆಯ ಬೆನ್ನಲ್ಲೇ, ಯಾರು ಆ ಸ್ಥಳೀಯರು ಎಂಬ ಚರ್ಚೆ ಅನುಮಾನ ಶುರುವಾಗಿದೆ. ಹಾಗಾದರೆ, ಈಗ ಬಂಧಿತರಲ್ಲಿ ಆ ಕೊಲೆಡುಕರು ಇದ್ದಾರಾ, ಅಥವಾ ಅವರನ್ನ ಇನ್ನೂ ಪತ್ತೆ ಹಚ್ಚಿ ಬಂಧಿಸಬೇಕಿದೆಯೇ ಎಂದು ಜನರು ಕೇಳುತ್ತಿದ್ದಾರೆ. ಅದಕ್ಕೆ ಉತ್ತರ ಇವತ್ತಿಗೂ ಸರಿಯಾಗಿ ಸಿಕ್ಕಿಲ್ಲ.

ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಇದೆ, ಘಟನೆ ನಡೆದು 2 ವಾರಗಳು ಆಗುತ್ತಿದೆ. ಇನ್ನೂ ‘ ಇವರೇ ಕೊಲೆ ಮಾಡಿದವರು ‘ ಎಂದು ಆತ್ಮವಿಶ್ವಾಸದಿಂದ ಹೇಳುವಲ್ಲಿ ಪೊಲೀಸ್ ಮತ್ತು ಬಿಜೆಪಿ ಸರ್ಕಾರ ಸಂಪೂರ್ಣ ಸೋತಿದೆ. ಹಾಗಂತ ಬಿಜೆಪಿಗರೆ ಪಬ್ಲಿಕ್ ಆಗಿ ಹೇಳಿಕೊಂಡು ಬರುತ್ತಿದ್ದಾರೆ. ಕೊಲೆ ಮಾಡಿದವರು ಸ್ಥಳೀಯರೇ ಅಂದ್ರೆ ಸಾಕಾ, ಯಾರು ಅಂತ ಹೇಳಬೇಡವೇ? ಸ್ಥಳೀಯರು ಅಂತ ಹೇಳಬೇಕಿದ್ರೆ, ಹತ್ಯೆ ನಡೆಸಿದವರು ಯಾರೆಂದು ಗೊತ್ತಾಗಿರಬೇಕು ಅಲ್ಲವೇ, ಮತ್ಯಾಕ್ ಹತ್ಯೆ ನಡೆಸಿದವರ ಹೆಸರು ಹೇಳ್ತಿಲ್ಲ? ಪ್ರವೀಣ್ ಕುಟುಂಬ ಹತ್ಯೆ ಆದ ದಿನದಿಂದ ಇಂದಿನವರೆಗೂ ನಮ್ಮ ಹುಡುಗನನ್ನು ಕೊಂದದ್ದು ಯಾರು ಎಂದು ನಮಗೆ ಗೊತ್ತಾಗಬೇಕು ಎಂದು ಪೋಲಿಸರಿಗೆ ಮತ್ತು ಸರ್ಕಾರಕ್ಕೆ ಕೇಳಿಕೊಳ್ಳುತ್ತಲೆ ಇದ್ದಾರೆ. ಅವತ್ತು ಪ್ರವೀಣ್ ನೆಟ್ಟಾರ್ ನ ಪತ್ನಿ, ‘ ಆದಷ್ಟು ಬೇಗ ನನ್ನ ಪ್ರವೀಣ್ ನ ಕೊಂದವರು ಯಾರು ಅಂತ ಪತ್ತೆ ಮಾಡಿ ಹೇಳಿ’ ಅಂದಿದ್ದರು. ಆದರೆ ಸರ್ಕಾರ ಇಲ್ಲಿಯವರೆಗೆ ಏನೂ ಮಹತ್ವವಾದ ವಿಷಯವನ್ನು ಹೇಳುವಲ್ಲಿ ವಿಫಲವಾಗಿದೆ. ದೇಶದಾದ್ಯಂತ ಸುದ್ದಿ ಎಬ್ಬಿಸಿದ, ಇಷ್ಟು ದೊಡ್ಡ ಪ್ರಕರಣದಲ್ಲಿ ಕ್ಷಿಪ್ರವಾಗಿ ಫಲಿತಾಂಶ ಕೊಡಲು ಬಿಜೆಪಿ ಸರ್ಕಾರವು ಸಂಪೂರ್ಣ ವಿಫಲ ಆಗಿದೆ. ಇದು ಒಟ್ಟಾರೆ ರಾಜ್ಯದಾದ್ಯಂತ ಪಕ್ಷಾತೀತವಾಗಿ ಕೇಳಿ ಬರುತ್ತಿರುವ ಮಾತು.

ಈ ಹತ್ಯಾ ಕೇಸ್ ಅನ್ನು NIA ಗೆ ವಹಿಸಿಯೇ ವಾರಗಳು ಕಳೆದಿವೆ. ಆದರೆ ನೀವೇ ಗಮನಿಸಿ: ನಿನ್ನೆ ಎಡಿಜಿಪಿ ಅಲೋಕ್ ಕುಮಾರ್ ಅವರ ಮಾತನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಿ. ಅವರು ಕೂಡಾ NIA ಇನ್ನೂ ತನಿಖೆಗೆ ಇಳಿದಿಲ್ಲ ಅನ್ನುವುದನ್ನು ಸೂಕ್ಷ್ಮವಾಗಿ ಮತ್ತು ಅಷ್ಟೇ ಸ್ಪಷ್ಟವಾಗಿ ಹೇಳಿದ್ದಾರೆ. ಈಗ ಇವತ್ತು ಅಮಿತ್ ಷಾ ಬಂದು ಗಡ್ಡ ಸವರಿಕೊಂಡು NIA ಗೆ ಕೊಡುವ ಮಾತಾಡಿದ್ದಾರೆ. ಮೂರನೆಯ ತಾರೀಖಿಗೆ ಗೃಹಸಚಿವಾಲಯದಿಂದ ಪತ್ರ ಹೋಗಿದೆ. ಆ ಪಾತ್ರದಲ್ಲಿ ಬೇರೆ ದಿನಾಂಕ ಪ್ರಿಂಟ್ ಆಗಿಲ್ಲ. ಕೈಯಲ್ಲಿ ಬರೆದು ಹಾಕಿದ್ದಾರೆ. ಅಷ್ಟೆಲ್ಲ ಉದ್ದಕ್ಕೆ ಬೇಡದ್ದು ಬೇಕಾದ್ದನ್ನು ಬರೆಯೋರಿಗೆ ದಿನಾಂಕ ಪ್ರಿಂಟ್ ಮಾಡಲು ಕಷ್ಟವೇ ? ಎಲ್ಲಾ ಓಳು! ಬರಿ ಓಳು !!

ವಾರ ಕಳೆದ ಮೇಲೆ ಕೂಡಾ NIA ತಂಡ ಬೆಲ್ಟ್ ಬಿಗಿಮಾಡಿಕೊಂಡು ಫೀಲ್ಡ್ ಗೆ ಇಳಿದಿಲ್ಲ ಅಂದರೆ ಏನರ್ಥ ? ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ‘ ಸೆಂಟ್ರಲ್ ಸಹಕರಿಸುತ್ತಿಲ್ಲ ‘ ಎಂದು ಎಲ್ಲ ಪಕ್ಷಗಳು ಹೇಳುವ, ಎಲ್ಲಕಾಲಗಳಲ್ಲೂ ಬಳಸಬಹುದಾದ ಸಾಮಾನ್ಯ ಡೈಲಾಗ್ ಅನ್ನು ಹೇಳಿ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಈಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಅದು ಬಿಡಿ, ಎಂಎಲ್ಎ – ಎಂಪಿ – ಮಂತ್ರಿಗಳು-ಉಸ್ತುವಾರಿ ಮಂತ್ರಿ-ರಾಜ್ಯಾಧ್ಯಕ್ಷರು ಎಲ್ಲಾರೂ ದಕ್ಷಿಣಕನ್ನಡದವರೇ ಇದ್ದಾರೆ. ಆದರೆ ಒಂದು ಬೇಯಿಸಿದ ಗೆಣಸಿನ ಸಿಪ್ಪೆ ಕೂಡಾ ಸುಲಿಯಲು ಇವರ ಕೈಲಿ ಆಗುತ್ತಿಲ್ಲ. ಬಿಜೆಪಿ ಕಾರ್ಯಕರ್ತನೆಂಬ ನತದೃಷ್ಟ ಹುಡುಗರು ಇಂಥವರ ಮಾತನ್ನು ನಂಬಿ, ಹೆಗಲಿಗೆ ಕೇಸರಿ ಶಾಲು ಹಾಕ್ಕೊಂಡು ಮನೆ ಮನೆ ಸುತ್ತುತ್ತಾರೆ. nಸುಡು ಬಿಸಿಲಿಗೆ ಅವರ ನೆತ್ತಿ ಬೆಚ್ಚ ಆಗಿ ಅಳಿದುಳಿದ ನಾಲ್ಕು ಕೂದಲು ಉದುರುವುದು ಬಿಟ್ಟು ಅದರಿಂದ ಅವರಿಗೆ ಬೇರೇನೂ ದಕ್ಕುತ್ತಿಲ್ಲ. ಬಿಸಿಲಿಗೆ ಓಡಾಡೋ ಹುಡುಗರಿಗೆ ಒಂದು ಅಗ್ಗದ ಕ್ಯಾಪ್ ಕೂಡಾ ಕೊಡಿಸವ ಯೋಗ್ಯತೆ ಬಿಜೆಪಿಗೆ ಇಲ್ಲ. ಅದರಲ್ಲಿ ಕಾಂಗ್ರೆಸ್ ಎಷ್ಟೋ ಬೆಸ್ಟ್. ಒಂದೊಳ್ಳೆಯ ಊಟ ಮಾಡಿಸಿ ಹುಡುಗರನ್ನು ಕಳಿಸುತ್ತದೆ. ಹಸಿವೆಗೆ ಮತ್ತು ರಕ್ಷಣೆಗೆ ಕೊಡುವ ಯಾವುದೂ ಆಮಿಷವಲ್ಲ, ನಾವೆಲ್ಲ ನೆನಪಿಡಬೇಕು !!

ಕಾರ್ಯಕರ್ತರ ಹೆಗಲಿಗೆ ಹೆಗಲು ಕೊಡಲು ಈಗ ಯಾವುದೇ ಚುನಾವಣೆಗಳು ಇಲ್ಲವಲ್ಲ. ಒಂದುವರ್ಷ ಚುನಾವಣೆಗೆ ಇನ್ನೂ ಇದೆ. ಆಗ ಬಂದಾಗ ನೋಡಿಕೊಳ್ಳುವ : ನಮಗಲ್ಲದೆ ಬೇರೆ ಯಾರಿಗೆ ಇವರು ಓಟು ಕೊಡಲು ಆಗ್ತದೆ. ಏನೇ ಆದ್ರೂ ಕಾಂಗ್ರೆಸ್ ಗೆ ಕೊಡಲ್ಲ. ಬೇರೆ ಯಾವ ಪಕ್ಷಗಳೂ ದಕ್ಷಿಣಕನ್ನಡದಲ್ಲಿ ಜೀವಂತವಿಲ್ಲ. ನಮ್ಮನ್ನು ಬೈಕೊಂಡ್ರೂ ಸರಿ, ನಮಗೇನೇ ಕಾರ್ಯಕರ್ತರು ಮತ್ತವರ ಮನೆಯವರು ಓಟು ಒತ್ತೋದು. ಬಹುಶಃ ಇದು ಬಿಜೆಪಿ ನಾಯಕರುಗಳ ಕಾಂಫಿಡೆನ್ಸ್. ನೆನಪಿರಲಿ, ಎಂತೆಂತಹ ಕಾಂಫಿಡೆನ್ಸ್ ನ ಮಹತ್ತರ ಮಹಲುಗಳನ್ನು ಬುಲ್ಡೋಜ್ ಮಾಡಿ ಹಾಕಿದೆ. ಕೆಲವೇ ದಶಕಗಳ ಹಿಂದಿನ ಮತ-ಇತಿಹಾಸ! ಇದಾಗಲೇ ಕಟ್ಟಡ ಬೀಳಿಸುವ ಕೆಲಸ ಆರಂಭವಾಗಿದೆ. ಗುಪ್ತಗಾಮಿನಿಯಾಗಿ ಗುಟ್ಟುಬಿಟ್ಟು ಕೊಡದ ಅಜ್ಞಾತ ಜನಸಾಮಾನ್ಯ ಎಚ್ಚೆತ್ತುಕೊಳ್ಳುತ್ತಿದ್ದಾನೆ. ಈಗಾಗಲೇ, ಬಿಜೆಪಿಗೆ ಅಲ್ಟರ್’ನೇಟ್ ಏನೆಂಬ ಹುಡುಕಾಟ ಶುರುವಾಗಿದೆ. ಎಚ್ಚರಗೊಳ್ಳಬೇಕಾದವರು ಎದ್ದು ಕೂರಿ, ಪರಿಸ್ಥಿಯ ಲಾಭ ಪಡೆದುಕೊಳ್ಳಬೇಕಾದವರು ತಾಳ್ಮೆಯಿಂದ ಯೋಚಿಸಿ ಹೆಜ್ಜೆಯಿಡಿ. ಅವಕಾಶಗಳು ಹೇರಳ !!

error: Content is protected !!
Scroll to Top
%d bloggers like this: