ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಗಡಿಪಾರು ಪತ್ರ, BJP ಯ ವಿರುದ್ಧ ಹಿಂದೂ ಕಾರ್ಯಕರ್ತರ ಆಕ್ರೋಶ

ಈ ಹಿಂದೆ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಅಲೆಯುತ್ತಿರುವ ವ್ಯಕ್ತಿಗಳಿಗೆ ಗಡಿಪಾರು  ಬೆದರಿಕೆ ಪತ್ರ ರವಾನೆಯಾಗುತ್ತಿದೆ. ಇದರಿಂದ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಯುವಕರಲ್ಲಿ ಆತಂಕ ಮನೆ ಮಾಡಿದ್ದು ಸಿಎಂ ಬಳಿ ಮನವಿ ಮಾಡಿದ್ದಾರೆ. ಗಂಗಾವತಿಯ ಹಿಂದೂ ಹುಡುಗರು ಈಗ ಸಿಎಂ ಬಳಿ ಸಾಗಿದವರು.

ಕರ್ನಾಟಕ ರಾಜ್ಯದಲ್ಲಿ ಈಗ ಬಿಜೆಪಿ ಸರ್ಕಾರವಿದ್ದರೂ ತಮ್ಮ ಮನೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಗಡಿಪಾರು ಮಾಡುವ ಬೆದರಿಕೆ ನೋಟಿಸ್ ತಮ್ಮ ವಿಳಾಸಕ್ಕೆ ಬಂದು ಕೈಸೇರುತ್ತಿರುವುದರಿಂದ ರಾಜ್ಯದ ಬಿಜೆಪಿ ಸರ್ಕಾರ ಹಿಂದೂ ಕಾರ್ಯಕರ್ತರನ್ನು ನೋಡಿಕೊಳ್ಳುತ್ತಿರುವ ಬಗೆಗೆ  ಹಿಂದೂ ಸಂಘಟನೆಯ ಕಾರ್ಯಕರ್ತರಲ್ಲಿ ಆಕ್ರೋಶ ಸ್ಫೋಟಗೊಂಡಿದೆ.

ಕ್ಷುಲ್ಲಕ ಕಾರಣಕ್ಕೆ ನಡೆದ ಗಲಭೆಯಲ್ಲಿ ಎರಡು ಗುಂಪಿನ ಯುವಕರು ಮತ್ತು ಕೆಲ ಹಿಂದೂ ಸಂಘಟನೆಯ ಮುಖಂಡರು, ಬಿಜೆಪಿ ಮುಖಂಡರು, ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಅಂತ್ಯಗೊಳಿಸಲು ರಾಜ್ಯದ ಬಿಜೆಪಿ ಸರ್ಕಾರ ಕಾರ್ಯಕರ್ತರಿಗೆ ಮನವರಿಕೆ ಮಾಡುತ್ತಿದೆ. ತಮ್ಮ ಮೇಲೆ ಇರುವ ಪ್ರಕರಣದ ಖುಲಾಸೆಯಾಗುತ್ತಿದೆ ಎಂದು ಸಂತಸ ಪಡುತ್ತಿರುವ ಯುವಕರಿಗೆ ಈಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೋಟಿಸ್ ಬಂದಿದೆ.

ಇತ್ತೀಚೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಂದಿರುವ ಅರುಣಾಂಗುಗಿರಿ ಗಂಗಾವತಿ ಠಾಣೆ ಸೇರಿದಂತೆ ಜಿಲ್ಲೆಯಲ್ಲಿ ಜೂಜಾಟ, ಇಸ್ಪೀಟ್, ಮಟ್ಕಾ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆ ನಡೆಸುವ ವ್ಯಕ್ತಿಗಳನ್ನು ಗುರುತಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಎರಡು ಮೂರು ಜನರನ್ನು ಗಡಿಪಾರು ಮಾಡಿ ಆದೇಶ ಮಾಡಿದ್ದಾರೆ. ಅವರು ಮುಖ್ಯವಾಗಿ ಸಂಘಟನೆಯ ಹುಡುಗರು ಎನ್ನುವ ಅಂಶ ಮುಖ್ಯವಾದುದು.

ಕಳೆದ 2016 ರಲ್ಲಿ ಹನುಮಮಾಲೆ ಮತ್ತು ಈದ್ ಮಿಲಾದ್ ಸಂದರ್ಭದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಹಿಂದೂ ಮತ್ತು ಮುಸ್ಲಿಂ ಯುವಕರು ಸೇರಿದಂತೆ ಬಿಜೆಪಿ ಮುಖಂಡರು ಮತ್ತು ನೂರಾರು ಜನ ಹಿಂದೂಪರ ಸಂಘಟನೆ ಕಾರ್ಯಕರ್ತರ ವಿರುದ್ಧ ವಿವಿಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸಿಲುಕಿರುವ ಹಿಂದೂ ಮತ್ತು ಮುಸ್ಲಿಂ ಯುವಕರು ಸೌಹಾರ್ದತೆಯಿಂದ ಪ್ರಕರಣದಿಂದ ಹೊರಬರಲು ಸಾಕಷ್ಟು ಹರ ಸಾಹಸ ಮಾಡುತ್ತಿದ್ದಾರಂತೆ, ಆದರೆ ರೆಡ್ ಟೇಪಿಸಂ ಮತ್ತು ನ್ಯಾಯಾಲಯಗಳು ಸರಳ ಪಂಚಾಯ್ತಿ ಗೆ ಅಡ್ಡಿ ಆಗ್ತಿದೆ ಎಂಬ ಅಪಾದನೆ ಇದೆ.

ಈಗ ಜಿಲ್ಲೆಗೆ ಆಗಮಿಸಿರುವ ನೂತನ ಎಸ್‍ಪಿ ಅರುಣಾಂಗು ಗಿರಿ ಅವರು ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳ ಮನೆಗೆ ಗಡಿಪಾರು ಮಾಡುವುದರ ಬಗ್ಗೆ ಆದೇಶದ ಪ್ರತಿಯನ್ನು ಅಂಚೆ ಮೂಲಕ ರವಾನಿಸುತ್ತಿದ್ದಾರೆ. ಇದರಿಂದಾಗಿ ನೂರಾರು ಜನ ಯುವಕರು ಆತಂಕಕ್ಕಿಡಾಗಿದ್ದಾರೆ. ಜೊತೆಗೆ ಇದೇ ತಿಂಗಳು 31 ರಂದು ಗಣೇಶೋತ್ಸವ ಬರುತ್ತಿದ್ದು, ಎಸ್‍ಪಿ ನಮ್ಮನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಎಸ್‍ಪಿ ಅವರ ನೋಟಿಸ್ ಪ್ರತಿಯನ್ನು ಹಿಡಿದು ಹಿಂದುಪರ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರು ಶಾಸಕ, ಸಂಸದರ ಮುಂದೆ ಅಳಲು ತೊಡಿಕೊಳ್ಳುತ್ತಿದ್ದು, ಇತ್ತೀಚಿಗೆ ಅಂಜನಾದ್ರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರ ಮುಂದೆಯೂ ಪೆÇಲೀಸ್ ಇಲಾಖೆಯ ನಡೆಯ ಬಗ್ಗೆ ದೂರು ನೀಡಿದ್ದಾರೆ. ಬಿಜೆಪಿ ಸರ್ಕಾರ ಮತ್ತು ಜಿಲ್ಲಾ ಪೊಲೀಸ್ ಮೌನ ತೋರಿದೆ.

Leave A Reply

Your email address will not be published.