ಮುಸ್ಲಿಂ ವಧುವಿನಿಂದ ಹೊಸ ಸಂಪ್ರದಾಯಕ್ಕೆ ನಾಂದಿ| ದೇವರನಾಡು ಕೇರಳದಲ್ಲಿ ಮಸೀದಿ ಪ್ರವೇಶ ಮಾಡಿದ ವಧು !!!

ಭಾರತದಲ್ಲಿ ಈಗಿನ ಮಹಿಳೆಯರು ತಮ್ಮ ಧರ್ಮಗಳಲ್ಲಿನ ಸಾಂಪ್ರದಾಯಿಕ ಚಿಂತನೆಗಳನ್ನು ಮುರಿಯುವ ಹಾದಿಯಲ್ಲಿದ್ದಾರೆ. ಹೌದು, ಈಗಿನ ಹೆಣ್ಮಕ್ಕಳು ತಮಗೆ ಸರಿ ಎನಿಸಿದ್ದನ್ನು ಯಾವುದೇ ಹಿಂಜರಿಕೆಯಿಲ್ಲದೇ ಹೇಳುತ್ತಿದ್ದಾರೆ ಹಾಗೇ ಮಾಡುತ್ತಿದ್ದಾರೆ. ಎಲ್ಲರಿಗೂ ತಿಳಿದಿರುವ ಹಾಗೇ, ಮುಸ್ಲಿಂ ಮಹಿಳೆಯರಿಗೆ ಇತರೆ ಧರ್ಮದ ಮಹಿಳೆಯರಿಗಿಂತ ಹೆಚ್ಚು ಕಟ್ಟುಪಾಡು, ನಿರ್ಬಂಧಗಳಿರುತ್ತವೆ. ಆ ಸಂಪ್ರದಾಯವನ್ನು ಮುರಿದು ಮುಸ್ಲಿಂ ಮಹಿಳೆಯೊಬ್ಬರು ಗಮನ ಸೆಳೆದಿದ್ದಾರೆ.

ಹೌದು, ಮೊದಲ ಬಾರಿಗೆ ಕೇರಳದ ಮುಸ್ಲಿಂ ವಧು ತನ್ನ ಮದುವೆಯಲ್ಲಿ ವರ, ಆಕೆಯ ತಂದೆ ಮತ್ತು ಎರಡೂ ಕುಟುಂಬಗಳ ಇತರ ಬಂಧುಗ ಳೊಂದಿಗೆ ಮಸೀದಿಯಲ್ಲಿ ಭಾಗವಹಿಸಿ ಸಂಪ್ರದಾಯ ಮುರಿದಿದ್ದಾರೆ. ಆ ಮೂಲಕ ಸಮುದಾಯದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ್ದಾರೆ ಎಂದೇ ಹೇಳಬಹುದು. ಸಾಮಾನ್ಯವಾಗಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಮಸೀದಿಗೆ ಪ್ರವೇಶ ಇರುವುದಿಲ್ಲ. ಮದುವೆ ವೇಳೆ ವರನೊಂದಿಗೆ ವಧು ಅತಿಥಿ ಸತ್ಕಾರ ಸ್ವೀಕರಿಸುವಂತಿಲ್ಲ. ಸಮುದಾಯದಲ್ಲಿ ಹೀಗೆ ಅನೇಕ ಸಂಪ್ರದಾಯಗಳಿವೆ. ಆದರೆ ಕೇರಳದ ವಧು ಈ ಸಂಪ್ರದಾಯವನ್ನು ಮುರಿದಿದ್ದಾರೆ. ಇದಕ್ಕೆ ಆಕೆಯ ತಂದೆಯೂ ಸಾಥ್ ನೀಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ನನ್ನ ಮಗಳು ಬಹಾಜಾಳ ಉಪಸ್ಥಿತಿಯಲ್ಲೇ ಆಕೆಯ ಮದುವೆ ಸಮಾರಂಭವನ್ನು ನೋಡಬೇಕು ಎಂದು ವರನ ಕುಟುಂಬದವರು ಹಾಗೂ ನಾವು ಬಯಸಿದ್ದೆವು ಎಂದು ಪರಕಡವು ಮೂಲದ ಕೆ.ಎಸ್.ಉಮ್ಮರ್ ಹೇಳಿಕೊಂಡಿದ್ದಾರೆ. ಇಸ್ಲಾಂನಲ್ಲಿ ಇಲ್ಲದ ಇಂತಹ ಸಂಪ್ರದಾಯ ವನ್ನು ನಾವು ಧಿಕ್ಕರಿಸುವ ಸಮಯ ಬಂದಿದೆ. ನನ್ನ ಮಗಳು ಸೇರಿದಂತೆ ಇತರೆ ಹೆಣ್ಣುಮಕ್ಕಳು ತಮ್ಮ ಮದುವೆಗೆ ಸಾಕ್ಷಿಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ಉಮ್ಮರ್ ಪ್ರತಿಪಾದಿಸಿದ್ದಾರೆ.

error: Content is protected !!
Scroll to Top
%d bloggers like this: