ಗ್ರೂಪ್ ಅಡ್ಮಿನ್ ಗಳೇ ಗಮನಿಸಿ WhatsApp ನಲ್ಲಿ ಬರಲಿದೆ ಅಚ್ಚರಿಯ ಫೀಚರ್!!!

ಇದೀಗ ವಾಟ್ಸ್ ಆ್ಯಪ್ ಡಿಲೀಟ್ ಮೆಸೇಜ್ ಆಯ್ಕೆಯಲ್ಲಿ ಬದಲಾವಣೆ ತರಲು ಮುಂದಾಗಿದೆ. ಅಂದರೆ ವಾಟ್ಸ್ಆ್ಯಪ್ ಇದೀಗ ಗ್ರೂಪ್ ಅಡ್ಮಿನ್‌ಗಳಿಗೆ ವಿಶೇಷ ಅಧಿಕಾರವೊಂದನ್ನು ನೀಡುವ ಫೀಚರ್ ಅನ್ನು ಪರಿಚಯಿಸುತ್ತಿದೆ.

ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಒಂದಲ್ಲ ಒಂದು ಹೊಸ ಫೀಚರ್ ಗಳನ್ನು ಘೋಷಣೆ ಮಾಡುತ್ತಲೇ ಇರುತ್ತದೆ. ಈಗಾಗಲೇ ಅನೇಕ ನೂತನ ಆಯ್ಕೆಗಳು ಪರೀಕ್ಷಾ ಹಂತದಲ್ಲಿದೆ. ಹೀಗಿರುವಾಗ ಇದೀಗ ವಾಟ್ಸ್ ಆ್ಯಪ್ ಡಿಲೀಟ್ ಮೆಸೇಜ್ ಆಯ್ಕೆಯಲ್ಲಿ ಬದಲಾವಣೆ ತರಲು ಮುಂದಾಗಿದೆ. ಅಂದರೆ ವಾಟ್ಸ್ ಆ್ಯಪ್ ಇದೀಗ ಗ್ರೂಪ್ ಅಡ್ಮಿನ್‌ಗಳಿಗೆ ಅಧಿಕಾರವೊಂದನ್ನು ನೀಡುವ ಫೀಚರ್ ಅನ್ನು ಪರಿಚಯಿಸುತ್ತಿದೆ. ಈ ಹೊಸ ವೈಶಿಷ್ಟ್ಯಗಳು ಶೀಘ್ರದಲ್ಲೇ ಬರಲಿದೆ ಎಂದು ವರದಿಯಾಗಿದೆ. ಈ ನೂತನ ಆಯ್ಕೆಯ ಮೂಲಕ ಗ್ರೂಪ್ ಅಡ್ಮಿನ್‌ಗಳು ಸದಸ್ಯರ ಮೇಲೆ ಹೆಚ್ಚು
ನಿಯಂತ್ರಣ ಸಾಧಿಸಬಹುದು.

ವಾಟ್ಸ್ ಆ್ಯಪ್ ಪರಿಚಯಿಸಲಿರುವ ಹೊಸ ಅಪ್ಡೇಟ್ ನ ಪ್ರಕಾರ ಗ್ರೂಪ್ ಅಡ್ಮಿನ್‌ಗಳು ಗ್ರೂಪ್‌ನಲ್ಲಿ ಬಂದ ಯಾವುದೇ ಮೆಸೇಜ್‌ಗಳನ್ನು ಡಿಲೀಟ್ ಮಾಡುವ ಅಧಿಕಾರ ಹೊಂದಿರುತ್ತಾರೆ. ಇದು ಸ್ಪ್ಯಾಮ್ ಮೆಸೇಜ್ ಅಥವಾ ಅಶ್ಲೀಲ ಸಂಭಾಷಣೆ, ವೀಡಿಯೋ, ಫೋಟೋಗಳನ್ನು ಡಿಲೀಟ್ ಮಾಡಬಹುದು. ಇದರ ಅರ್ಥ, ಗ್ರೂಪ್‌ನಲ್ಲಿ ಬೇರೆ ಯಾರಾದರು ಅನಗತ್ಯ ಮೆಸೇಜ್‌ಗಳನ್ನು ಹಾಕಿದರೆ ಅಡ್ಮಿನ್ ಡಿಲೀಟ್ ಮಾಡಬಹುದಾಗಿದೆ.

ಗ್ರೂಪ್ ಅಡ್ಮಿನ್ ಡಿಲೀಟ್ ಮೆಸೇಜ್ ಆಯ್ಕೆ ಸದ್ಯಕ್ಕೆ ಪರೀಕ್ಷಾ ಹಂತದಲ್ಲಿರುವುದರಿಂದ, ಕೆಲ ಬೇಟಾ ಬಳಕೆದಾರರಿಗೆ ಮಾತ್ರ ಈ ಆಯ್ಕೆ ನೀಡಲಾಗಿದೆ. ಇಲ್ಲಿ ಮೆಸೇಜ್ ಡಿಲೀಟ್ ಆದ ಸಂದರ್ಭ This was removed by an admin ಎಂದು ಬಳಕೆದಾರರಿಗೆ ಕಾಣಿಸುತ್ತದೆ. ಇದನ್ನು ಆಯ್ಕೆ ಮಾಡುವ ಮೂಲಕ ಅಡ್ಮಿನ್ ಮೆಸೇಜ್ ಅನ್ನು ಡಿಲೀಟ್ ಮಾಡಬಹುದು.

ಅಷ್ಟು ಮಾತ್ರವಲ್ಲದೇ, ಚಾಟ್ ಬಾಟ್ ಎಂಬ ಹೊಸ ಆಯ್ಕೆಯನ್ನು ಬಳಕೆದಾರರಿಗೆ ವಾಟ್ಸ್‌ಆ್ಯಪ್‌ ನೀಡಿದೆ. ನೂತನ ಅಪ್ಡೇಟ್ ಬಂದಿದೆ ಎಂದು ತಿಳಿಸಲು ಈ ಹೊಸ ಆಯ್ಕೆ ನೀಡಲಾಗಿದೆ. ಈ ಚಾಟ್‌ಬಾಟ್ ಮೂಲಕ ಯಾವುದೇ ಹೊಸ ಫೀಚರ್ಸ್ ಸೇರ್ಪಡೆಯಾದರೂ ಮೊದಲಿಗೆ ಮಾಹಿತಿ ದೊರೆಯಲಿದೆ. ವಾಟ್ಸಪ್ ನಲ್ಲಿ ಬಿಡುಗಡೆ ಯಾಗಿರುವ ಹೊಸ ಫೀಚರ್ಸ್ ಹಾಗೂ ವಿಶೇಷತೆ, ಜೊತೆಗೆ ಕಾರ್ಯವೈಖರಿ ಈ ಬಗ್ಗೆ ಮಾಹಿತಿಯನ್ನು ಈ ಚಾಟ್‌ಬಾಟ್ ವಾಟ್ಸಪ್ ಬಳಕೆದಾರರಿಗೆ ನೀಡುತ್ತದೆ.

WABetaInfo ಪ್ರಕಾರ ವಾಟ್ಸ್‌ಆ್ಯಪ್‌ನ ಚಾಟ್‌ಬಾಟ್ ಆಯ್ಕೆ ಅಭಿವೃದ್ಧಿಯ ಹಂತದಲ್ಲಿದೆ. ಚಾಟ್‌ಬಾಟ್‌ನ ಸಹಾಯದಿಂದ ಸಂಭಾಷಣೆಯ ಪಟ್ಟಿಯಲ್ಲಿ ಹೊಸ ಫೀಚರ್ಸ್ ಬಗ್ಗೆ ಮೊದಲು ತಿಳಿಯಲು ಉಪಯೋಗವಾಗುತ್ತದೆ. ಅಲ್ಲದೆ ಸಲಹೆಗಳು ಮತ್ತು ತಂತ್ರಗಳನ್ನು ಪಡೆದುಕೊಳ್ಳುತ್ತಾರೆ ಮತ್ತು ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಇದರಲ್ಲಿ ರಿಪ್ಲೈ ಮಾಡುವುದಕ್ಕೆ ಅವಕಾಶವಿಲ್ಲದೆ ಇರುವುದರಿಂದ ಇದರಿಂದ ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಯಾವುದೇ ಬಳಕೆದಾರರಿಗೆ ಈ ಆಯ್ಕೆ ಕಿರಿಕಿರಿ ಎಂದನಿಸಿದರೆ, ಚಾಟ್‌ಬಾಟ್ ಅಕೌಂಟ್ ಅನ್ನು ಬ್ಲಾಕ್ ಮಾಡುವ ಅವಕಾಶವಿದೆ.

Leave A Reply