ಮತ್ತೊಮ್ಮೆ ರೆಪೋ ದರ ಹೆಚ್ಚಳ ; ಸಾಲಗಾರರಲ್ಲಿ ಹೆಚ್ಚಿದ ಬಡ್ಡಿದರ ಏರಿಕೆಯ ಆತಂಕ

ಮುಂಬೈ: ಹಣದುಬ್ಬರ ನಿಯಂತ್ರಣಕ್ಕೆ ಆರ್‌.ಬಿ.ಐ. ಮತ್ತೊಮ್ಮೆ ರೆಪೊ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಮತ್ತಷ್ಟು ತುಟ್ಟಿಯಾಗಲಿದೆ. ಗ್ರಾಹಕರ ಇಎಂಐ ಭಾರ ಇನ್ನಷ್ಟು ಹೆಚ್ಚಳವಾಗಲಿದೆ.

ಬುಧವಾರದಿಂದ ಆರ್.ಬಿ.ಐ. ದ್ವೈಮಾಸಿಕ ಆರ್ಥಿಕ ಪರಾಮರ್ಶೆ ಸಭೆ ಆರಂಭವಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಸಭೆಯಲ್ಲಿ ರೆಪೊ ದರವನ್ನು ಶೇಕಡ 0.35 ರಷ್ಟು ಹೆಚ್ಚಳ ಮಾಡಲು ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಆಗಸ್ಟ್ 5 ರಂದು ರೆಪೊ ದರ ಹೆಚ್ಚಳದ ಘೋಷಣೆ ಮಾಡುವ ಸಾಧ್ಯತೆ ಇದೆ. ಇದರೊಂದಿಗೆ ಸಾಲ ಮತ್ತೆ ದುಬಾರಿಯಾಗಲಿದೆ. ಎಲ್ಲಾ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳವಾಗಲಿದ್ದು, ಇಎಂಐ ದುಬಾರಿಯಾಗಲಿದೆ. ಠೇವಣಿದಾರರಿಗೆ ಅನುಕೂಲವಾಗಲಿದೆ. ಕಳೆದ ಮೇ ನಲ್ಲಿ ಶೇಕಡ 0.40 ಜೂನ್ ನಲ್ಲಿ 0.50 ರಷ್ಟು ರೆಪೊ ದರ ಏರಿಕೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ಎಲ್ಲ ಬ್ಯಾಂಕುಗಳಲ್ಲಿ ಬಡ್ಡಿ ದರ ಏರಿಕೆಯಾಗಿತ್ತು.

ಹಣದುಬ್ಬರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಆರ್‌ಬಿಐ ಕಳೆದ ಎರಡು ಸಭೆಗಳಲ್ಲೂ ಬಡ್ಡಿ ದರವನ್ನು(ರೆಪೊ) ಏರಿಕೆ ಮಾಡಿತ್ತು. ಕಳೆದೆರಡು ಸಲದಿಂದ ಒಟ್ಟು ಶೇ.0.90ರಷ್ಟು ರೆಪೊ ದರ ಹೆಚ್ಚಳವಾಗಿದೆ. ಆ.3ರಿಂದ 5 ರವರೆಗೆ ನಡೆಯಲಿರುವ ಸಭೆಯಲ್ಲಿ ಬಡ್ಡಿದರವನ್ನು ಆರ್‌ಬಿಐ ಮತ್ತೆ ಶೇ.0.35ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಆಗಸ್ಟ್‌ನಲ್ಲಿ ಶೇ.0.35ರಷ್ಟು ಹೆಚ್ಚಾದರೆ ರೆಪೋ ದರ ಶೇ.5.25ಕ್ಕೆ ಹೆಚ್ಚಲಿದೆ.

ಇತ್ತೀಚಿನ ರೆಪೊ ದರ ಏರಿಕೆಯಿಂದ ಬ್ಯಾಂಕ್‌ಗಳಲ್ಲಿ ಬಡ್ಡಿ ದರಗಳು ಶೇ.0.50ರಿಂದ 1ರ ತನಕ ಏರಿಕೆಯಾಗಿವೆ. ಆಗಸ್ಟ್‌ನಲ್ಲಿ ಶೇ.0.35ರಷ್ಟು ಏರಿಕೆಯಾದರೆ, ಬ್ಯಾಂಕ್‌ನ ಬಡ್ಡಿ ದರಗಳಲ್ಲಿ ಕನಿಷ್ಠ ಶೇ.0.25ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

RBI ರೆಪೊ ದರ ಹೆಚ್ಚಳದಿಂದ ಹೋಮ್‌ ಲೋನ್‌ ಮತ್ತು ಕಾರ್ ಲೋನ್‌ನಂತಹ ಸಾಲಗಳ EMI ಹೆಚ್ಚಲಿದೆ. ಏಕೆಂದರೆ ಬ್ಯಾಂಕುಗಳು ಹೆಚ್ಚಿದ ರೆಪೋ ದರದ ಹೊರೆಯನ್ನು ತಾವೇ ಭರಿಸುವ ಬದಲು ಗ್ರಾಹಕರಿಗೆ ವರ್ಗಾಯಿಸುತ್ತವೆ.

ರೆಪೋ ದರ ಹೆಚ್ಚಳ ನಿಮ್ಮ ಉಳಿತಾಯ ಬ್ಯಾಂಕ್ ಖಾತೆ ಮತ್ತು ನಿಶ್ಚಿತ ಠೇವಣಿ (FD) ಮೇಲೂ ಪರಿಣಾಮ ಬೀರುತ್ತದೆ. ಬ್ಯಾಂಕ್‌ಗಳು ಉಳಿತಾಯ ಖಾತೆ ಮತ್ತು ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲಿವೆ.

ರೆಪೋ ದರ ಹೆಚ್ಚಳವು ಹಣದುಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದುಬಾರಿ ಬಡ್ಡಿದರದಿಂದಾಗಿ ಹಣದುಬ್ಬರ ದರವನ್ನು ನಿಯಂತ್ರಿಸಬಹುದು ಎಂದು ರಿಸರ್ವ್ ಬ್ಯಾಂಕ್ ವಿಶ್ವಾಸ ಹೊಂದಿದೆ.

ರೆಪೋ ದರ ಹೆಚ್ಚಳವು ಕೈಗಾರಿಕಾ ಅಭಿವೃದ್ಧಿಯ ಮೇಲೂ ಪರಿಣಾಮ ಬೀರಬಹುದು. ಏಕೆಂದರೆ ಕೈಗಾರಿಕೆಗಳಿಗೂ ಬಡ್ಡಿ ದರ ದುಬಾರಿಯಾಗಲಿದೆ. ಇದೇ ಪರಿಸ್ಥಿತಿ ದೀರ್ಘಕಾಲ ಮುಂದುವರಿದರೆ ಆರ್ಥಿಕ ಬೆಳವಣಿಗೆ ದರದ ಮೇಲೂ ಪರಿಣಾಮ ಬೀರಬಹುದು. ಇದು ಉದ್ಯೋಗ ದರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ, FD ಹೂಡಿಕೆದಾರರು ಹೊಸ FD ಗಳ ಮೇಲೆ ಉತ್ತಮ ಆದಾಯವನ್ನು ನಿರೀಕ್ಷಿಸಬಹುದಾಗಿದೆ.

error: Content is protected !!
Scroll to Top
%d bloggers like this: