ತನ್ನ 10 ತಿಂಗಳ ಪುಟ್ಟ ಮಗುವಿನೊಂದಿಗೆ ನೇಣಿಗೆ ಕೊರಳೊಡ್ಡಿದ ತಾಯಿ | ಪ್ರೀತಿಸಿ ಮದುವೆಯಾದವ ಮಾಡಿದ್ದಾದರೂ ಏನು ?

ತನ್ನ ಪುಟ್ಟ ಹತ್ತು ತಿಂಗಳ ಮಗುವಿನೊಂದಿಗೆ ತಾಯಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. 25 ವರ್ಷದ ಬಿಂದು ಎಂಬ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡಾಕೆ.
ಆತ್ಮಹತ್ಯೆಗೆ ಕುಟುಂಬ ಕಲಹ ಕಾರಣ ಎನ್ನಲಾಗಿದೆ.

ಬಿಂದು ನಾಲ್ಕು ವರ್ಷಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದಳು. ಈ ಮದುವೆಗೆ ಕುಟುಂಬಸ್ಥರ ವಿರೋಧ ಇದ್ದರೂ, ಪ್ರೀತಿಸಿದವನ ಕೈ ಬಿಡಲಿಲ್ಲ ಈಕೆ. ಬಿಂದು ನಾಗಮಂಗಲ ನಿವಾಸಿ ನವೀನ್ ಎಂಬಾತನನ್ನು ಮದುವೆಯಾಗಿದ್ದಳು. ಈ ಜೋಡಿಗೆ ಮುದ್ದಾದ ಮಗುವಿತ್ತು. ಆರಂಭದಲ್ಲಿ ಬಿಂದು-ನವೀನ್ ಪರಸ್ಪರ ಪ್ರೀತಿಯಿಂದ ಸಂಸಾರ ಮಾಡುತ್ತಿದ್ದರು. ಅಷ್ಟೊಂದು ಚೆನ್ನಾಗಿದ್ದ ಅವರ ವೈವಾಹಿಕ ಜೀವನ ದಿನಕಳೆದಂತೆ ಜಗಳ ಪ್ರಾರಂಭವಾದವು. ಆದರೆ, ಪತಿ ಯಾವಾಗ ಸಣ್ಣಪುಟ್ಟ ವಿಚಾರಗಳಿಗೂ ಜಗಳ ತೆಗೆಯಲು ಶುರು ಮಾಡಿದ. ಅನಂತರ ಬಿಂದುಗೆ ದಿನ ಕಳೆಯೋದೇ, ಅಸಹನೀಯವಾಗತೊಡಗಿತು. ಮೊದಲೇ ಕುಟುಂಬಸ್ಥರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದ ಬಿಂದು ಅತ್ತ ಕಡೆ ತವರು ಮನೆಗೆ ವಾಪಸ್ ವಾಪಸ್ ಹೋಗಲು ಆಗದೇ, ಈ ಕಷ್ಟ ಹೇಳಿಕೊಳ್ಳಲು ಕೂಡಾ ಯಾರೂ ಇಲ್ಲ ಎನ್ನುವ ಒಂಟಿ ಭಾವದಿಂದ ಬದುಕುತ್ತಿದ್ದಳು.


Ad Widget

Ad Widget

Ad Widget

Ad Widget

Ad Widget

Ad Widget

ಗಂಡನ ಮನೆಯವರ ಮಾನಸಿಕ ಹಿಂಸೆಯಿಂದಾಗಿ ಬಿಂದು ತೀವ್ರವಾಗಿ ನೊಂದುಕೊಂಡಿದ್ದಳು. ಪತಿ ಜೊತೆಗೆ ಅತ್ತೆ ಮತ್ತು ಇಬ್ಬರು ನಾದಿನಿಯರು ಕೂಡಾ ಸತತವಾಗಿ ಕಿರುಕುಳ ನೀಡಲು ಶುರು ಮಾಡಿದ್ದರು. ಇದಿಷ್ಟು ಸಾಲದೆಂಬಂತೆ, ಪತಿಗೆ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇದೆ ಎಂದು ಗೊತ್ತಾಗಿ ಆಘಾತಕ್ಕೊಳಗಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ಬಿಂದು ಆತ್ಮಹತ್ಯೆ ಮಾಡೋ ಮೊದಲು ಡೆತ್ ನೋಟ್ ಬರೆದಿದ್ದಾಳೆ. ” ನನ್ನ ಸಾವಿಗೆ ಪತಿ, ಅತ್ತೆ ನಾದಿನಿಯರು ಹಾಗೂ ನನ್ನ ಗಂಡ ಅಕ್ರಮ ಸಂಬಂಧ ಹೊಂದಿರುವ ಮಹಿಳೆ ಕಾರಣ ಎಂದು ಬರೆದಿರುವ ಬಿಂದು ಅಪ್ಪ, ಅಮ್ಮ ನಿಮ್ಮನ್ನು ತುಂಬ ನೋಯಿಸಿದ್ದೇನೆ. ಪ್ರೀತಿಸಿ ಮದುವೆಯಾಗುವ ಹುಡುಗಿಯರಿಗೆ ನಾನೇ ಉದಾಹರಣೆಯಾಗಬೇಕು. ನನ್ನನ್ನು ಕ್ಷಮಿಸಿ’ ಎಂದು ಡೆತ್‌ನೋಟ್‌ನಲ್ಲಿ ಬರೆದು ತನ್ನ ಹತ್ತು ತಿಂಗಳ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

error: Content is protected !!
Scroll to Top
%d bloggers like this: