ಗ್ಯಾಂಗ್‌ಸ್ಟರ್‌ಗಳನ್ನೂ ಉಗ್ರರಂತೆ ಪರಿಗಣಿಸಿ ಎನ್ಐಎ ಗೆ ಕೇಂದ್ರದ ಸೂಚನೆ

ದೇಶದ ಹಲವು ಗ್ಯಾಂಗ್‌ಸ್ಟರ್‌ಗಳು, ಪಾಕಿಸ್ತಾನೀ ಉಗ್ರವಾದಿಗಳ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡಿರುವ ವಿಚಾರವನ್ನು ಬಹಿರಂಗಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಸೂಚನೆ ನೀಡಿರುವ ಕೇಂದ್ರ ಸರ್ಕಾರ ಅಂತಹ ಗ್ಯಾಂಗ್‌ಸ್ಟರ್‌ಗಳನ್ನು ಉಗ್ರರಂತೆಯೇ ಪರಿಗಣಿಸುವಂತೆ ಸೂಚಿಸಿದೆ.

ಪಾಕಿಸ್ತಾನದ ಉಗ್ರ ಸಂಘಟನೆಗಳು ಹಾಗೂ ಕೆನಡಾದ ಖಲಿಸ್ತಾನ ಬೆಂಬಲಿತ ಉಗ್ರರ ಜೊತೆಗೆ ದೇಶದ ಗ್ಯಾಂಗ್‌ಸ್ಟರ್‌ಗಳು ನಂಟು ಹೊಂದಿರುವುದು ಮಾತ್ರವಲ್ಲ, ಅವರ ಪರವಾಗಿ, ದೇಶದಲ್ಲಿ ಶಸ್ತ್ರಾಸ್ತ್ರಗಳು, ಮಾದಕ ವಸ್ತುಗಳ ಕಳ್ಳಸಾಗಣೆ, ಉಗ್ರವಾದ ಕೃತ್ಯಕ್ಕೆ ಬೆಂಬಲ ನೀಡುವಂಥ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಎನ್‌ಐಎ ಹೇಳಿದೆ.

ದೇಶದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಗ್ಯಾಂಗ್‌ಸ್ಟರ್‌ಗಳ ನೆಟ್‌ವರ್ಕ್‌ಗಳನ್ನು ಪರಿಶೀಲಿಸಿ, ಅವರ ಎಲ್ಲಾ ವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಅದು ಹೇಳಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

Leave A Reply

Your email address will not be published.