ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ಸಕ್ಕತ್ ಸದ್ದು ಮಾಡುತ್ತಿದೆ. ಜಪಾನ್ ನಲ್ಲಿಯೂ ತೆರೆಕಾಣಲು ಸಿದ್ಧವಾಗುತ್ತಿರುವ ಈ ಚಿತ್ರ ದೇಶಾದ್ಯಂತ ಉತ್ತಮ ಪ್ರದರ್ಶನಗೊಳ್ಳುತ್ತಿದೆ. ಪೈರಸಿ ಕಾಟ ಎದುರಾದರೂ ಕಿಚ್ಚನ ಅಬ್ಬರ ಜೋರಾಗುತ್ತಿದೆ. ಈ ನಡುವೆ ಕೆಲವರು ಚಿತ್ರದ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ಕನ್ನಡದ ನಟಿ ಚೇತನ್ ಅವರು ವಿಕ್ರಾಂತ್ ರೋಣ ಚಿತ್ರದ ವಿರುದ್ಧ ಸಿಡಿದು ಟ್ವೀಟ್ ಮಾಡಿದ್ದು, ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. “ವಿಕ್ರಾಂತ್ ರೋಣ ಚಿತ್ರ ತಾಂತ್ರಿಕವಾಗಿ ಹಾಗೂ ಅಭಿನಯದ ದೃಷ್ಟಿಯಿಂದ ಉತ್ತಮವಾಗಿದೆ. ಆದರೆ, ದಲಿತರನ್ನು ಹಾಗೂ ಬಹುಜನರನ್ನು ದುಷ್ಟರ, ಪೈಶಾಚಿಕರಂತೆ ಬಿಂಬಿಸಿ ಮುಸ್ಲಿಮರನ್ನು ಸ್ಟೀರಿಯೋಟೈಪ್ ಮಾಡಿದ್ದಾರೆ.
ಈ ಸೂಕ್ಷ್ಮವಿಲ್ಲದ ಚಿತ್ರದಿಂದ ನಾನು ನಿರಾಸೆಗೊಂಡಿದ್ದೇನೆ. ಚಲನಚಿತ್ರ ನಿರ್ಮಾಣ ಮಾಡುವವರು ಐತಿಹಾಸಿಕ ಅನ್ಯಾಯಗಳನ್ನು ಸೂಕ್ಷ್ಮವಾಗಿ ಗಮನಿಸದೆ ಕೇವಲ ಲಾಭಕ್ಕಾಗಿ ಜಾತಿ ಧರ್ಮವನ್ನು ತಮ್ಮ ಚಿತ್ರಗಳಲ್ಲಿ ಬಳಸುವುದನ್ನು ನಿಲ್ಲಿಸಬೇಕು” ಎಂದು ತಮ್ಮ ಟ್ವಿಟರ್ ನಲ್ಲಿ ನಟ ಚೇತನ್ ಬರೆದುಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಗೆ ಕಿಚ್ಚನ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಿಚ್ಚನ ಅಭಿಮಾನಿಯೊಬ್ಬ ಚೇತನ್ ಹಾಕಿದ ಪೋಸ್ಟ್ ಗೆ, ನೋಡುಗರ ಮನಸ್ಥಿತಿಯ ಮೇಲೆ ಎಲ್ಲವೂ ನಿಂತಿದೆ. ನೀವು ಆಕ್ಟ್ ಮಾಡಿ ಫೇಮಸ್ ಆಗಿ. ಈ ತರದ ವಿಷಯದಿಂದ ನೀವು ಫೇಮಸ್ ಆಗುವುದು ಬೇಡ ಎಂದು ಕಾಮೆಂಟ್ ಮಾಡಿದ್ದಾರೆ.
You must log in to post a comment.