“ಬಿಗ್ ಬಾಸ್” ಗಾಗಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ ಮನೆಯಲ್ಲೇ ಲಾಕ್” !!! ಯಾಕಾಗಿ ಗೊತ್ತೇ ?

ಕಿರುತೆರೆಯ ಕಿಂಗ್ ಆಫ್ ರಿಯಾಲಿಟಿ ಶೋ ‘ಬಿಗ್ ಬಾಸ್’ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಕಾರ್ಯಕ್ರಮ. ಆದರೆ ಬಿಗ್ ಬಾಸ್ ಎಷ್ಟು ಜನಪ್ರಿಯತೆ ಪಡೆಯುತ್ತದೆಯೋ ಅದರ ಮಾಹಿತಿ ಕೂಡಾ ಅಷ್ಟೇ ತೀವ್ರವಾಗಿ ಜನರಿಗೆ ಗೊತ್ತಾಗಿ ಬಿಡುತ್ತೆ. ಆದರೆ ಈ ಬಾರಿ ಬಿಗ್ ಬಾಸ್ ಈ ಮಾಹಿತಿ ಲೀಕಾಗದಂತೆ ಒಂದು ತಂತ್ರ ಮಾಡಿದ್ದಾರೆ.

ಅದಕ್ಕಾಗಿ ‘ಬಿಗ್ ಬಾಸ್’ಗಾಗಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ 100 ದಿನ ಮನೆಗೆ ತೆರಳುವ ಹಾಗೇ ಇಲ್ಲ. ಹೌದು,ವಬಿಗ್ ಬಾಸ್ ಸ್ಪರ್ಧಿಗಳ ರೀತಿಯಲ್ಲೇ ಅವರು ಮನೆಯಲ್ಲಿ ಲಾಕ್ ಆಗುವ ಮಾಹಿತಿ ಇದೆ.

ಹಿಂದಿ, ಕನ್ನಡ, ತೆಲುಗಿನಲ್ಲಿ ಬಿಗ್ ಬಾಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ತೆಲುಗಿನಲ್ಲಿ ‘ಬಿಗ್ ಬಾಸ್ ಸೀಸನ್ 7’ ಆರಂಭ ಆಗುತ್ತಿದೆ. ಎಲ್ಲರಿಗೂ ತಿಳಿದಿರುವ ಹಾಗೇ ಎಲ್ಲಾ ರಿಯಾಲಿಟಿ ಶೋಗಳಿಗಿಂತ ಬಿಗ್ ಬಾಸ್‌ಗೆ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿ ರಿಯಾಲಿಟಿ ಶೋನಿಂದ ಮಾಹಿತಿ ಲೀಕ್ ಆಗದಂತೆ ನೋಡಿಕೊಳ್ಳಲು ‘ಸ್ಟಾರ್ ಮಾ’ ವಾಹಿನಿ ಹೊಸ ತಂತ್ರದ ಮೊರೆ ಹೋಗಿದೆ. ಈ ಬಾರಿಯ ಶೋನಲ್ಲಿ ವಾಹಿನಿಯವರು ಕೆಲ ಬದಲಾವಣೆಗಳನ್ನು ಮಾಡಿದ್ದಾರೆ. ಈ ಮೂಲಕ ಶತಾಯ ಗತಾಯ ಮಾಹಿತಿ ಲೀಕ್ ಆಗದಂತೆ ನೋಡಿಕೊಳ್ಳುವ ತಯಾರಿಯಲ್ಲಿದ್ದಾರೆ.

ಪ್ರತಿ ಭಾನುವಾರ ‘ಬಿಗ್ ಬಾಸ್’ನಲ್ಲಿ ಪ್ರತಿ ಒಂದು ಎಲಿಮಿನೇಷನ್ ಇರುತ್ತದೆ. ಯಾರು ಮನೆಯಿಂದ ಹೊರ ಹೋಗುತ್ತಾರೆ ಅನ್ನೋ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತದೆ. ಆದರೆ, ಏನೇ ಗೌಪ್ಯತೆ ಮಾಡಿದರೂ ಮಾಹಿತಿ ಮೊದಲೇ ಲೀಕ್ ಆಗುತ್ತಿದೆ. ಎಲಿಮಿನೇಷನ್ ಎಪಿಸೋಡ್ ಮೊದಲೇ ಶೂಟ್ ಆಗುವುದರಿಂದ ಯಾರು ಮನೆಯಿಂದ ಹೊರ ಹೋಗುತ್ತಾರೆ ಅನ್ನೋದು ಒಳಗಿರುವ ಸಿಬ್ಬಂದಿಗಳಿಂದಲೇ ತಿಳಿಯುತ್ತಿದೆ ಎನ್ನಲಾಗಿದೆ. ಎಲಿಮಿನೇಷನ್ ಗುಟ್ಟು ಮೊದಲೇ ರಟ್ಟಾಗುವುದರಿಂದ ವೀಕ್ಷಕರಲ್ಲಿ ಇದ್ದ ಕುತೂಹಲ ತಣಿದು ಹೋಗುತ್ತದೆ. ಈ ರೀತಿ ಆಗದಂತೆ ನೋಡಿಕೊಳ್ಳಲು ‘ಸ್ಟಾರ್ ಮಾ’ ವಾಹಿನಿ ಮುಂದಾಗಿದೆ.

ಹಾಗಾಗಿ ಬಿಗ್ ಬಾಸ್ ಗಾಗಿ ಕೆಲಸ ಮಾಡುವ ಸಿಬ್ಬಂದಿ ಸ್ಪರ್ಧಿಗಳ ರೀತಿಯಲ್ಲೇ ಅವರು ಮನೆಯಲ್ಲಿ ಲಾಕ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಒಂದಷ್ಟು ಪ್ರಮಾಣದ ಲೀಕ್ ತಪ್ಪಿಸಬಹುದು ಎಂಬುದು ವಾಹಿನಿಯ ಆಲೋಚನೆ. ಇದರ ಜತೆಗೆ ಕೊವಿಡ್ ಭಯವೂ ಇದೆ. ಈಗ ತೆಗೆದುಕೊಳ್ಳುತ್ತಿರುವ ಕ್ರಮದಿಂದ ಕೊವಿಡ್ ಅಂಟದಂತೆ ನೋಡಿಕೊಳ್ಳಬಹುದು.

ಅಕ್ಕಿನೇನಿ ನಾಗಾರ್ಜುನ ಅವರು ತೆಲುಗು ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಇತ್ತೀಚೆಗೆ ಅವರು ಈ ಶೋ ಪ್ರೋಮೋ ಶೂಟ್ ಮಾಡಿದ್ದರು. ಅನುಪಮಾ ಸ್ಟುಡಿಯೋಸ್‌ನಲ್ಲಿ ತೆಲುಗು ಬಿಗ್ ಬಾಸ್ ನಡೆಯಲಿದೆ. ಹೊರ ಭಾಗದಿಂದ ಮನೆ ಕಾಣದಂತೆ ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ‘ಕನ್ನಡ ಬಿಗ್ ಬಾಸ್ ಒಟಿಟಿ ಸೀಸನ್ 1’ ಆರಂಭ ಆಗುತ್ತಿದೆ. ಆಗಸ್ಟ್ 6ರಿಂದ ಪ್ರಸಾರ ಕಾಣುತ್ತಿರುವ ಈ ಶೋಗೆ ಸುದೀಪ್ ಸಾರಥ್ಯ ಇದೆ.

Leave A Reply

Your email address will not be published.