‘ನಮ್ಮ ಕ್ಲಿನಿಕ್’​ನಲ್ಲಿ ಭರ್ಜರಿ ಉದ್ಯೋಗವಕಾಶ | ನೇರ ಸಂದರ್ಶನ, ಹೆಚ್ಚಿನ ವಿವರ ಇಲ್ಲಿದೆ

ಕೇಂದ್ರ ಸರಕಾರದ 15 ನೇ ಹಣಕಾಸು ಆಯೋಗದ ಯೋಜನೆಯಡಿಯಲ್ಲಿ ಕರ್ನಾಟಕ ಸರಕಾರದ ಅನುಮೋದನೆಯಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುವ ” ನಮ್ಮ ಕ್ಲಿನಿಕ್” ಗಳಲ್ಲಿ ಕರ್ತವ್ಯ ನಿರ್ವಹಿಸಲು ಈ ಕೆಳಕಂಡ ಹುದ್ದೆಗಳಿಗೆ ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ 01 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ವಾಕ್ ಇನ್ ಆಯ್ಕೆ ಪ್ರಕ್ರಿಯೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

  1. ಹುದ್ದೆ : ವೈದ್ಯಾಧಿಕಾರಿಗಳು – 235 ಹುದ್ದೆಗಳು – ಎಂಬಿಬಿಎಸ್ ಪದವಿ ಮತ್ತು ಕೆ ಎಂ ಸಿ ಕೌನ್ಸಿಲ್ ನೋಂದಾವಣಿ ಹೊಂದಿರಬೇಕು -ವೇತನ ರೂ. 47250
  2. ಶುಶ್ರೂಷಕಿ/ಶ್ರುಶ್ರೂಷಕರು – 235 ಹುದ್ದೆಗಳು – ಬಿ ಎಸ್ ಸಿ/ ಡಿಪ್ಲೋಮಾ ಇನ್ ನರ್ಸಿಂಗ್ ಮತ್ತು ಕೆಎಂಸಿ ಕೌನ್ಸಿಲ್ ನೋಂದಾವಣಿ ಹೊಂದಿರಬೇಕು. ವೇತನ ರೂ. 15,750
  3. ಪ್ರಯೋಗಾಶಾಲಾ ತಂತ್ರಜ್ಞರು – 235 ಹುದ್ದೆಗಳು – ಡಿಪ್ಲೋಮಾ ಇನ್ ಪ್ರಯೋಗಾಶಾಲಾ ತಂತ್ರಜ್ಞಾನ ( ಬಿಎಂ ಎಲ್ ಟಿ) ಮತ್ತು ಕರ್ನಾಟಕ ಸರಕಾರ ಪ್ಯಾರಾಮೆಡಿಕಲ್ ಮಂಡಳಿಯ ನೋಂದಣಿ ಹೊಂದಿರಬೇಕು. ಗಣಕಯಂತ್ರ ಜ್ಞಾನ ಹೊಂದಿರಬೇಕು. ವೇತನ ರೂ.14,609
  4. ನಾಲ್ಕನೇ ದರ್ಜೆ ನೌಕರರು – 235 ಹುದ್ದೆಗಳು – ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ವೇತನ : ರೂ.10,500

ನೇರ ಸಂದರ್ಶನ ದಿನಾಂಕ ಮತ್ತು ಸ್ಥಳ : ನೌಕರರ ಭವನ ಸಭಾಂಗಣ, ಬಿಬಿಎಂಪಿ, ಕೇಂದ್ರ ಕಚೇರಿ, ಎನ್ ಆರ್ ಚೌಕ ದಿನಾಂಕ 10-08-2022 ಮತ್ತು 11-08-2022 ರ ಬೆಳಿಗ್ಗೆ 10.30 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ

ವಯೋಮಿತಿ : ಕನಿಷ್ಠ 18 ವರ್ಷ, ಹಾಗೂ ಈ ಕೆಳಗೆ ನೀಡಿರುವ ವಯೋಮಿತಿ ಮೀರಿರಬಾರದು
ಸಾಮಾನ್ಯ – 35 ವರ್ಷ, 2ಎ, 2 ಬಿ, 3ಎ, 3ಬಿ – 38 ವರ್ಷ, ಪ.ಜಾತಿ,ಪ.ಪಂಗಡ, ವರ್ಗ 1 – 40 ವರ್ಷ

ಕನ್ನಡ ಭಾಷಾ ಜ್ಞಾನದ ಅವಶ್ಯಕತೆ ಕಡ್ಡಾಯವಾಗಿರುತ್ತದೆ.

ಬಿಬಿಎಂಪು ವೆಬ್ಸೈಟ್ ನಲ್ಲಿ ಇರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯೊಂದಿಗೆ ಸಂಬಂಧಿಸಿದ ವಿದ್ಯಾರ್ಹತೆಯ ಮೂಲ ದಾಖಲೆಗಳು, ಒಂದು ಸ್ವಯಂ ದೃಢೀಕೃತ ಜೆರಾಕ್ಸ್ ಪ್ರತಿ ಮತ್ತು 2 ಜೊತೆ ಭಾವಚಿತ್ರದೊಂದಿಗೆ ಮೇಲೆ ಸೂಚಿಸಿರುವ ಸ್ಥಳ ಮತ್ತು ದಿನಾಂಕದಂದು ವಾಕ್ ಇನ್ ಆಯ್ಕೆ ಪ್ರಕ್ರಿಯೆಗೆ ಹಾಜರಾಗಲು ಸೂಚಿಸಲಾಗಿದೆ.

ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ : 080-22975516, ಇಮೇಲ್ ಐಡಿ choph515@gmail.com ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವೆಬ್ಸೈಟ್ www.bbmp.gov.in ನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Leave A Reply

Your email address will not be published.