ಶಿವಸೇನೆಯ ಶಾಸಕನ ಕಾರಿನ ಮೇಲೆ ಕಲ್ಲು ತೂರಾಟ ; ಐವರು ಆರೋಪಿಗಳ ಬಂಧನ

ಪುಣೆ : ಮಾಜಿ ರಾಜ್ಯ ಸಚಿವ ಹಾಗೂ ಶಿವಸೇನೆಯ ಏಕನಾಥ್ ಶಿಂಧೆ ಬಣದ ಶಾಸಕ ಉದಯ್ ಸಮಂತ್ ಅವರ ಕಾರಿನ ಮೇಲೆ ಶಿವಸೈನಿಕರು ಕಲ್ಲು ತೂರಾಟ ನಡೆಸಿ ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಂಗಳವಾರ ಪುಣೆಗೆ ಭೇಟಿ ನೀಡಿದ್ದು, ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜೊತೆಗೆ ಉದಯ್ ಸಾವಂತ್ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಮುಖ್ಯಮಂತ್ರಿಗಳು ಹಾಗೂ ಉದಯ್ ಸಮಂತ್ ಕಟ್ರಾಜ್‌ನಲ್ಲಿರುವ ಶಾಸಕ ತಾನಾಜಿ ಸಾವಂತ್ ಅವರ ಮನೆಗೆ ಹೋಗುತ್ತಿದ್ದಾಗ, ಶಿವಸೈನಿಕರು ಉದಯ್ ಸಾವಂತ್ ಅವರ ಕಾರಿನ ಮೇಲೆ ದಾಳಿ ಮಾಡಿದ್ದು, ಕಾರಿನ ಹಿಂಬದಿಯ ಗಾಜು ಒಡೆದಿದೆ ಎಂದು ತಿಳಿದು ಬಂದಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

.ಪುಣೆಯಲ್ಲಿ ಈ ಘಟನೆ ನಡೆದಿದ್ದು, ಈ ಪ್ರಕರಣ ಸಂಬಂಧ ಪುಣೆಯ ಶಿವಸೇನಾ ಘಟಕದ ಅಧ್ಯಕ್ಷ ಸಂಜಯ್ ಮೋರೆ ಸಹಿತ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಕಾರಿಗೆ ಕಲ್ಲು ಎಸೆದವರು ಹೇಡಿಗಳು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

error: Content is protected !!
Scroll to Top
%d bloggers like this: