ಮಂಗಳೂರು ಪರಿಸರದಲ್ಲಿ ಭೂ ಕಂಪನ; ಜನರಲ್ಲಿ ಆತಂಕ

ಮಂಗಳೂರು: ಒಂದು ಕಡೆ ರಣಭೀಕರ ಮಳೆಯಿಂದ ತತ್ತರಿಸಿ ಹೋದ ಜನರಿಗೆ ಈಗ ನಗರದ ಮೇರಿಹಿಲ್ ಪರಿಸರದಲ್ಲಿ ಬುಧವಾರ ಭೂಮಿ ಕಂಪಿಸಿದ ಅನುಭವವಾಗಿದೆ.

ಇಂದು ಬೆಳಗ್ಗೆ ಸುಮಾರು 10.15ರ ಸುಮಾರಿಗೆ ಇಂದು ಮೇರಿಹಿಲ್ ಪರಿಸರದಲ್ಲಿ ಭೂಮಿ ಕಂಪಿಸಿದೆ ಎನ್ನಲಾಗಿದ್ದು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ವಸತಿ ಸಮುಚ್ಚಯದ ನಿವಾಸಿಗಳು ಹೊರಗೆ ಓಡಿ ಬಂದಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ವಿದ್ಯಾರ್ಥಿಗಳನ್ನು ಶಿಕ್ಷಕರು ಸುರಕ್ಷತೆ ದೃಷ್ಟಿಯಿಂದ ಕೂಡಲೇ ಹೊರಗೆ ಕಳಿಸಿದ್ದಾರೆ. ಕೆಲ ಸಮಯದ ಬಳಿಕ ಎಂದಿನಂತೆ ಪಠ್ಯ ಚಟುವಟಿಕೆಗಳು ಆರಂಭವಾಗಿದೆ. ಕೆಲ ಸ್ಥಳೀಯರು ಭೂ ಕಂಪನದ ಬಗ್ಗೆ ಮಾಹಿತಿ ನೀಡಿದ್ದಾರೆ. ಯಾವುದೇ ಹಾನಿಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಎಲ್ಲರಿಗೂ ತಿಳಿದಿರುವ ಹಾಗೇ ಕೆಲ ದಿನಗಳ ಹಿಂದೆ ಸುಳ್ಯ, ಮಡಿಕೇರಿ ಭಾಗದಲ್ಲಿ ಹಲವು ಬಾರಿ ಭೂಮಿ ಕಂಪಿಸಿತ್ತು. ಈ ಭಯದಲ್ಲೇ ಇರುವ ಜನರಿಗೆ ಇದೀಗ ಮೇರಿಹಿಲ್ ಭಾಗದಲ್ಲೂ ಭೂಮಿ ಕಂಪನದ ಅನುಭವವಾಗಿದ್ದು ಜನರು ನಿಜಕ್ಕೂ ಆತಂಕಗೊಂಡಿದ್ದಾರೆ. ಮಾಡಿದೆ.

error: Content is protected !!
Scroll to Top
%d bloggers like this: