ಕೊಡಗು : ಮತ್ತೆ ಭೂಕಂಪನ, ಗುಡ್ಡ ಕುಸಿತಕ್ಕೆ ನಲುಗಿದ ಜನ

ಕೊಡಗು : ಅತ್ತ ಕಡೆ ಮಂಗಳೂರಿನಲ್ಲಿ ಭೂಕಂಪನದ ಅನುಭವ ಇಂದು ಬೆಳಗ್ಗೆ ಜನರಿಗೆ ಆದರೆ ಇತ್ತ ಕಡೆ ಕೊಡುಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಮತ್ತೆ ಭೂಕಂಪನವಾಗಿದೆ. ಮೊದಲೇ ಹಲವಾರು ಬಾರಿ ಭೂಕಂಪನದಿಂದ ತತ್ತರಿಸಿದ ಜನತೆಗೆ ಈಗ ಮತ್ತೊಮ್ಮೆ ಈ ಅನುಭವ ನಿಜಕ್ಕೂ ಭೀತಿ ತಂದಿದೆ. ಚೆಂಬು ಗ್ರಾಮದಲ್ಲಿ 10ಕ್ಕೂ ಹೆಚ್ಚು ಕಡೆ ಗುಡ್ಡ ಕುಸಿದಿದೆ. ದಬ್ಬಡ್ಕ, ಕೊಪ್ಪ, ನಾಕಲ್‌ಮೊಟ್ಟೆ ಗ್ರಾಮಗಳಲ್ಲಿ ಭೂ ಕಂಪನ ಸಂಭವಿಸಿದೆ. ಕೊಪ್ಪ ಗ್ರಾಮದ ನಿವಾಸಿಯೊಬ್ಬರ ಮನೆಯ ಬಳಿ ಗುಡ್ಡ ಕುಸಿದು ಮನೆ ಮಂದಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಕುಟುಂಬ ಭಯದಲ್ಲೇ ರಾತ್ರಿ ಪೂರ್ತಿ
ಬೆಟ್ಟದಲ್ಲಿ ಕುಳಿತು ರಕ್ಷಣೆ ಪಡೆದಿದ್ದಾರೆ.

ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಆಗಸ್ 2 ರಂದು ಮೇಘಸ್ಫೋಟ ಸಂಭವಿಸಿದೆ. ಸಂಪಾಜೆ ಗ್ರಾಮದಲ್ಲಿ ಹಲವು ಮನೆಗಳು ಮುಳುಗಡೆಯಾಗಿದೆ. ಒಮ್ಮೆಲೇ ಸುರಿದ ಪ್ರವಾಹಕ್ಕೆ ಜನರು ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.

ಅಷ್ಟಕ್ಕೂ ಆಗಿದ್ದಾದರೂ ಏನು? ಕೊಡಗು-ದಕ್ಷಿಣ ಕನ್ನಡ ಗಡಿ ಭಾಗವಾದ ಬೆಟ್ಟವೊಂದರಲ್ಲಿ ದೊಡ್ಡ ಶಬ್ದ ಕೇಳಿದೆ. ಜನ ಶಬ್ದ ಕೇಳಿ ಭಯಗೊಂಡಿದ್ದಾರೆ. ಶಬ್ದ ಕೇಳಿಸಿದ ಬೆನ್ನಲ್ಲೇ ರಸ್ತೆ ಬದಿಯಲ್ಲಿನ ಸಣ್ಣಪುಟ್ಟ ಕೊಲ್ಲಿಗಳು ಹರಿಯಲಾರಂಭಿಸಿದ್ದು, ನೀರಿನ ರಭಸ ಹೆಚ್ಚಾಗಿ ನದಿಯಂತಾಗಿದೆ. ಇದರ ಪರಿಣಾಮವಾಗಿ ನೀರು ತಗ್ಗುಪ್ರದೇಶಗಳಲ್ಲಿನ ಜನಬಿಡ ಪ್ರದೇಶಗಳಿಗೆ ನುಗ್ಗಿದೆ, ಸಂಪಾಜೆ ಜಲಾವೃತಗೊಂಡಿದೆ.

Leave A Reply

Your email address will not be published.