ಕೋಡಿಮಠ ಶ್ರೀಯಿಂದ ಭಯಾನಕ ಭವಿಷ್ಯ | ಶುಭಕೃತ ನಾಮ ಸಂವತ್ಸರದಲ್ಲಿ ಶುಭ ಆಗೋದಿಲ್ಲ !!!

ಹಾರನಹಳ್ಳಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ತಮ್ಮ ಭವಿಷ್ಯ ವಾಣಿಯಿಂದ ಹೆಸರುವಾಸಿಯಾಗಿದ್ದಾರೆ. ಅಷ್ಟು ಮಾತ್ರವಲ್ಲದೇ ಅವರು ಹೇಳಿದ ಭವಿಷ್ಯ ನಿಜವಾಗುತ್ತೆ. ಈಗ ಸ್ವಾಮೀಜಿ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಅರಸೀಕೆರೆ ತಾಲೂಕಿನ ಶ್ರೀಕ್ಷೇತ್ರ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರು ಮಳೆಯ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ.

“ಗುಡುಗು, ಮಿಂಚು, ಗಾಳಿ, ಮಳೆ, ಪ್ರಕೃತಿ ಅಲ್ಲೋಲ ಕಲ್ಲೋಲ ಆಗುತ್ತದೆ. ಬಯಲು ಸೀಮೆ ಮಲೆನಾಡಾಗುತ್ತದೆ, ಮಲೆನಾಡು ಬಯಲು ಸೀಮೆಯನ್ನು ಬಯಸುತ್ತದೆ. ಮೇಘಘರ್ಜಿಸುತ್ತದೆ. ಭೂಮಿ ತಲ್ಲಣಗೊಂಡೀತು. ರೋಗ ರುಜಿನಗಳ ಹೆಚ್ಚಳ, ಕಳ್ಳಕಾಕರ ಕಾಟ, ಅಪಮೃತ್ಯಗಳು, ಕೊಲೆಗಳು, ಮತೀಯ ಗಲಭೆಗಳು ಹೆಚ್ಚಾಗಿ ಅಂತರಾಷ್ಟ್ರೀಯ ವಿಕೋಪಕ್ಕೆ ತುತ್ತಾಗುತ್ತದೆ. ರಾಜಕೀಯದಲ್ಲಿ ಕಲಹಗಳಾಗುತ್ತವೆ, ಗುಂಪುಗಳಾಗುತ್ತವೆ. ಮಳೆ ಬರುತ್ತೆ, ಬೆಳೆ ಸಿಕ್ಕಲ್ಲ; ಬೆಳೆ ಬರುತ್ತೆ ಮಳೆ ತಿಂದಾಕುತ್ತದೆ. ಭೂಮಿ ಕಂಪಿಸುತ್ತೆ, ಗುಡ್ಡಗಳು ಕುಸಿಯುತ್ತವೆ. ಕೆರೆ ಕಟ್ಟೆಗಳು ಒಡೆದು ಹೋಗುತ್ತವೆ. ಇದು ಈ ಸಂವತ್ಸರದ ಕಡೆಯವರೆಗೂ ಇರುತ್ತೆ. ಮುಂಗಾರು ಮಳೆ ಕಳೆದ ಮೇಲೆ, ಹಿಂಗಾರು ಕಡಿಮೆಯಾಗುತ್ತದೆ. ಆದರೆ ಅಕಾಲಿಕ ಮಳೆಗಳು ಹೆಚ್ಚಾಗುತ್ತವೆ.

ಜನ ತಲ್ಲಣಗೊಳ್ಳುತ್ತಾರೆ, ಈ ತಿಂಗಳವರೆಗೂ ಕಾದುನೋಡಿ. ಶುಭಕೃತ ನಾಮ ಸಂವತ್ಸರದಲ್ಲಿ ಶುಭ ಆಗೋದಿಲ್ಲ. ಗಾಳಿ, ಮಳೆ, ವೃಕ್ಷಗಳು ಮರಿದು ಬೀಳುತ್ತವೆ. ವಿಪರೀತ ಮಿಂಚು ಗಾಳಿಯಾಗುತ್ತದೆ, ಸಾವು-ನೋವು ಹೆಚ್ಚಾಗುತ್ತದೆ, ಜಲಾಶಯಗಳು ತುಂಬಿ ಹರಿಯುತ್ತವೆ. ಕಾರ್ತೀಕ ಆಶ್ವೇಜದಲ್ಲಿ ರಾಷ್ಟ್ರ ರಾಜ್ಯಮಟ್ಟದ ಗೊಂದಲಗಳು, ಸಾವು ನೋವುಗಳು ಆಗುವ ಲಕ್ಷಣ ಬಹಳ ಇದೆ. ಕೆಲವು ಕಡೆ ಮಳೆ ಕಮ್ಮಿಆದರೆ ಸಾಕು, ಆದರೆ ಕೆಲವು ಕಡೆ ಮಳೆ ಬೇಕು ಅಂತಾರೆ ಎಂದು ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

Leave A Reply

Your email address will not be published.